Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 127 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 127
ಸೊಲೊಮೋನನ ಯಾತ್ರಾ ಗೀತೆ.

1 ಯೆಹೋವ ದೇವರು ಮನೆಯನ್ನು ಕಟ್ಟದೆ ಇದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಪ್ರಯಾಸಪಡುತ್ತಾರೆ; ಯೆಹೋವ ದೇವರು ಪಟ್ಟಣವನ್ನು ಕಾಯದೆ ಇದ್ದರೆ, ಅದನ್ನು ಕಾಯುವವರು ವ್ಯರ್ಥವಾಗಿ ಕಾಯುತ್ತಾರೆ.

2 ನೀವು ಆಹಾರಕ್ಕಾಗಿ ಶ್ರಮೆಪಟ್ಟು, ಬೆಳಿಗ್ಗೆ ಬೇಗ ಏಳುವುದೂ, ರಾತ್ರಿ ತಡವಾಗಿ ಮಲಗುವುದೂ ವ್ಯರ್ಥವೇ, ದೇವರು ತಮ್ಮನ್ನು ಪ್ರೀತಿಸುವವರಿಗೆ ನಿದ್ರೆಯಿಂದಿರುವಾಗಲೂ ಅವಶ್ಯಕತೆಗಳನ್ನು ಒದಗಿಸಿಕೊಡುತ್ತಾರೆ.

3 ಮಕ್ಕಳು ಯೆಹೋವ ದೇವರು ಕೊಟ್ಟ ಸೊತ್ತು. ಗರ್ಭಫಲವು ದೇವರ ಬಹುಮಾನ.

4 ಯೌವನದಲ್ಲಿ ಹುಟ್ಟಿದ ಮಕ್ಕಳು, ಯುದ್ಧವೀರನ ಕೈಯಲ್ಲಿಯ ಬಾಣಗಳಂತಿದ್ದಾರೆ.

5 ಬಾಣಗಳನ್ನು ಬತ್ತಳಿಕೆಯಿಂದ ತುಂಬಿಸಿಕೊಂಡಿರುವವರು ಧನ್ಯರು, ಶತ್ರುಗಳ ಸಂಗಡ ನ್ಯಾಯಾಲಯದಲ್ಲಿ ವಾದಿಸುವಾಗ ಅವರು ನಾಚಿಕೆಪಡರು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು