Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 67 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 67
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕ ಕೀರ್ತನೆ, ಒಂದು ಗೀತೆ.

1 ದೇವರು ನಮ್ಮ ಮೇಲೆ ಕರುಣೆಯಿಟ್ಟು, ನಮ್ಮನ್ನು ಆಶೀರ್ವದಿಸಲಿ. ದೇವರು ತಮ್ಮ ಮುಖವನ್ನು ನಮ್ಮ ಮೇಲೆ ಪ್ರಕಾಶಿಸಮಾಡಲಿ.

2 ಆಗ ದೇವರೇ, ನಿಮ್ಮ ಮಾರ್ಗಗಳು ಭೂಮಿಯಲ್ಲಿ ಗೊತ್ತಾಗುವುದು. ನಿಮ್ಮ ರಕ್ಷಣೆಯು ಎಲ್ಲಾ ಜನಾಂಗಗಳಲ್ಲಿ ಪ್ರಸಿದ್ಧವಾಗುವುದು.

3 ದೇವರೇ, ಜನರು ನಿಮ್ಮನ್ನು ಕೊಂಡಾಡಲಿ, ಸರ್ವ ಜನಾಂಗಗಳು ನಿಮ್ಮನ್ನು ಸ್ತುತಿಸಲಿ.

4 ಜನಾಂಗಗಳು ಸಂತೋಷಪಟ್ಟು ಉತ್ಸಾಹದಿಂದ ಹಾಡಲಿ. ಏಕೆಂದರೆ ನೀವು ಜನರನ್ನು ನೀತಿಯಿಂದ ನ್ಯಾಯತೀರಿಸಿ, ಜನಾಂಗಗಳನ್ನು ಭೂಮಿಯಲ್ಲಿ ಪರಿಪಾಲಿಸುತ್ತೀರಿ.

5 ದೇವರೇ, ಜನರು ನಿಮ್ಮನ್ನು ಕೊಂಡಾಡಲಿ. ಸರ್ವ ಜನಾಂಗಗಳು ನಿಮ್ಮನ್ನು ಸ್ತುತಿಸಲಿ.

6 ಭೂಮಿಯು ತನ್ನ ಬೆಳೆಯನ್ನು ಕೊಡುವುದು. ದೇವರೇ, ಹೌದು, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸುವರು.

7 ದೇವರು ನಮ್ಮನ್ನು ಆಶೀರ್ವದಿಸುವರು. ಭೂಮಿಯಲ್ಲಿರುವ ಎಲ್ಲರೂ ದೇವರಲ್ಲಿ ಭಯಭಕ್ತಿಯುಳ್ಳವರಾಗಿರುವರು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು