Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 95 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 95

1 ಬನ್ನಿರಿ, ಯೆಹೋವ ದೇವರಿಗೆ ಉತ್ಸಾಹ ಗೀತೆಯನ್ನು ಹಾಡೋಣ; ನಮ್ಮ ರಕ್ಷಣೆಯ ಬಂಡೆಯಾಗಿರುವ ದೇವರಿಗೆ ಜಯಧ್ವನಿ ಮಾಡೋಣ.

2 ಧನ್ಯವಾದದೊಡನೆ ಅವರ ಸನ್ನಿಧಿಯಲ್ಲಿ ಮುಂದೆ ಬಂದು ಕೀರ್ತನೆಗಳಿಂದ ಅವರಿಗೆ ಜಯಧ್ವನಿ ಮಾಡೋಣ.

3 ಯೆಹೋವ ದೇವರು ಮಹಾ ದೇವರು, ಎಲ್ಲಾ ದೇವರುಗಳ ಮೇಲೆ ಮಹಾರಾಜರೂ ಆಗಿದ್ದಾರೆ.

4 ಅವರ ಕೈಯಲ್ಲಿ ಭೂಮಿಯ ಆಳವಾದ ಸ್ಥಳಗಳು ಇವೆ; ಬೆಟ್ಟಗಳ ಬಲವು ಅವರದೇ.

5 ಸಮುದ್ರವು ಅವರಿಗೆ ಸೇರಿದ್ದು; ಅವರು ಅದನ್ನು ಸೃಷ್ಟಿಸಿದರು; ಅವರ ಕೈಗಳು ಒಣ ಭೂಮಿಯನ್ನು ರೂಪಿಸಿದವು.

6 ಬನ್ನಿರಿ, ಆರಾಧಿಸೋಣ; ನಮ್ಮನ್ನು ಸೃಷ್ಟಿಸಿದ ಯೆಹೋವ ದೇವರ ಮುಂದೆ ಮೊಣಕಾಲು ಊರೋಣ.

7 ಅವರು ನಮ್ಮ ದೇವರು; ನಾವು ಅವರ ಹುಲ್ಲುಗಾವಲಿನ ಪ್ರಜೆಗಳಾಗಿದ್ದೇವೆ, ನಾವು ಅವರು ಪರಿಪಾಲಿಸುವ ಮಂದೆಯೂ ಆಗಿದ್ದೇವೆ. ನೀವು ಈ ಹೊತ್ತು ಅವರ ಸ್ವರಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೆಯದು.

8 “ನೀವು ಮೆರೀಬದಲ್ಲಿ ಮಾಡಿದಂತೆ, ಹೌದು, ಅಂದು ನೀವು ಮರುಭೂಮಿಯ ಮಸ್ಸಾ ಎಂಬ ಸ್ಥಳದಲ್ಲಿ ಮಾಡಿದಂತೆ, ನಿಮ್ಮ ಹೃದಯವನ್ನು ಕಠಿಣಪಡಿಸಬೇಡಿರಿ.

9 ನಾನು ಮಾಡಿದ್ದನ್ನು ಕಂಡಿದ್ದರೂ, ಅಲ್ಲಿ ನಿಮ್ಮ ಪಿತೃಗಳು ನನ್ನನ್ನು ಶೋಧಿಸಿ, ನನ್ನನ್ನು ಪರೀಕ್ಷಿಸಿದರು.

10 ನಾಲ್ವತ್ತು ವರ್ಷ ಆ ಸಂತತಿಗೆ ಬೇಸರಗೊಂಡು, ‘ಇವರು ತಮ್ಮ ಹೃದಯದಲ್ಲಿ ತಪ್ಪಿಹೋಗುವ ಜನರಾಗಿದ್ದಾರೆ, ನನ್ನ ಮಾರ್ಗಗಳನ್ನು ಇವರು ಅರಿಯರು,’ ಎಂದೆನು.

11 ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,’ ” ಎಂದು ನಾನು ಅಸಂತೋಷದಿಂದ ಆಣೆ ಇಟ್ಟುಕೊಂಡೆನು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು