Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 2:9 - ದೆವಾಚಿ ಖರಿ ಖಬರ್

9 ತೆಚೆಸಾಟ್ನಿ ಪವಿತ್ರ್ ಪುಸ್ತಕಾತ್ ಲಿವಲ್ಲ್ಯಾ ಸಾರ್ಕೆ, “ಡೊಳ್ಯಾನಿ ಬಗುಕ್‍ನ್ಯಾತ್, ಕಾನಾನಿ ಆಯ್ಕುಕನಾತ್, ಅನಿ ಮಾನ್ಸಾಚ್ಯಾ ಮನಾತ್ ಕಾಯ್ಬಿ ಗುಸುಕ್ ನಾ, ಸಗ್ಳೆ ದೆವಾನ್ ತಯಾರ್ ಕರುನ್ ಥವಲ್ಲೆ ಹಾಯ್ ಮನುನ್ ಅಪ್ನಾಚೊ ಪ್ರೆಮ್ ಕರ್‍ತಲ್ಯಾಂಚ್ಯಾಸಾಟಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆದರೆ ದೇವರ ವಾಕ್ಯಗಳಲ್ಲಿ ಬರೆದಿರುವ ಪ್ರಕಾರ, “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಪವಿತ್ರಗ್ರಂಥದಲ್ಲಿ ಹೇಳಿರುವಂತೆ : “ಕಣ್ಣಾವುದೂ ಕಂಡಿಲ್ಲ, ಕಿವಿಯಾವುದೂ ಕೇಳಿಲ್ಲ. ಮನುಜಕಲ್ಪನೆಗೂ ಎಟುಕಲಿಲ್ಲ. ಅಂಥ ಅತಿಶಯಗಳನ್ನು ಸಜ್ಜುಗೊಳಿಸಿರುವನು, ತನ್ನನೊಲಿದವರಿಗೆ ಪರಮದೇವನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆದರೆ ಬರೆದಿರುವ ಪ್ರಕಾರ - ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಪವಿತ್ರಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು: “ದೇವರು ತನ್ನನ್ನು ಪ್ರೀತಿಸುವ ಜನರಿಗೆ ಸಿದ್ಧಪಡಿಸಿರುವುದನ್ನು ಯಾವ ಕಣ್ಣೂ ಕಾಣಲಿಲ್ಲ. ಯಾವ ಕಿವಿಯೂ ಕೇಳಲಿಲ್ಲ. ಯಾವ ವ್ಯಕ್ತಿಯೂ ಊಹಿಸಿಕೊಳ್ಳಲಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ: “ದೇವರು ತಮ್ಮನ್ನು ಪ್ರೀತಿಸುವವರಿಗಾಗಿ ಸಿದ್ಧ ಮಾಡಿರುವಂಥದ್ದನ್ನು ಯಾವ ಕಣ್ಣೂ ಕಾಣಲಿಲ್ಲ, ಯಾವ ಕಿವಿಯೂ ಕೇಳಲಿಲ್ಲ, ಅದು ಮನುಷ್ಯನ ಹೃದಯದಲ್ಲಿಯೂ ಹುಟ್ಟಲಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 2:9
12 ತಿಳಿವುಗಳ ಹೋಲಿಕೆ  

ಪರಿಕ್ಷಾ ಸೊಸುನ್ ಘೆತಲೊ ಮಾನುಸ್ ಧನ್ಯ್, ತೊ ಪರಿಕ್ಷಾ ಸೊಸುನ್ ಘೆಟಲ್ಲ್ಯಾ ಮಾನಾ ಧನಿಯಾನ್ ಅಪ್ನಾಚ್ಯಾ ಪ್ರೆಮಾಚ್ಯಾ ಲೊಕಾಕ್ನಿ ದಿಲ್ಲೊ ಜಿವನಾಚೊ ಮುಕುಟ್ ಅಪ್ನಾಚೊ ಕರುನ್ ಘೆತಾ.


