1 ಕೊರಿಂಥದವರಿಗೆ 9:17 - ದೆವಾಚಿ ಖರಿ ಖಬರ್17 ಮಾಜ್ಯಾ ಸ್ವಂತ್ ಖುಶಿನ್ ಮಿಯಾ ಹೆ ಕಾಮ್ ಕರ್‍ತಾ ಹೊಲ್ಯಾರ್ ಮಾಕಾ ಕಾಯ್ಬಿ ಗಾವ್ತಾ ಮನುನ್ ಆಶಾ ಕರುಕ್ ಹೊಯ್ ಹೊತ್ತೆ, ಖರೆ ಮಿಯಾ ತೆ ಎಕ್ ಕರ್ತವ್ಯ್ ಮನುನ್ ಕರ್ತಾ, ಮಾಕಾ ದೆವಾನ್ ದಿಲ್ಲೆ ಕಾಮ್ ಹೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ನಾನು ಸ್ವಂತ ಇಷ್ಟದಿಂದ ಈ ಕೆಲಸವನ್ನು ಮಾಡಿದರೆ ನನಗೆ ಪ್ರತಿಫಲ ದೊರೆಯುವುದು; ಇಲ್ಲದಿದ್ದರೂ ಈ ಕರ್ತವ್ಯ ನನ್ನ ವಶಕ್ಕೆ ಒಪ್ಪಿಸಿಕೊಡಲ್ಪಟ್ಟಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ನಾನು ಸ್ವಂತ ಇಷ್ಟದಿಂದ ಈ ಕಾರ್ಯವನ್ನು ಕೈಗೊಂಡಿದ್ದರೆ ತಕ್ಕ ಸಂಭಾವನೆ ಇರುತ್ತಿತ್ತು. ಆದರೆ ಈ ಕರ್ತವ್ಯವನ್ನು ನನಗೆ ವಹಿಸಲಾಗಿದೆ. ಆದ್ದರಿಂದ ಕರ್ತವ್ಯಬದ್ಧನಾಗಿ ಮಾಡುತ್ತಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ನಾನು ಸ್ವಂತ ಇಷ್ಟದಿಂದ ಈ ಕೆಲಸವನ್ನು ಮಾಡಿದರೆ ನನಗೆ ಬಹುಮಾನ ದೊರೆಯುವದು; ಮತ್ತೊಬ್ಬನ ಇಷ್ಟದಿಂದ ಮಾಡಿದರೆ ಮನೆವಾರ್ತೆಯು ನನ್ನ ವಶಕ್ಕೆ ಕೊಡಲ್ಪಟ್ಟಿದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ನಾನು ನನ್ನ ಸ್ವಂತ ಇಷ್ಟದಿಂದ ಸುವಾರ್ತೆಯನ್ನು ಬೋಧಿಸುವುದಾಗಿದ್ದರೆ, ಬಹುಮಾನಕ್ಕೆ ಅರ್ಹನಾಗಿದ್ದೇನೆ. ಆದರೆ ಬೇರೊಂದನ್ನು ಆರಿಸಿಕೊಳ್ಳಲು ನನಗೆ ಅವಕಾಶವೇ ಇಲ್ಲ. ನಾನು ಸುವಾರ್ತೆಯನ್ನು ಸಾರಲೇಬೇಕು. ಇದು ನನಗೆ ಕೊಡಲ್ಪಟ್ಟಿರುವ ಕರ್ತವ್ಯವಷ್ಟೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ನಾನು ಇಷ್ಟಪೂರ್ವಕವಾಗಿ ಸುವಾರ್ತೆ ಸಾರಿದರೆ, ನನಗೆ ಬಹುಮಾನವಿರುವುದು. ಇಷ್ಟವಿಲ್ಲದೆ ಮಾಡಿದರೆ, ನನ್ನ ವಶಕ್ಕೆ ಒಪ್ಪಿಸಲಾದ ಕಾರ್ಯಭಾರವನ್ನು ನಾನು ನೆರವೇರಿಸಿದಂತಾಗುತ್ತದೆ. ಅಧ್ಯಾಯವನ್ನು ನೋಡಿ |