ಎಸ್ತೇರಳು 10 - ಕನ್ನಡ ಸಮಕಾಲಿಕ ಅನುವಾದಮೊರ್ದೆಕೈ ಶ್ರೇಷ್ಠತೆ 1 ಅರಸನಾದ ಅಹಷ್ವೇರೋಷನು ದೇಶದ ಮೇಲೆಯೂ ಸಮುದ್ರದ ದ್ವೀಪಗಳ ಮೇಲೆಯೂ ತೆರಿಗೆಯನ್ನು ನೇಮಿಸಿದನು. 2 ಅವನ ಅಧಿಕಾರದ ಕ್ರಿಯೆಗಳೂ ಅವನ ಪರಾಕ್ರಮವೂ ಅರಸನು ಮೊರ್ದೆಕೈಯನ್ನು ಹೆಚ್ಚಿಸಿದ ಮಹತ್ತಿನ ಪ್ರಸಿದ್ಧಿಯೂ ಮೇದ್ಯ ಮತ್ತು ಪಾರಸಿಯ ಅರಸರ ಇತಿಹಾಸಗಳ ಗ್ರಂಥದಲ್ಲಿ ಬರೆದಿರುತ್ತವೆ. 3 ಯೆಹೂದ್ಯನಾದ ಮೊರ್ದೆಕೈ ಅರಸನಾದ ಅಹಷ್ವೇರೋಷನಿಗೆ ಎರಡನೆಯವನೂ ಯೆಹೂದ್ಯರಲ್ಲಿ ಸನ್ಮಾನಿತನೂ ತನ್ನ ಸಹೋದರರ ಸಮೂಹದಲ್ಲಿ ಹೆಚ್ಚಿನ ಗೌರವ ಪಾತ್ರನೂ ತನ್ನ ಜನರ ಹಿತಚಿಂತಕನೂ ತನ್ನ ಸಂತಾನದವರಿಗೆ ಕ್ಷೇಮಾಭಿವೃದ್ಧಿಯನ್ನು ಮಾತನಾಡುವವನೂ ಆಗಿದ್ದನು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.