ಕೀರ್ತನೆಗಳು 150 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 150 1 ಯೆಹೋವ ದೇವರಿಗೆ ಸ್ತೋತ್ರ! ದೇವರನ್ನು ಅವರ ಪರಿಶುದ್ಧಾಲಯದಲ್ಲಿ ಸ್ತುತಿಸಿರಿ; ದೇವರ ಶಕ್ತಿದಾಯಕ ಆಕಾಶಮಂಡಲದಲ್ಲಿ ಅವರನ್ನು ಸ್ತುತಿಸಿರಿ. 2 ದೇವರ ಮಹತ್ಕಾರ್ಯಗಳಿಗಾಗಿ ಅವರನ್ನು ಸ್ತುತಿಸಿರಿ; ದೇವರ ಮಹಾಪ್ರಭಾವಗಳಿಗಾಗಿ ಅವರನ್ನು ಸ್ತುತಿಸಿರಿ. 3 ತುತೂರಿಯ ಶಬ್ದದಿಂದ ದೇವರನ್ನು ಸ್ತುತಿಸಿರಿ, ಕಿನ್ನರಿಯಿಂದಲೂ, ವೀಣೆಯಿಂದಲೂ, ಅವರನ್ನು ಸ್ತುತಿಸಿರಿ. 4 ದಮ್ಮಡಿಯಿಂದಲೂ, ನಾಟ್ಯದಿಂದಲೂ ದೇವರನ್ನು ಸ್ತುತಿಸಿರಿ; ತಂತಿವಾದ್ಯಗಳಿಂದಲೂ, ಕೊಳಲುಗಳಿಂದಲೂ ಅವರನ್ನು ಸ್ತುತಿಸಿರಿ. 5 ತಾಳಗಳಿಂದ ದೇವರನ್ನು ಸ್ತುತಿಸಿರಿ; ಪ್ರತಿಧ್ವನಿಸುವ ಝಲ್ಲರಿಗಳಿಂದಲೂ ಅವರನ್ನು ಸ್ತುತಿಸಿರಿ. 6 ಶ್ವಾಸವುಳ್ಳದ್ದೆಲ್ಲಾ ಯೆಹೋವ ದೇವರನ್ನು ಸ್ತುತಿಸಲಿ. ಯೆಹೋವ ದೇವರಿಗೆ ಸ್ತೋತ್ರ! |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.