ಅಪ್ನಾಚೊ ಪ್ರೆಮ್ ಕರ್‍ತಲ್ಯಾಕ್ನಿ ಮಟ್ಲ್ಯಾರ್, ಜೆ ಕೊನಾಕ್ ಅಪ್ನಾಚ್ಯಾ ಉದ್ದೆಸಾ ಸಾಟ್ನಿ ಬಲ್ವುಲ್ಯಾನಾಯ್ ತೆಂಕಾ ದೆವ್ ಸಗ್ಳೆ ಬರೆಚ್ ಕರ್‍ತಾ ಮನುನ್ ಅಮ್ಕಾ ಗೊತ್ತ್ ಹಾಯ್.


ಮಾಜ್ಯಾ ಭಾವಾನು ಅನಿ ಭೆನಿಯಾನು ದೆವಾನ್ ಹ್ಯಾ ಜಗಾತ್ ಹ್ಯಾ ಗರಿಬಾಕ್ನಿ ವಿಶ್ವಾಸಾತ್ ಸಾವ್ಕಾರ್ ಹೊವ್ಕ್ ಸಾಟ್ನಿ ಅನಿ ಅಪ್ನಾಚೊ ಪ್ರೆಮ್ ಕರ್ತಲ್ಯಾಚ್ಯಾ ಸಾಟ್ನಿ ತೆನಿ ಗೊಸ್ಟ್ ದಿವ್ನ್ ಸಾಂಗಲ್ಲ್ಯಾ ರಾಜಾಚೊ ವಾರಿಸ್ದಾರ್ ಹೊವ್ಕ್ ಸಾಟ್ನಿ ಮನುನ್ ತೆನಿ ತೆಂಕಾ ಎಚುನ್ ಕಾಡಲ್ಲೆ ಹಾಯ್ ನ್ಹಯ್?


ಖರೆ ತೆನಿ ಸರ್ಗ್ ಮನ್ತಲ್ಯಾ ಬರ್‍ಯಾ ದೆಶ್ಯಾಕ್ ಆಸ್ಯಾ ಕರ್‍ತಲಿ ಲೊಕಾ ತಸೆ ಹೊವ್ನ್, ತೆಂಚೊ ದೆವ್ ವಿಶ್ವಾಸಾನ್ ಅಪ್ನಾಚ್ಯಾ ಲೆಕಾಕ್ ಭೆಟ್ವುನ್ ದಿವ್ಕ್ ಲಾಗಲ್ಲೊ, ತೆಕಾ ಗೊಸ್ಟ್ ದಿವ್ನ್ ಹೊಲ್ಲಿ ಹೊತ್ತ್ಯೆ ಹೊಲ್ಯಾರ್ಬಿ ಅಪ್ನಾಚ್ಯಾ ಎಕ್ಲ್ಯಾಚ್ ಲೆಕಾಕ್ ಬಲಿ ಕರುನ್ ದಿವ್ಕ್ ತೊ ತಯಾರ್ ಹೊತ್ತೊ.


ತನ್ನಾ ರಾಜಾ ಅಪ್ನಾಚ್ಯಾ ಉಜ್ವ್ಯಾ ಬಾಜುಕ್ ಹೊತ್ತ್ಯಾಕ್ನಿ,ಮಾಜ್ಯಾ ಬಾಬಾಚೊ ಆಶಿರ್ವಾದ್ ಹೊತ್ತ್ಯಾನು ಯೆವಾ! ಜಗ್ ರಚುಚ್ಯಾ ಅದ್ದಿಚ್ಯಾನ್ ತುಮ್ಚ್ಯಾಸಾಟ್ನಿ ತಯಾರ್ ಕರುನ್ ಥವಲ್ಲೊ ರಾಜ್ ತುಮ್ಚಿ ಆಸ್ತಿ ಕರುನ್ ಘೆವಾ.


ದೆವಾನ್ ಅಮ್ಚೊ ಅದ್ದಿ ಪ್ರೆಮ್ ಕರಲ್ಲ್ಯಾಸಾಟಿಚ್ ಅಮಿಬಿ ತೆಕಾ ಪ್ರೆಮ್ ಕರ್ತಾಂವ್.


ದೆವಾನ್ ಹ್ಯಾ ಜಗಾಚೊ ಕವ್ಡೊ ಪ್ರೆಮ್ ಕರ್ಲ್ಯಾನ್ ಕಾಯ್ ಮಟ್ಲ್ಯಾರ್ ಅಪ್ನಾಚ್ಯಾ ಎಕ್ಲ್ಯಾಚ್ ಎಕ್ಲ್ಯಾ ಲೆಕಾಕ್ ತೆನಿ ಜಗಾಸಾಟ್ನಿ ದಿಲ್ಯಾನ್. ಅನಿ ತ್ಯೆಚ್ಯಾ ವರ್ತಿ ವಿಶ್ವಾಸ್ ಕರಲ್ಲೆ ಕೊನ್ಬಿ ನಾಸ್ ಹೊವ್ಚೆ ನ್ಹಯ್, ತೆಂಕಾ ಕನ್ನಾಬಿ ಮರಾನ್ ನಸಲ್ಲೆ ಜಿವನ್ ಗಾವುಚೆ ಮನುನ್ ತೆನಿ ದಿಲ್ಯಾನ್.


ತೆಂಚೆಸಾಟ್ನಿ ನ್ಹಯ್, ತುಮ್ಚ್ಯಾಸಾಟ್ನಿ ತೆಂಕಾ ಪ್ರವಾದ್ ಕರುನ್ ಸಾಂಗ್ತಲೆ ಕಾಮ್ ದಿಲ್ಲೆ ಹಾಯ್ ಮನುನ್ ದೆವಾನ್ ಪ್ರವಾದ್ಯಾಕ್ನಿ ಕಳ್ವುನ್ ದಿಲ್ಲ್ಯಾನ್. ತೆನಿ ಸಾಂಗಟಲ್ಲ್ಯಾ ತ್ಯಾಚ್ ಸಂಗ್ತಿಯಾ ಅತ್ತಾ ಸರ್ಗಾ ವೈನಾ ಯೆಲ್ಲ್ಯಾ ಪವಿತ್ರ್ ಆತ್ಮ್ಯಾಚ್ಯಾ ತಾಕ್ತಿನ್ ತುಮ್ಕಾ ಬರಿ ಖಬರ್ ಪರ್ಗಟ್ ಕರಲ್ಲೆ ತುಮ್ಕಾ ಕಳ್ವುಲ್ಯಾನಿ, ತೆ ಸಗ್ಳ್ಯೆ ದಿಸುನ್ ಯೆತಲೆ ಬಗುಕ್ ದೆವಾಚಿ ದುತಾ ಸಯ್ತ್ ರಾಕುನ್ ಹಾತ್.


ತನ್ನಾ ಜೆಜುನ್ ತೆಂಕಾ,“ ತುಮಿ ಮಿಯಾ ಫಿತಲ್ಯಾ ಕಸ್ಟಾಚ್ಯಾ ಆಯ್ದಾನಾತ್ಲೆ ತುಮಿ ಫಿತ್ಯಾಶಿ ತೆ ಖರೆ ಹಾಯ್. ಖರೆ ಕೊನ್ ಮಾಜ್ಯಾ ಉಜ್ವ್ಯಾಬಾಜುಕ್ ಅನಿ ರೊಡ್ಡ್ಯಾ ಬಾಜುಕ್ ಬಸ್ತಲೆ ಮನುನ್ ಎಚುನ್ ಕಾಡ್ತಲೊ ಅದಿಕಾರ್ ಮಾಕಾ ನಾ. ಜೆ ಕೊನಾಕ್ ತೊ ಜಾಗೊ ಮಾಜ್ಯಾ ಬಾಬಾನ್ ತಯಾರ್ ಕರುನ್ ಥವ್ಲ್ಯಾನಾಯ್ ತೆಂಕಾ ತೊ ಗಾವ್ತಾ.” ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು