ಕೀರ್ತನೆಗಳು 133 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 133 ದಾವೀದನ ಯಾತ್ರಾ ಗೀತೆ. 1 ಸಹೋದರರು ಒಂದಾಗಿ ಬಾಳುವುದು ಎಷ್ಟೋ ಒಳ್ಳೆಯದು! ಎಷ್ಟೋ ರಮ್ಯವಾದದ್ದು! 2 ಆ ಒಂದಾಗಿರುವಿಕೆಯು ತಲೆಯ ಮೇಲಿಂದ ಗಡ್ಡದ ಮೇಲೆ ಅಂದರೆ, ಆರೋನನ ಗಡ್ಡದ ಮೇಲೆ ಇಳಿದು, ಅವನ ವಸ್ತ್ರದ ಕೊರಳಪಟ್ಟಿಯವರೆಗೆ ಮೇಲೆ ಇಳಿಯುವ ಅಮೂಲ್ಯ ತೈಲದ ಹಾಗೆ ಇರುತ್ತದೆ. 3 ಆ ಒಂದಾಗಿರುವಿಕೆಯು ಹೆರ್ಮೋನ್ ಪರ್ವತದಿಂದ ಪ್ರಾರಂಭವಾಗಿ ಚೀಯೋನ್ ಪರ್ವತಗಳ ಮೇಲೆ ಬೀಳುವ ಮಂಜಿನ ಹಾಗೆಯೂ ಇದೆ. ಏಕೆಂದರೆ ಎಲ್ಲಿ ಒಂದಾಗಿರುವಿಕೆಯು ಇದೆಯೋ ಅಲ್ಲಿ ಯೆಹೋವ ದೇವರು ಆಶೀರ್ವಾದವನ್ನೂ, ಯುಗಯುಗಾಂತರಕ್ಕೂ ಜೀವವನ್ನೂ ಅನುಗ್ರಹಿಸುತ್ತಾರೆ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.