1 ತಿಮೊಥೆಯನಿಗೆ 1:7 - ದೆವಾಚಿ ಖರಿ ಖಬರ್7 ತೆಂಚ್ಯಾ ದೆವಾಚ್ಯಾ ನೆಮಾಂಚಿ ಮಾಸ್ತರಾ ಹೊತಲಿ ಆಶಾ ಹಾಯ್ ಅನಿ ತೆನಿ ಮಾಸ್ತರಾ ಹೊವ್ಕ್ ಬಿ ಬಗ್ತ್ಯಾತ್ , ಖರೆ ತೆನಿ ಅಪ್ನಿ ಗೊಸ್ಟಿಯಾ ಅಪ್ನಿಚ್ ಸಮ್ಜುನ್ ಘೆಯ್‌ನ್ಯಾತ್, ನಾ ತರ್ ಖಲ್ಯಾ ವಿಶಯಾಸಾಟ್ನಿ ತೆನಿ ಮೊಟ್ಯಾ ವಿಶ್ವಾಸಾನ್ ಸಾಂಗುನ್ ಘೆತಾತ್ ತೆ ಬಿ ತೆನಿ ಸಮ್ಜುನ್ ಘೆಯ್‌ನ್ಯಾತ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಅವರು ಧರ್ಮೋಪದೇಶಕರಾಗಬೇಕೆಂದು ಬಯಸುತ್ತಿದ್ದರೂ ತಾವು ಹೇಳುವುದಾಗಲಿ, ತಾವು ದೃಢವಾಗಿ ಮಾತನಾಡುವ ವಿಷಯವಾಗಲಿ ಇಂಥದೆಂದು ತಿಳಿಯದವರಾಗಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ತಮ್ಮ ಮಾತಿನ ಅರ್ಥವಾಗಲಿ, ತಮ್ಮ ವಾದದ ತಿರುಳಾಗಲಿ ಅವರಿಗೆ ತಿಳಿಯದಿದ್ದರೂ ಅವರು ಧರ್ಮೋಪದೇಶಕರಾಗಲು ಹವಣಿಸುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಅವರು ಧರ್ಮೋಪದೇಶಕರಾಗಿರಬೇಕೆಂದಿದ್ದರೂ ತಾವು ಹೇಳುವದಾಗಲಿ ತಾವು ದೃಢವಾಗಿ ಮಾತಾಡುವ ವಿಷಯವಾಗಲಿ ಇಂಥದೆಂದು ತಿಳಿಯದವರಾಗಿದ್ದಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ತಾವು ಧರ್ಮೋಪದೇಶಕರಾಗಬೇಕೆಂಬುದು ಅವರ ಅಪೇಕ್ಷೆ. ಆದರೆ ತಾವು ಏನು ಮಾತಾಡುತ್ತಿದ್ದೇವೆ ಎಂಬುದೇ ಅವರಿಗೆ ತಿಳಿದಿಲ್ಲ. ತಮಗೆ ಖಚಿತವಾಗಿ ತಿಳಿದಿದೆ ಎಂದು ತಾವು ಹೇಳುವ ಸಂಗತಿಗಳನ್ನೂ ಅವರು ಅರ್ಥಮಾಡಿಕೊಳ್ಳುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಅವರು ನಿಯಮದ ಬೋಧಕರಾಗಿರಲು ಬಯಸಿದರೂ ತಾವು ಹೇಳುವುದನ್ನಾಗಲಿ, ತಾವು ಸ್ಥಾಪಿಸುವುದನ್ನಾಗಲಿ ಏನೆಂದು ದೃಢನಿಶ್ಚಯವಿಲ್ಲದವರಾಗಿದ್ದಾರೆ. ಅಧ್ಯಾಯವನ್ನು ನೋಡಿ |