Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 8 - ಪರಿಶುದ್ದ ಬೈಬಲ್‌


ಬೆನ್ಯಾಮೀನನ ಸಂತತಿಯವರು

1 ಬೆನ್ಯಾಮೀನನ ಮೊದಲನೆ ಮಗನು ಬೆಳ; ಎರಡನೆಯ ಮಗನು ಅಷ್ಬೇಲ್; ಮೂರನೆಯ ಮಗನು ಅಹ್ರಹ;

2 ನಾಲ್ಕನೆಯ ಮಗನು ನೋಹ; ಮತ್ತು ಐದನೆಯ ಮಗನು ರಾಫ.

3 ಬೆಳನ ಮಕ್ಕಳು ಯಾರೆಂದರೆ: ಅದ್ದಾರ್, ಗೇರ, ಅಬೀಹೂದ್,

4-5 ಅಬೀಷೂವ, ನಾಮಾನ್, ಅಹೋಹ, ಗೇರ ಶೆಫೂಫಾನ್ ಮತ್ತು ಹೂರಾಮ್.

6-7 ಇವರು ಏಹೂದನ ಸಂತತಿಯವರು. ಇವರು ಗೆಬ ಗೋತ್ರಗಳ ನಾಯಕರುಗಳಾಗಿದ್ದರು. ಇವರನ್ನು ಇವರ ಮನೆಗಳಿಂದ ಬಲವಂತದಿಂದ ಹೊರಡಿಸಿ ಮಾನಹತಿಗೆ ಕಳುಹಿಸಲಾಯಿತು. ಏಹೂದನ ಸಂತತಿಯವರು ಯಾರೆಂದರೆ: ನಾಮಾನ್, ಅಹೀಯ ಮತ್ತು ಗೇರ. ಗೇರನು ಉಚ್ಚನ ಮತ್ತು ಅಹೀಹುದನ ತಂದೆ.

8 ಶಹರಯಿಮನು ಮೋವಾಬಿನಲ್ಲಿ ತನ್ನ ಹೆಂಡತಿಯರಾದ ಹೂಷೀಮ್ ಮತ್ತು ಬಾರ ಎಂಬವರನ್ನು ತ್ಯಜಿಸಿ ಬೇರೊಬ್ಬ ಹೆಂಡತಿಯಿಂದ ಇತರ ಮಕ್ಕಳನ್ನು ಪಡೆದನು.

9-10 ಶಹರಯಿಮನಿಗೆ ಯೋವಾಬ್, ಚೆಬ್ಯ, ಮೇಷ, ಮಲ್ಕಾಮ್, ಯೆಯೂಚ್, ಸಾಕ್ಯ ಮತ್ತು ವಿರ್ಮ ಎಂಬ ಗಂಡುಮಕ್ಕಳನ್ನು ತನ್ನ ಹೆಂಡತಿಯಾದ ಹೋದೆಷಳಿಂದ ಪಡೆದುಕೊಂಡನು. ಇವರೆಲ್ಲರೂ ತಮ್ಮ ಕುಲ ಪ್ರಧಾನರಾಗಿದ್ದರು.

11 ಶಹರಯಿಮ್ ಮತ್ತು ಹೂಷೀಮಳಿಗೆ ಅಬೀಟೂಬ್ ಮತ್ತು ಎಲ್ಛಾಲ ಎಂಬ ಇಬ್ಬರು ಮಕ್ಕಳಿದ್ದರು.

12-13 ಎಲ್ಪಾಲನ ಮಕ್ಕಳು ಯಾರೆಂದರೆ: ಏಬೆರ್, ಮಿಷ್ಬಾಮ್, ಶೆಮೆದ್, ಬೆರೀಯ ಮತ್ತು ಶಮ. ಶೆಮೆದನು ಓನೋ ಮತ್ತು ಲೋದ್ ಎಂಬ ಪಟ್ಟಣಗಳನ್ನೂ ಅವುಗಳ ಸುತ್ತಮುತ್ತಲಿನ ಊರುಗಳನ್ನೂ ಕಟ್ಟಿಸಿದನು. ಅಯ್ಯಾಲೋನಿನಲ್ಲಿ ವಾಸಿಸುತ್ತಿದ್ದ ಕುಲದವರಿಗೆ ಬೆರೀಯ ಮತ್ತು ಶಮ ಕುಲ ಪ್ರಧಾನರಾಗಿದ್ದರು. ಇವರು ಗತ್‌ನಲ್ಲಿ ವಾಸಿಸುತ್ತಿದ್ದ ಜನರನ್ನು ಓಡಿಸಿದರು.

14 ಬೆರೀಯನ ಗಂಡುಮಕ್ಕಳು ಯಾರೆಂದರೆ: ಅಹ್ಯೋ, ಶಾಷಕ್, ಯೆರೇಮೋತ್, ಜೆಬದ್ಯ,

15 ಅರಾದ್, ಎದೆರ್,

16 ಮಿಕಾಯೇಲ್, ಇಷ್ಪ ಮತ್ತು ಯೋಹ.

17 ಎಲ್ಪಾಲನ ಗಂಡುಮಕ್ಕಳು ಯಾರೆಂದರೆ: ಜೆಬದ್ಯ, ಮೆಷುಲ್ಲಾಮ್, ಹಿಜ್ಕೀ, ಹೆಬೆರ್,

18 ಇಷ್ಮೆರೈ, ಇಜ್ಲೀಯ ಮತ್ತು ಯೋಬಾಬ್.

19 ಶಿಮ್ಮಿಯ ಗಂಡುಮಕ್ಕಳು ಯಾರೆಂದರೆ: ಯಾಕೀಮ್, ಜಿಕ್ರೀ, ಜಬ್ದೀ.

20 ಎಲೀಗೇನೈ, ಚಿಲ್ಲೆತೈ, ಎಲೀಯೇಲ್,

21 ಅದಾಯ, ಬೆರಾಯ ಮತ್ತು ಶಿಮ್ರಾತ್.

22 ಶಾಷಕನ ಮಕ್ಕಳು ಯಾರೆಂದರೆ: ಇಷ್ಪಾನ್, ಏಬೆರ್, ಎಲೀಯೇಲ್.

23 ಅಬ್ದೋನ್, ಜಿಕ್ರೀ, ಹಾನಾನ್,

24 ಹನನ್ಯ, ಏಲಾಮ್, ಅನೆತೋತೀಯ,

25 ಇಪ್ದೆಯಾಹ ಮತ್ತು ಪೆನೂವೇಲ್.

26 ಯೆರೋಹಾಮನ ಗಂಡುಮಕ್ಕಳು ಯಾರೆಂದರೆ: ಶಂಷೆರೈ, ಶೆಹರ್ಯ, ಅತಲ್ಯ,

27 ಯಾರೆಷ್ಯ, ಏಲೀಯ ಮತ್ತು ಜಿಕ್ರೀ.

28 ಈ ಜನರೆಲ್ಲರು ತಮ್ಮ ಗೋತ್ರಗಳಿಗೆ ನಾಯಕರಾಗಿದ್ದರು. ಇವರ ಗೋತ್ರ ಚರಿತ್ರೆಯಲ್ಲಿ ಇವರನ್ನು ನಾಯಕರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರೆಲ್ಲಾ ಜೆರುಸಲೇಮಿನಲ್ಲಿ ವಾಸವಾಗಿದ್ದರು.

29 ಯೆಗೂವೇಲನು ಗಿಬ್ಯೋನನ ತಂದೆ. ಇವನು ಗಿಬ್ಯೋನಿನಲ್ಲಿ ವಾಸಿಸುತ್ತಿದ್ದನು. ಯೆಗೂವೇಲನ ಹೆಂಡತಿಯ ಹೆಸರು ಮಾಕ.

30 ಯೆಗೂವೇಲನ ಚೊಚ್ಚಲ ಮಗನು ಅಬ್ದೋನ. ಅವನ ಇತರ ಗಂಡುಮಕ್ಕಳು ಯಾರೆಂದರೆ: ಚೂರ್, ಕೀಷ್, ಬಾಳ್, ನಾದಾಬ್,

31 ಗೇದೋರ್, ಅಹ್ಯೋ, ಜೆಕೆರ್ ಮತ್ತು ಮಿಕ್ಲೋತ್.

32 ಮಿಕ್ಲೋತನು ಶಿಮಾಹನ ತಂದೆ. ಇವರೂ ತಮ್ಮ ಸಂಬಂಧಿಕರೊಂದಿಗೆ ಜೆರುಸಲೇಮಿನಲ್ಲಿ ವಾಸವಾಗಿದ್ದರು.

33 ನೇರನು ಕೀಷನ ತಂದೆ. ಕೀಷನು ಸೌಲನ ತಂದೆ. ಸೌಲನು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳರ ತಂದೆ.

34 ಯೋನಾತಾನನ ಮಗ ಮೆರೀಬ್ಬಾಳ್. ಮೆರೀಬ್ಬಾಳನು ಮೀಕನ ತಂದೆ.

35 ಮೀಕನ ಗಂಡುಮಕ್ಕಳು ಯಾರೆಂದರೆ: ಪೀತೋನ್, ಮೆಲೆಕ್, ತರೇಯ ಮತ್ತು ಅಹಾಜ್.

36 ಅಹಾಜನು ಯೆಹೋವದ್ದಾಹನ ತಂದೆ. ಯೆಹೋವದ್ದಾಹನು ಅಲೆಮೆತನ, ಅಜ್ಮಾವೆತನ ಮತ್ತು ಜಿಮ್ರೀಯ ತಂದೆ. ಜಿಮ್ರೀಯು ಮೋಚನ ತಂದೆ.

37 ಮೋಚನು ಬಿನ್ನನ ತಂದೆ. ರಾಫನು ಬಿನ್ನನ ಮಗ. ಎಲ್ಲಾಸನು ರಾಫನ ಮಗ. ಆಚೇಲನು ಎಲ್ಲಾಸನ ಮಗ.

38 ಆಚೇಲನಿಗೆ ಆರು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್. ಇವರೆಲ್ಲರೂ ಆಚೇಲನ ಗಂಡುಮಕ್ಕಳು.

39 ಆಚೇಲನ ತಮ್ಮನಾದ ಏಷೆಕನ ಗಂಡುಮಕ್ಕಳು ಯಾರೆಂದರೆ: ಊಲಾಮನು ಏಷೆಕನ ಚೊಚ್ಚಲಮಗ; ಯೆಯೂಷನು ಏಷೆಕನ ಎರಡನೆಯ ಮಗನು; ಮೂರನೆಯವನು ಎಲೀಫೆಲೆಟ್.

40 ಊಲಾಮನ ಗಂಡುಮಕ್ಕಳೆಲ್ಲರೂ ರಣವೀರರು; ಬಿಲ್ಲುಬಾಣಗಳನ್ನು ಉಪಯೋಗಿಸುವುದರಲ್ಲಿ ನಿಪುಣರು. ಅವರಿಗೆ ಅನೇಕ ಗಂಡುಮಕ್ಕಳು ಮತ್ತು ಗಂಡುಮೊಮ್ಮಕ್ಕಳಿದ್ದರು. ಅವರಿಗೆ ಒಟ್ಟು ನೂರೈವತ್ತು ಮಂದಿ ಗಂಡುಮಕ್ಕಳು ಮತ್ತು ಗಂಡುಮೊಮ್ಮಕ್ಕಳು ಇದ್ದರು. ಇವರೆಲ್ಲಾ ಬೆನ್ಯಾಮೀನನ ಸಂತತಿಯವರು.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು