Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 34 - ಪರಿಶುದ್ದ ಬೈಬಲ್‌


ಕಾನಾನಿನ ಮೇರೆಗಳು

1 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:

2 “ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸಬೇಕು: ನೀವು ಕಾನಾನ್ ದೇಶವನ್ನು ಪ್ರವೇಶಿಸಿದಾಗ, ಇಡೀ ಕಾನಾನ್ ದೇಶವನ್ನು ಅದರ ಗಡಿಗಳೊಡನೆ ನಿಮಗೆ ಸ್ವಾಸ್ತ್ಯವಾಗಿ ಕೊಡಲಾಗುವುದು.

3 ದಕ್ಷಿಣಭಾಗವು ಎದೋಮಿನ ಗಡಿಯಲ್ಲಿರುವ ಚಿನ್ ಮರುಭೂಮಿಯನ್ನು ಒಳಗೊಂಡಿದೆ. ಪೂರ್ವದ ಕಡೆಯಿರುವ ದಕ್ಷಿಣ ಗಡಿಯು ಉಪ್ಪುಸಮುದ್ರದ ದಕ್ಷಿಣಭಾಗದಿಂದ ಆರಂಭವಾಗುತ್ತದೆ.

4 ಅಲ್ಲಿಂದ ಅದು ಅಕ್ರಬ್ಬೀಮ್ ಕಣಿವೆಗೆ ತಿರುಗಿಕೊಂಡು ಚಿನಿಗೆ ಮುಂದುವರಿಯುವುದು. ಅದರ ಪರಿಮಿತಿ ದಕ್ಷಿಣ ಕಾದೇಶ್ ಬರ್ನೇಯಾ. ಅಲ್ಲಿಂದ ಅದು ಹಚರದ್ದಾರ್‌ಗೆ ಹೋಗಿ ಅಚ್ಮೋನಿಗೆ ಮುಂದುವರಿಯುತ್ತದೆ.

5 ಗಡಿಯು ಅಚ್ಮೋನಿನಿಂದ ಈಜಿಪ್ಟಿನ ನದಿಯ ಕಡೆಗೆ ತಿರುಗಿಕೊಂಡು ಸಮುದ್ರವನ್ನು ಸೇರುವುದು.

6 ಪಶ್ಚಿಮದಿಕ್ಕಿನಲ್ಲಿ ಮೆಡಿಟೆರೇನಿಯನ್ ಸಮುದ್ರದ ತೀರ ನಿಮ್ಮ ದೇಶದ ಮೇರೆಯಾಗಿರುವುದು.

7 ಉತ್ತರದಿಕ್ಕಿನ ಮೇರೆ ಮೆಡಿಟೆರೇನಿಯನ್ ಸಮುದ್ರದಿಂದ ಹಿಡಿದು ಲೆಬನೋನಿನಲ್ಲಿರುವ ಹೋರ್ ಬೆಟ್ಟದವರೆಗೂ ಇರುವುದು.

8 ಹೋರ್ ಬೆಟ್ಟದಿಂದ ಅದು ಲೆಬೊಹಮಾತಿಗೆ ಹೋಗಿ ಅಲ್ಲಿಂದ ಚೆದಾದಿಗೆ ಹೋಗುವುದು.

9 ಬಳಿಕ ಆ ಮೇರೆಯು ಜಿಫ್ರೋನಿಗೆ ಹೋಗಿ ಹಚರೇನಾನಿನಲ್ಲಿ ಮುಗಿಯುವುದು. ಹೀಗೆ ಅದು ನಿಮ್ಮ ಉತ್ತರ ಮೇರೆಯಾಗಿರುವುದು.

10 ನಿಮ್ಮ ಪೂರ್ವದಿಕ್ಕಿನಲ್ಲಿರುವ ಮೇರೆಯು ಹಚರೇನಾನಿನಿಂದ ಹೊರಟು ಶೆಫಾಮಿಗೆ ಹೋಗುವುದು.

11 ಶೆಫಾಮಿನಿಂದ ಆ ಮೇರೆಯು ಆಯಿನಿನ ಪೂರ್ವದಲ್ಲಿರುವ ರಿಬ್ಲಕ್ಕೆ ಹೋಗಿ ಗಲಿಲೇಯ ಸರೋವರದ ಪೂರ್ವದಲ್ಲಿರುವ ಬೆಟ್ಟಗಳನ್ನು ಮುಟ್ಟುವುದು.

12 ಬಳಿಕ ಈ ಮೇರೆಯು ಜೋರ್ಡನ್ ನದಿಯ ಉದ್ದಕ್ಕೂ ಮುಂದುವರೆಯುವುದು. ಅದು ಉಪ್ಪು ಸಮುದ್ರದಲ್ಲಿ ಕೊನೆಗೊಳ್ಳುವುದು. ಇವುಗಳೇ ನಿಮ್ಮ ದೇಶದ ಸುತ್ತಲಿನ ಮೇರೆಗಳು.”

13 ಮೋಶೆಯು ಇಸ್ರೇಲರಿಗೆ ಹೀಗೆ ಆಜ್ಞಾಪಿಸಿದನು: “ನೀವು ಚೀಟುಹಾಕಿ ಭಾಗಮಾಡಿಕೊಳ್ಳುವ ದೇಶವೇ ಇದು. ಒಂಭತ್ತುವರೆ ಕುಲಗಳವರಿಗೆ ಈ ದೇಶವನ್ನು ಕೊಡಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ.

14-15 ಬೇರೆ ಎರಡೂವರೆ ಕುಲಗಳವರು ಅಂದರೆ ರೂಬೇನ್ ಕುಲ ಮತ್ತು ಗಾದ್ ಕುಲ ಮತ್ತು ಮನಸ್ಸೆಯ ಅರ್ಧಕುಲವು ಜೆರಿಕೊ ಪಟ್ಟಣದ ಆಚೆಯಲ್ಲಿರುವ ಜೋರ್ಡನ್ ನದಿಯ ಪೂರ್ವಭಾಗದಲ್ಲಿ ಈಗಾಗಲೇ ಸ್ವಾಸ್ತ್ಯವನ್ನು ಹೊಂದಿ ತಮ್ಮ ಕುಟುಂಬಗಳ ಪ್ರಕಾರ ಹಂಚಿಕೊಂಡಿದ್ದಾರೆ.”

16 ಆಗ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ:

17 “ನಿಮಗೋಸ್ಕರ ದೇಶವನ್ನು ಹಂಚಿಕೊಡುವ ಕುಲಪ್ರಧಾನರು ಯಾರೆಂದರೆ: ಮಹಾಯಾಜಕನಾದ ಎಲ್ಲಾಜಾರ್, ನೂನನ ಮಗನಾದ ಯೆಹೋಶುವ

18 ಮತ್ತು ಪ್ರತಿಯೊಂದು ಕುಲದಿಂದ ಒಬ್ಬ ಕುಲಪ್ರಧಾನ.

19 ಪ್ರತಿಯೊಂದು ಕುಲದಿಂದ ನೀವು ನೇಮಿಸಬೇಕಾದವರು ಇವರೇ: ಯೆಹೂದ ಕುಲದಿಂದ ಯೆಫುನ್ನೆಯ ಮಗನಾದ ಕಾಲೇಬ್.

20 ಸಿಮೆಯೋನ್ ಕುಲದಿಂದ ಅಮ್ಮೀಹೂದನ ಮಗನಾದ ಶೆಮೂವೇಲ್.

21 ಬೆನ್ಯಾಮೀನ್ ಕುಲದಿಂದ ಕಿಸ್ಲೋನನ ಮಗನಾದ ಎಲೀದಾದ್.

22 ದಾನ್ ಕುಲದಿಂದ ಯೊಗ್ಲೀಯ ಮಗನಾದ ಬುಕ್ಕೀ ಕುಲಾಧಿಪತಿ.

23 ಯೋಸೇಫನ ಸಂತತಿಯವರಲ್ಲಿ ಮನಸ್ಸೆ ಕುಲದಿಂದ ಏಫೋದನ ಮಗನಾದ ಹನ್ನೀಯೇಲ್ ಕುಲಾಧಿಪತಿ.

24 ಎಫ್ರಾಯೀಮ್ ಕುಲದಿಂದ ಶಿಫ್ಟಾನನ ಮಗನಾದ ಕೆಮೂವೇಲ್ ಕುಲಾಧಿಪತಿ.

25 ಜೆಬುಲೂನ್ ಕುಲದಿಂದ ಪರ್ನಾಕನ ಮಗನಾದ ಎಲೀಚಾಫಾನ್ ಕುಲಾಧಿಪತಿ.

26 ಇಸ್ಸಾಕಾರ್ ಕುಲದಿಂದ ಅಜ್ಜಾನನ ಮಗನಾದ ಪಲ್ಟೀಯೇಲ್ ಕುಲಾಧಿಪತಿ.

27 ಆಶೇರ್ ಕುಲದಿಂದ ಶೆಲೋಮಿಯ ಮಗನಾದ ಅಹೀಹೂದ್ ಕುಲಾಧಿಪತಿ.

28 ನಫ್ತಾಲಿ ಕುಲದಿಂದ ಅಮ್ಮೀಹೂದನ ಮಗನಾದ ಪೆದಹೇಲ್ ಕುಲಾಧಿಪತಿ.”

29 ಕಾನಾನ್ ದೇಶದಲ್ಲಿ, ಇಸ್ರೇಲರಿಗೆ ಅವರವರ ಸ್ವಾಸ್ತ್ಯಗಳನ್ನು ಹಂಚಿಕೊಡುವುದಕ್ಕೆ ಯೆಹೋವನು ಇವರನ್ನೆಲ್ಲಾ ನೇಮಿಸಿದನು.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು