1 ಕೊರಿಂಥದವರಿಗೆ 14:21 - ದೆವಾಚಿ ಖರಿ ಖಬರ್21 ಪವಿತ್ರ್ ಖಾಯ್ದ್ಯಾಚ್ಯಾ ಪುಸ್ತಕಾತ್ ಲಿವಲ್ಲೆ ಹಾಯ್, “ದುಸ್ರ್ಯಾ ಬಾಶಾತ್ನಿ ಬೊಲ್ತಲ್ಯಾ ಲೊಕಾಂಚ್ಯಾ ಹೊಟ್ಟಾನಿ ಮಿಯಾ ಹ್ಯಾ ಲೊಕಾಂಚ್ಯಾಕ್ಡೆ ಬೊಲ್ತಾ; ಜಾಲ್ಯಾರ್ಬಿ ತೆನಿ ಮಾಕಾ ಆಯ್ಕಿನಾತ್.” ಮನ್ತಾ ಧನಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 “ಅನ್ಯಭಾಷೆಯವರ ಮೂಲಕವಾಗಿಯೂ ಅನ್ಯದೇಶಸ್ಥರ ಬಾಯಿಂದಲೂ ನಾನು ಈ ಜನರ ಸಂಗಡ ಮಾತನಾಡುವೆನು; ಆದರೂ ಅವರು ನನ್ನ ಮಾತಿಗೆ ಕಿವಿಗೊಡುವುದಿಲ್ಲವೆಂದು ಕರ್ತನು ಹೇಳುತ್ತಾನೆಂಬುದಾಗಿ” ಧರ್ಮಶಾಸ್ತ್ರದಲ್ಲಿ ಬರೆದಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಪವಿತ್ರಗ್ರಂಥದಲ್ಲಿ ಇಂತಿದೆ: ಅನ್ಯಭಾಷೆಯವರ ಮುಖಾಂತರ ಅನ್ಯದೇಶೀಯರ ಬಾಯ ಮುಖಾಂತರ ನಾನೆನ್ನ ಜನರೊಡನೆ ಮಾತಾಡಿದಾಗಲೂ ಎನ್ನ ಮಾತಿಗೆ ಕಿವಿಗೊಡರವರು, ಎಂದರು ಪ್ರಭು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಅನ್ಯಭಾಷೆಯವರ ಮೂಲಕವಾಗಿಯೂ ಪರದೇಶಸ್ಥರ ನಾಲಿಗೆಯಿಂದಲೂ ನಾನು ಈ ಜನರ ಸಂಗಡ ಮಾತಾಡುವೆನು; ಆದರೂ ಅವರು ನನ್ನ ಮಾತಿಗೆ ಕಿವಿಕೊಡುವದಿಲ್ಲವೆಂದು ಕರ್ತನು ಹೇಳುತ್ತಾನೆಂಬದಾಗಿ ಧರ್ಮಶಾಸ್ತ್ರದಲ್ಲಿ ಬರೆದದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ: “ವಿವಿಧ ಭಾಷೆಗಳನ್ನು ಮಾತಾಡುವವರ ಮೂಲಕವೂ ವಿದೇಶಿಯರ ನಾಲಿಗೆಯ ಮೂಲಕವೂ ನಾನು ಈ ಜನರೊಂದಿಗೆ ಮಾತಾಡುವೆನು; ಆದರೂ ಇವರು ನನಗೆ ವಿಧೇಯರಾಗುವುದಿಲ್ಲ.” ಪ್ರಭುವು ಹೇಳುವುದು ಅದನ್ನೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 “ಬೇರೆಭಾಷೆಯವರ ಮೂಲಕವಾಗಿಯೂ ವಿದೇಶದವರ ತುಟಿಗಳಿಂದಲೂ ನಾನು ಈ ಜನರೊಡನೆ ಮಾತಾಡುವೆನು, ಆದರೂ ಅವರು ನನಗೆ ಕಿವಿಗೊಡುವುದಿಲ್ಲವೆಂದು ಕರ್ತದೇವರು ಹೇಳುತ್ತಾರೆ,” ಎಂದು ನಿಯಮದಲ್ಲಿ ಬರೆದಿದೆ. ಅಧ್ಯಾಯವನ್ನು ನೋಡಿ |