1 ಕೊರಿಂಥದವರಿಗೆ 7:39 - ದೆವಾಚಿ ಖರಿ ಖಬರ್39 ಎಕ್ ಬಾಯ್ಕೊಮನುಸ್ ಅಪ್ನಾಚೊ ಘೊವ್ ಝಿತ್ತೊ ರ್‍ಹಾಯ್ ಪತರ್ ತೆನಿ ಭಾಂದಲ್ಲ್ಯಾ ಸಾರ್ಕಿ ಮನುಕ್ ಹೊತಾ; ಖರೆ ತಿ ಘೊವ್ ಮರ್ಲೊ ತರ್ ಅಪ್ನಾಚ್ಯಾ ಮನಾಕ್ ಯೆಲ್ಲ್ಯಾ ಕಡೆ ಲಗಿನ್ ಹೊತಲೊ ಸ್ವತಂತ್ರ್ ತಿಕಾ ಹಾಯ್. ಖರೆ ತೊ ಧನಿಯಾಚೊ ಎಕ್ ವಿಶ್ವಾಸಿ ಹೊವ್ನ್ ರ್‍ಹಾವ್ಚೊ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201939 ಮುತೈದೆಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ. ಗಂಡನು ಮರಣಹೊಂದಿದ್ದರೆ ಆಕೆಯು ಬೇಕಾದವನನ್ನು ಮದುವೆಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಕರ್ತನಲ್ಲಿ ವಿಶ್ವಾಸಿಯಾದವನನ್ನು ಮಾತ್ರ ಆಗಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)39 ಪತಿ ಬದುಕಿರುವವರೆಗೂ ಸತಿ ಅವನಿಗೆ ಬಂಧಿತಳು. ಅವನು ಸತ್ತರೆ ತಾನು ಇಷ್ಟಪಟ್ಟವನನ್ನು ಮತ್ತೆ ಮದುವೆ ಆಗಲು ಸ್ವತಂತ್ರಳು. ಆದರೆ ಅವನು ಕ್ರೈಸ್ತವಿಶ್ವಾಸಿಯಾಗಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)39 ಮುತ್ತೈದೆಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ; ಗಂಡನು ಸತ್ತಿದ್ದರೆ ಆಕೆಯು ಬೇಕಾದವನನ್ನು ಮದುವೆ ಮಾಡಿಕೊಳ್ಳುವದಕ್ಕೆ ಸ್ವತಂತ್ರಳಾಗಿದ್ದಾಳೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್39 ಗಂಡನು ಬದುಕಿರುವ ತನಕ ಹೆಂಡತಿಯು ಅವನೊಂದಿಗೆ ಬಾಳ್ವೆ ನಡೆಸಬೇಕು. ಆದರೆ ಗಂಡನು ಸತ್ತುಹೋದರೆ, ಆ ಸ್ತ್ರೀಯು ತಾನು ಬಯಸಿದವರನ್ನು ಮದುವೆಯಾಗಲು ಸ್ವತಂತ್ರಳಾಗಿದ್ದಾಳೆ. ಆದರೆ ಅವನು ಪ್ರಭುವನ್ನು ಅನುಸರಿಸುವವನಾಗಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ39 ಹೆಂಡತಿಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ. ಗಂಡನು ಸತ್ತಿದ್ದರೆ, ಆಕೆಯು ತನಗೆ ಬೇಕಾದವನನ್ನು ಮದುವೆ ಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಆ ವ್ಯಕ್ತಿಯು ಕರ್ತ ದೇವರಲ್ಲಿ ವಿಶ್ವಾಸಿಯಾಗಿರಬೇಕು. ಅಧ್ಯಾಯವನ್ನು ನೋಡಿ |