Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಹಬಕ್ಕೂಕ 3 - ಕನ್ನಡ ಸತ್ಯವೇದವು J.V. (BSI)


ಯೆಹೋವನ ಅದ್ಭುತಾಗಮನ

1 ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ. ರಾಗ - ಶಿಗ್ಯೋನೋತ್

2 ಯೆಹೋವನೇ, ನಾನು ನಿನ್ನ ಸುದ್ದಿಯನ್ನು ಕೇಳಿ ಹೆದರಿದ್ದೇನೆ; ಯೆಹೋವನೇ, ಯುಗದ ಮಧ್ಯದಲ್ಲಿ ನಿನ್ನ ರಕ್ಷಣಕಾರ್ಯವನ್ನು ಪುನಃ ಮಾಡು, ಯುಗದ ಮಧ್ಯದಲ್ಲಿ ಅದನ್ನು ಪ್ರಸಿದ್ಧಿಪಡಿಸು; ನೀನು ರೋಷಗೊಂಡಿದ್ದರೂ ಕರುಣೆಯನ್ನು ಚಿತ್ತಕ್ಕೆ ತಂದುಕೋ.

3 ದೇವರು ತೇಮಾನಿನಿಂದ ಬರುತ್ತಾನೆ, ಸದಮಲಸ್ವಾವಿುಯು ಪಾರಾನ್ ಪರ್ವತದಿಂದ ಐತರುತ್ತಾನೆ; ಸೆಲಾ. ಆತನ ಪ್ರಭಾವವು ಆಕಾಶಮಂಡಲವನ್ನು ಆವರಿಸುತ್ತಿದೆ, ಆತನ ಮಹಿಮೆಯು ಭೂಮಂಡಲವನ್ನು ತುಂಬುತ್ತಿದೆ;

4 [ಆತನ] ತೇಜಸ್ಸು ಸೂರ್ಯನಂತಿದೆ, ಅದರ ಪಕ್ಕಗಳಲ್ಲಿ ಕಿರಣಗಳು ಹೊರಡುತ್ತಿವೆ; ಅದೇ ಆತನ ಶಕ್ತಿನಿಧಿ.

5 ಆತನ ಮುಂದೆ ಮುಂದೆ ವ್ಯಾಧಿಯು ನಡೆಯುತ್ತದೆ; ಆತನ ಹೆಜ್ಜೆಜಾಡುಗಳಲ್ಲಿ ಜ್ವರಜ್ವಾಲೆಯು ಏಳುತ್ತದೆ.

6 ಆತನು ನಿಂತುಕೊಳ್ಳಲು ಭೂವಿುಯು ಕಂಪಿಸುತ್ತದೆ; ದೃಷ್ಟಿಸಲು ಜನಾಂಗಗಳು ಬೆದರುತ್ತವೆ; ಪುರಾತನ ಪರ್ವತಗಳು ಸೀಳಿಹೋಗುತ್ತವೆ; ಸನಾತನ ಗಿರಿಗಳು ಕುಸಿದುಬೀಳುತ್ತವೆ; ಆತನ ಆಗಮನವು ಅನಾದಿಯಿಂದ ಹೀಗೆಯೇ ಇರುವದು.

7 ಇಗೋ, ಕೂಷಾನಿನ ಗುಡಾರಗಳು ಸಂಕಟಪಡುತ್ತಿವೆ, ವಿುದ್ಯಾನ್ ದೇಶದ ಡೇರೆಗಳು ನಡುಗುತ್ತಿವೆ.

8 ಯೆಹೋವನೇ, ನಿನಗೆ ನದಿಗಳ ಮೇಲೆ ರೌದ್ರವೋ? ಹೊಳೆಗಳಿಗೆ ಸಿಟ್ಟುಗೊಂಡಿದ್ದೀಯಾ? ಸಮುದ್ರದ ಮೇಲೆ ಕೋಪವೋ? ಏಕೆ ನಿನ್ನ ಅಶ್ವಗಳ ಮೇಲೆ ಆರೂಢನಾಗಿ ನಿನ್ನ ಜಯರಥಗಳಲ್ಲಿ ಆಸೀನನಾಗಿ ಬರುತ್ತಿದ್ದೀ?

9 ನಿನ್ನ ಬಿಲ್ಲು ಈಚೆಗೆ ತೆಗೆಯಲ್ಪಟ್ಟಿದೆ, (ಆಹಾ, ನಿನ್ನ ವಾಗ್ಬಾಣಗಳು ನಿಶ್ಚಿತ!) ಸೆಲಾ. ಭೂವಿುಯನ್ನು ನದಿಗಳಿಂದ ಭೇದಿಸಿಬಿಡುತ್ತೀ.

