Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 131 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 131
ದಾವೀದನ ಯಾತ್ರಾ ಗೀತೆ.

1 ಯೆಹೋವ ದೇವರೇ, ನನ್ನ ಹೃದಯವು ಗರ್ವದ್ದಲ್ಲ, ನನಗೆ ಸೊಕ್ಕಿನ ಕಣ್ಣಿಲ್ಲ ದೊಡ್ಡ ವಿಷಯಗಳಲ್ಲಿಯೂ ನನಗೆ ನಿಲುಕಲಾರದವುಗಳಲ್ಲಿಯೂ ನಾನು ಕೈ ಹಾಕುವುದಿಲ್ಲ.

2 ಆದರೆ ಹಾಲುಬಿಡಿಸಿದ ಕೂಸು ತನ್ನ ತಾಯಿಯ ಮಡಿಲಲ್ಲಿರುವಂತೆ ನನ್ನ ಪ್ರಾಣವನ್ನು ಸಮಾಧಾನ ಪಡಿಸಿದ್ದೇನೆ. ನಾನು ತಾಯಿಯ ಮಡಿಲಲ್ಲಿರುವ ಕೂಸಿನಂತೆ ಸಂತೃಪ್ತಿಯಿಂದ ಇದ್ದೇನೆ.

3 ಇಸ್ರಾಯೇಲೇ, ಯೆಹೋವ ದೇವರಲ್ಲಿ ನಿನ್ನ ನಿರೀಕ್ಷೆಯನ್ನಿಡು. ಈಗಲೂ, ಎಂದೆಂದಿಗೂ ನಿರೀಕ್ಷೆಯಿಂದಿರು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು