ಕೀರ್ತನೆಗಳು 130 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 130 ಯಾತ್ರಾ ಗೀತೆ. 1 ಯೆಹೋವ ದೇವರೇ, ಅಂತರಾಳದಿಂದ ನಿಮಗೆ ಮೊರೆಯಿಡುತ್ತೇನೆ. 2 ಯೆಹೋವ ದೇವರೇ, ನನ್ನ ಧ್ವನಿಯನ್ನು ಕೇಳಿರಿ. ನನ್ನ ಕೂಗಿಗೆ ಕರುಣೆ ತೋರಿಸಿ, ನಿಮ್ಮ ಕಿವಿಗಳು ನನ್ನ ವಿಜ್ಞಾಪನೆಗಳನ್ನು ಆಲೈಸಲಿ. 3 ಯೆಹೋವ ದೇವರೇ, ನೀವು ಪಾಪಗಳನ್ನು ಎಣಿಸಿದರೆ, ನಿಮ್ಮ ಮುಂದೆ ಯಾರು ನಿಲ್ಲುವರು? 4 ಆದರೆ ನಿಮ್ಮಲ್ಲಿ ಕ್ಷಮಾಪಣೆ ಉಂಟು. ನಾವು ನಿಮ್ಮನ್ನು ಭಯಭಕ್ತಿಯಿಂದ ಸೇವೆಮಾಡುವಂತೆ ನಿಮ್ಮ ಕ್ಷಮಾಪಣೆಯಿದೆ. 5 ಯೆಹೋವ ದೇವರನ್ನು ನಿರೀಕ್ಷಿಸುತ್ತೇನೆ, ನನ್ನ ಅಂತರಾಳವು ಸಹ ನಿರೀಕ್ಷಿಸುತ್ತದೆ; ನಾನು ದೇವರ ವಾಕ್ಯದಲ್ಲಿ ನಿರೀಕ್ಷೆ ಇಟ್ಟಿದ್ದೇನೆ. 6 ಉದಯಕ್ಕಾಗಿ ಕಾವಲುಗಾರ ಕಾದಿರುತ್ತಾರೆ. ನಾನು ಆ ಕಾವಲುಗಾರರು ಕಾದಿರುವುದಕ್ಕಿಂತ ಹೆಚ್ಚಾಗಿಯೇ ಯೆಹೋವ ದೇವರಿಗಾಗಿ ನಿರೀಕ್ಷಿಸುತ್ತಿದ್ದೇನೆ. 7 ಇಸ್ರಾಯೇಲು ಯೆಹೋವ ದೇವರಲ್ಲಿ ನಿರೀಕ್ಷಿಸಲಿ, ಏಕೆಂದರೆ ಯೆಹೋವ ದೇವರ ಬಳಿಯಲ್ಲಿ ಒಂಡಬಡಿಕೆಯ ಪ್ರೀತಿ ಇರುತ್ತದೆ, ಸಂಪೂರ್ಣ ವಿಮೋಚನೆಯೂ ಇರುತ್ತದೆ. 8 ದೇವರು ಇಸ್ರಾಯೇಲನ್ನು ಅವರ ಎಲ್ಲಾ ಅಕ್ರಮಗಳಿಂದ ವಿಮೋಚಿಸುವರು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.