Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 16 - ಕನ್ನಡ ಸಮಕಾಲಿಕ ಅನುವಾದ


ಮನಸ್ಸೆ ಹಾಗೂ ಎಫ್ರಾಯೀಮ್ ಪಾಲು

1 ಯೋಸೇಫನ ಮಕ್ಕಳಿಗೆ ಚೀಟು ಬಿದ್ದ ಪ್ರಕಾರ ಉಂಟಾದ ಸೊತ್ತಿನ ವಿವರ: ಯೆರಿಕೋವಿನ ಬಳಿಯಲ್ಲಿರುವ ಯೊರ್ದನ್ ನದಿಯಿಂದ ಪೂರ್ವದಲ್ಲಿರುವ ಯೆರಿಕೋವಿನ ಜಲದವರೆಗೂ ಮತ್ತು ಬೇತೇಲಿನ ಬೆಟ್ಟಗಳವರೆಗೂ ಇರುವ ಮರುಭೂಮಿಯ ಮಾರ್ಗವಾಗಿ ಹೋಗಿತ್ತು.

2 ಬೇತೇಲಿನಿಂದ ಅಂದರೆ ಲೂಜ್ ಅಲ್ಲಿಂದ ಅರ್ಕಿಯ ಮೇರೆಗಳಾದ ಅಟಾರೋತನ್ನು ದಾಟಿ,

3 ಪಶ್ಚಿಮಕ್ಕೆ ಯಫ್ಲೇಟ್ಯರ ಮೇರೆಗೂ ಕೆಳಗಡೆಯಾದ ಬೇತ್ ಹೋರೋನ್ ಮೇರೆಯವರೆಗೂ ಅಲ್ಲಿಂದ ಗೆಜೆರಿನವರೆಗೂ ಹೋಗಿ ಮೆಡಿಟೆರಿಯನ್ ಸಮುದ್ರ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.

4 ಹೀಗೆ ಇದನ್ನು ಯೋಸೇಫನ ಮಕ್ಕಳಾದ ಮನಸ್ಸೆ ಎಫ್ರಾಯೀಮರು ತಮಗೆ ಸೊತ್ತಾಗಿ ತೆಗೆದುಕೊಂಡರು.

5 ಅವರ ಕುಟುಂಬಗಳ ಪ್ರಕಾರ ಎಫ್ರಾಯೀಮ್ ಗೋತ್ರದ ಪ್ರದೇಶ ಹೀಗಿತ್ತು: ಪೂರ್ವದಿಕ್ಕಿನ ಅಟಾರೋತ್ ಅದ್ದಾರಿನಿಂದ ಪ್ರಾರಂಭಿಸಿ, ಮೇಲಿನ ಬೇತ್ ಹೋರೋನಿನವರೆಗೂ ಇತ್ತು.

6 ಅಲ್ಲಿಂದ ಮೆಡಿಟೆರಿಯನ್ ಸಮುದ್ರದ ಪಶ್ಚಿಮ ಮೇರೆಗೆ ಮಿಕ್ಮೆತಾತಿನಿಂದ ಉತ್ತರಕ್ಕೆ ಹೊರಟು ಪೂರ್ವಕ್ಕೆ ತಾನತ್ ಶೀಲೋವಿಗೆ ತಿರುಗಿ ಯಾನೋಹಕ್ಕೆ ಪೂರ್ವದ ಕಡೆಗೆ ಹಾದು ಹೋಗಿತ್ತು.

7 ಯಾನೋಹದಿಂದ ಅಟಾರೋತ್‌ಗೂ ನಾರಾ ಎಂಬ ಊರುಗಳ ಮೇಲೆ ಇಳಿದು ಯೆರಿಕೋವಿನ ಬಳಿಯಲ್ಲಿ ಬಂದು ಯೊರ್ದನ್ ನದಿಗೆ ಮುಗಿಯುವುದು.

8 ತಪ್ಪೂಹದಿಂದ ಪಶ್ಚಿಮದ ಮೇರೆಯೂ ಕಾನಾ ನದಿಗೆ ಹೋಗಿ ಮೆಡಿಟೆರೆನಿಯನ್ ಸಮುದ್ರದವರೆಗೆ ಮುಗಿಯುವುದು. ಇದು ಎಫ್ರಾಯೀಮನ ಮಕ್ಕಳ ಗೋತ್ರ ಅವರ ಕುಟುಂಬಗಳ ಪ್ರಕಾರವೇ ದೊರೆತ ಸೊತ್ತು.

9 ಇದಲ್ಲದೆ ಎಫ್ರಾಯೀಮ್ ಹಾಗೂ ಮನಸ್ಸೆ ಗೋತ್ರದವರ ಮಧ್ಯೆ ಕೊಡಲಾದ ಎಲ್ಲಾ ಪಟ್ಟಣಗಳೂ ಅವುಗಳ ಗ್ರಾಮಗಳೂ ಪ್ರತ್ಯೇಕವಾಗಿ ಕೊಡಲಾಗಿತ್ತು.

10 ಅವರು ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸದೆ ಇದ್ದುದರಿಂದ, ಎಫ್ರಾಯೀಮ್ಯರ ಮಧ್ಯದಲ್ಲಿ ಕಾನಾನ್ಯರು ಈವರೆಗೂ ಅವರಲ್ಲಿ ದಾಸತ್ವದಲ್ಲಿದ್ದುಕೊಂಡು ಕೆಲಸಮಾಡುವವರಾಗಿದ್ದಾರೆ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು