ಕೀರ್ತನೆಗಳು 100 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 100 ಕೀರ್ತನೆ. ಕೃತಜ್ಞತೆಯ ಗೀತೆ. 1 ಸಮಸ್ತ ಭೂಮಿಯೇ, ಯೆಹೋವ ದೇವರಿಗೆ ಜಯಧ್ವನಿ ಮಾಡಿರಿ. 2 ಸಂತೋಷದಿಂದ ಯೆಹೋವ ದೇವರನ್ನು ಆರಾಧಿಸಿರಿ; ಆನಂದದಿಂದ ಹಾಡುತ್ತಾ ಅವರ ಮುಂದೆ ಬನ್ನಿರಿ. 3 ಯೆಹೋವ ದೇವರೇ ದೇವರೆಂದು ತಿಳುಕೊಳ್ಳಿರಿ; ಅವರೇ ನಮ್ಮನ್ನು ಉಂಟುಮಾಡಿದ್ದಾರೆ; ನಾವು ಅವರ ಜನರೂ, ಅವರು ಮೇಯಿಸುವ ಕುರಿ ಮಂದೆಯೂ ಆಗಿದ್ದೇವೆ. 4 ಕೃತಜ್ಞತೆಯಿಂದ ಅವರ ಬಾಗಿಲುಗಳಿಗೂ, ಕೃತಜ್ಞತಾ ಸ್ತೋತ್ರದಿಂದ ಅವರ ಅಂಗಳಗಳಿಗೂ ಬನ್ನಿರಿ; ಅವರನ್ನು ಕೊಂಡಾಡಿರಿ, ಅವರ ಹೆಸರನ್ನು ಸ್ತುತಿಸಿರಿ. 5 ಯೆಹೋವ ದೇವರು ಒಳ್ಳೆಯವರು, ಅವರ ಕರುಣೆಯು ಯುಗಯುಗಕ್ಕೂ ಇರುವುದು. ಅವರ ಸತ್ಯತೆಯು ತಲತಲಾಂತರಕ್ಕೂ ಮುಂದುವರಿಯುವುದು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.