1 ಕೊರಿಂಥದವರಿಗೆ 8:8 - ದೆವಾಚಿ ಖರಿ ಖಬರ್8 ಖಾನಾಚ್ಯಾ ವೈನಾ ಅಮಿ ದೆವಾಕ್ ಪಸಂದ್ ಅಸಲ್ಲೆ ಹೊಯ್ನಾವ್, ಕಶ್ಯಾಕ್ ಮಟ್ಲ್ಯಾರ್ ಖಾಯ್ನಸಲ್ಲ್ಯಾ ವೈನಾ ಅಮ್ಕಾ ಕಾಯ್ಬಿ ಲುಕ್ಷಾನ್ ನಾ ಅನಿ ಖಾಲ್ಲ್ಯಾ ವೈನಾ ಕಾಯ್ ಫಾಯ್ದೊಬಿ ನಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಆದರೆ ನಾವು ತಿನ್ನುವ ಆಹಾರವು ದೇವರನ್ನು ಮೆಚ್ಚಿಸುವುದಿಲ್ಲ. ತಿನ್ನದಿರುವುದರಿಂದ ನಷ್ಟವೂ ಇಲ್ಲ, ತಿನ್ನುವುದರಿಂದ ಲಾಭವೂ ಇಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ನಾವು ತಿನ್ನುವ ಆಹಾರ ನಮ್ಮನ್ನು ದೇವರ ಸನ್ನಿಧಿಗೆ ಸೇರಿಸಲಾರದು. ಅದನ್ನು ತಿನ್ನದಿರುವುದರಿಂದ ನಮಗೆ ನಷ್ಟವಿಲ್ಲ, ತಿಂದರೆ ಲಾಭವಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಆದರೆ ಆಹಾರವು ನಮ್ಮನ್ನು ದೇವರ ಸನ್ನಿಧಿಗೆ ಸೇರಿಸಲಾಗದು. ತಿನ್ನದಿದ್ದರೆ ನಮಗೆ ಕಡಿಮೆಯಿಲ್ಲ, ತಿಂದರೆ ನಮಗೆ ಹೆಚ್ಚಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಆದರೆ ಆಹಾರವು ನಮ್ಮನ್ನು ದೇವರ ಸಮೀಪಕ್ಕೆ ತರಲಾರದು. ನಾವು ಮಾಂಸವನ್ನು ತಿನ್ನದಿದ್ದರೆ, ನಮ್ಮ ಮೇಲೆ ದೇವರಿಗಿರುವ ಮೆಚ್ಚುಗೆಯು ಕಡಿಮೆಯೇನೂ ಆಗುವುದಿಲ್ಲ. ಅದೇ ರೀತಿ, ಮಾಂಸವನ್ನು ತಿಂದರೆ, ನಮ್ಮ ಮೇಲೆ ದೇವರಿಗಿರುವ ಮೆಚ್ಚುಗೆಯು ಹೆಚ್ಚೇನೂ ಆಗುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಆದರೆ ಆಹಾರವು ನಮ್ಮನ್ನು ದೇವರ ಸಮೀಪಕ್ಕೆ ಸೇರಿಸಲಾರದು. ಅದನ್ನು ತಿನ್ನದಿದ್ದರೆ ನಮಗೆ ನಷ್ಟವಿಲ್ಲ, ತಿಂದರೆ ನಮಗೆ ಲಾಭವಿಲ್ಲ. ಅಧ್ಯಾಯವನ್ನು ನೋಡಿ |