2 ಕೊರಿಂಥದವರಿಗೆ 1:8 - ದೆವಾಚಿ ಖರಿ ಖಬರ್8 ಭಾವಾನು ಅನಿ ಭೆನಿಯಾನು ಅಮಿ ಅಸ್ಸಿಯಾ ಮನ್ತಲ್ಯಾ ಪ್ರಾಂತ್ಯಾತ್ ಸೊಸಲ್ಲ್ಯಾ ತರಾಸಾಂಚ್ಯಾ ವಿಶಯಾತ್ ತುಮ್ಕಾ ಗೊತ್ತ್ ರ್‍ಹಾವ್ಚೆ ಮನುನ್ ಮಾಜಿ ಆಶಾ, ಅಮ್ಕಾ ಸೊಸುಕ್ ಹೊಯ್ನಾ ತವ್ಡ್ಯಾ ಕಸ್ಟಾತ್ ಅಮಿ ಸಿರಕಲ್ಲಾವ್, ಸಾಂಗುಚೆ ಜಾಲ್ಯಾರ್ ಅಮಿ ಹುರ್‍ತಾವ್ ಮನ್ತಲೊ ಬರೊಸೊಚ್ ನತ್ತೊ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಸಹೋದರರೇ, ಆಸ್ಯ ಸೀಮೆಯಲ್ಲಿ ನಾವು ಅನುಭವಿಸಿದ ಕಷ್ಟ-ಸಂಕಟಗಳು ನಿಮಗೆ ತಿಳಿದಿರಲಿ ಎಂದು ನಾನು ಬಯಸುತ್ತೇನೆ. ಅಲ್ಲಿ ನಮ್ಮ ಶಕ್ತಿಗೆ ಮೀರಿದಂಥ ತೊಂದರೆಗಳನ್ನು ಅನುಭವಿಸಿ ನಾವು ಕುಗ್ಗಿಹೋಗಿ ಬದುಕುವ ನಿರೀಕ್ಷೆಯೇ ಇಲ್ಲವಾದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಸಹೋದರರೇ, ಏಷ್ಯಾ ಪ್ರಾಂತ್ಯದಲ್ಲಿ ನಮಗೊದಗಿದ ಹಿಂಸೆಬಾಧೆಗಳು ನಿಮಗೆ ತಿಳಿದಿವೆಯಷ್ಟೆ. ಅಲ್ಲಿ ಸಹಿಸಲಸಾಧ್ಯವಾದಷ್ಟು ಸಂಕಟವನ್ನು ಅನುಭವಿಸಬೇಕಾಯಿತು. ನಾವು ಬದುಕುವ ಆಶೆಯನ್ನೇ ಬಿಡಬೇಕಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಸಹೋದರರೇ, ಆಸ್ಯ ಸೀಮೆಯಲ್ಲಿ ನಮಗೆ ಸಂಭವಿಸಿದ ಸಂಕಟವನ್ನು ಕುರಿತು ವಿಚಾರಿಸುತ್ತೀರೋ ಅದರಲ್ಲಿ ನಾವು ಬಲವನ್ನು ಮೀರಿದಂಥ ಅತ್ಯಧಿಕವಾದ ಭಾರದಿಂದ ಕುಗ್ಗಿಹೋಗಿ ಜೀವವುಳಿಯುವ ಮಾರ್ಗವನ್ನು ಕಾಣದವರಾದೆವೆಂಬದನ್ನು ನೀವು ತಿಳಿಯಬೇಕೆಂದು ಅಪೇಕ್ಷಿಸುತ್ತೇನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಸಹೋದರ ಸಹೋದರಿಯರೇ, ನಾವು ಏಷ್ಯಾ ಪ್ರಾಂತ್ಯದಲ್ಲಿ ಅನುಭವಿಸಿದ ಸಂಕಟದ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. ಅಲ್ಲಿ ನಮಗೆ ಅಪಾರವಾದ ಭಾರಗಳಿದ್ದವು. ಆ ಭಾರಗಳು ನಮ್ಮ ಸ್ವಂತ ಶಕ್ತಿಗಿಂತಲೂ ಅಧಿಕವಾಗಿದ್ದವು. ಜೀವಸಹಿತ ಉಳಿಯುತ್ತೇವೆ ಎಂಬ ನಿರೀಕ್ಷೆಯನ್ನು ಸಹ ನಾವು ಬಿಟ್ಟುಕೊಟ್ಟೆವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಪ್ರಿಯರೇ, ನಾವು ಏಷ್ಯಾ ಪ್ರಾಂತದಲ್ಲಿ ಅನುಭವಿಸಿದ ಕಷ್ಟ ಸಂಕಟಗಳ ಬಗ್ಗೆ ನೀವು ತಿಳಿಯಬೇಕೆಂದು ಬಯಸುತ್ತೇವೆ. ನಾವು ಸಹಿಸುವುದಕ್ಕೆ ಬಹುಕಷ್ಟಕರವಾದ ಒತ್ತಡಗಳು ನಮಗೆ ಬಂದೊದಗಿದಾಗ, ಅವು ನಮ್ಮ ಪ್ರಾಣಕ್ಕೂ ಅಪಾಯಕಾರಿ ಎಂದೆನಿಸಿತು. ಅಧ್ಯಾಯವನ್ನು ನೋಡಿ |