ಕೀರ್ತನೆಗಳು 123 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 123 ಯಾತ್ರಾ ಗೀತೆ. 1 ಪರಲೋಕದಲ್ಲಿ ಸಿಂಹಾಸನರಾಗಿರುವವರೇ, ನಿಮ್ಮ ಕಡೆಗೆ ನನ್ನ ಕಣ್ಣುಗಳನ್ನು ಎತ್ತಿದ್ದೇನೆ. 2 ಇಗೋ, ದಾಸರ ಕಣ್ಣುಗಳು ತಮ್ಮ ಯಜಮಾನರ ಕೈಯನ್ನು ನೋಡುವ ಪ್ರಕಾರ, ಮತ್ತು ದಾಸಿಯ ಕಣ್ಣುಗಳು ತನ್ನ ಯಜಮಾನಿಯ ಕೈಯನ್ನೂ ನೋಡುವ ಪ್ರಕಾರ, ನಮ್ಮ ಕಣ್ಣುಗಳು ನಮ್ಮ ಯೆಹೋವ ದೇವರು, ನಮ್ಮನ್ನು ಕರುಣಿಸುವವರೆಗೆ ನಿರೀಕ್ಷೆಯಿಂದ ನೋಡುತ್ತಿರುವುದು. 3 ನಮ್ಮನ್ನು ಕರುಣಿಸು, ಯೆಹೋವ ದೇವರೇ, ನಮ್ಮನ್ನು ಕರುಣಿಸು; ಏಕೆಂದರೆ ನಾವು ಬಹಳವಾಗಿ ತಿರಸ್ಕಾರವನ್ನು ಅನುಭವಿಸಿದ್ದೇವೆ. 4 ನಾವು ಸುಖಭೋಗಿಗಳ ಗೇಲಿಯನ್ನೂ ಗರ್ವಿಷ್ಠರಿಂದ ತಿರಸ್ಕಾರವನ್ನೂ ಅನುಭವಿಸಿದ್ದೇವೆ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.