10 ಬೆಟ್ಟಗಳು ನಿನ್ನನ್ನು ನೋಡಿ ತಳಮಳಗೊಳ್ಳುತ್ತವೆ; ಅತಿವೃಷ್ಟಿಯು ಹೊಯ್ದುಕೊಂಡು ಹೋಗುತ್ತದೆ; ಸಾಗರವು ಆರ್ಭಟಿಸಿ ಕೈಗಳನ್ನು ಮೇಲಕ್ಕೆತ್ತುತ್ತದೆ.

11 ನಿನ್ನ ಹಾರುವ ಬಾಣಗಳ ಬೆಳಗಿಗೂ ನಿನ್ನ ವಿುಂಚುವ ಈಟಿಯ ಹೊಳಪಿಗೂ ಸೂರ್ಯಚಂದ್ರರು ತಮ್ಮ ಗೂಡಿನಲ್ಲಿ ಅಡಗಿಕೊಳ್ಳುತ್ತಾರೆ.

12 ನೀನು ಸಿಟ್ಟಿನಿಂದ ಲೋಕವನ್ನು ತುಳಿದುಕೊಂಡು ಹೋಗುತ್ತೀ, ಕೋಪದಿಂದ ಜನಾಂಗಗಳನ್ನು ಒಕ್ಕುತ್ತೀ.

13 ನಿನ್ನ ಪ್ರಜೆಯ ರಕ್ಷಣೆಗೆ, ನಿನ್ನ ಅಭಿಷಿಕ್ತನ ಉದ್ಧಾರಕ್ಕೆ ಹೊರಟಿದ್ದೀ; ತಲೆಯನ್ನು ಕುತ್ತಿಗೆಯ ಬುಡದವರೆಗೆ ಹೊಡೆದುಹಾಕಿದ ಹಾಗೆ ತಳಾದಿಯು ಬೈಲಾಗುವಷ್ಟರ ಮಟ್ಟಿಗೆ ನೀನು ದುಷ್ಟನ ಮನೆಯನ್ನು ಹೊಡೆದಿದ್ದೀ. ಸೆಲಾ.

14 ದಿಕ್ಕಿಲ್ಲದವರನ್ನು ಮರೆಯಲ್ಲಿ ನುಂಗಲು ಹೆಚ್ಚಳಪಡುವವರಾಗಿ ನನ್ನನ್ನು ಚದರಿಸಬೇಕೆಂದು ನನ್ನ ಮೇಲೆ ಬಿರುಗಾಳಿಯಂತೆ ನುಗ್ಗಿದ ಅವನ ಭಟರ ತಲೆಯನ್ನು ಅವನ ದೊಣ್ಣೆಗಳಿಂದಲೇ ಒಡೆದಿದ್ದೀ.

15 ನಿನ್ನ ಅಶ್ವಗಳನ್ನು ಏರಿದವನಾಗಿ ಸಮುದ್ರವನ್ನು ತುಳಿಯುತ್ತಾ ಮಹಾಜಲರಾಶಿಯನ್ನು ಹಾದುಹೋಗಿದ್ದೀ.


ಪ್ರವಾದಿಯ ಭಯವೂ ಭರವಸವೂ

16 ಅದು ನನಗೆ ಕೇಳಿಸಲು ನನ್ನ ಹೊಟ್ಟೆಯು ತಳಮಳಗೊಂಡಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು. ವಿಪತ್ಕಾಲವು ಜನರನ್ನು ಎದುರಾಯಿಸಿ ಅವರ ಮೇಲೆ ಬೀಳುವಾಗ ನಾನು ಅದನ್ನು ತಾಳ್ಮೆಯಿಂದ ಕಾದಿರಬೇಕೆಂದು ನನಗೆ ತಿಳಿಯಲು ಕ್ಷಯವು ನನ್ನ ಎಲುಬುಗಳಲ್ಲಿ ಸೇರಿತು, ನಾನು ನಿಂತ ಹಾಗೆಯೇ ನಡುಗಿದೆನು.

17 ಆಹಾ, ಅಂಜೂರವು ಚಿಗುರದಿದ್ದರೂ ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ ಹೊಲಗದ್ದೆಗಳು ಆಹಾರವನ್ನು ಕೊಡದೆಹೋದರೂ ಹಿಂಡು ಹಟ್ಟಿಯೊಳಗಿಂದ ನಾಶವಾದರೂ ಮಂದೆಯು ಕೊಟ್ಟಿಗೆಗಳೊಳಗೆ ಇಲ್ಲದಿದ್ದರೂ

18 ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು.

19 ಕರ್ತನಾದ ಯೆಹೋವನೇ ನನ್ನ ಬಲ; ಆತನು ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕುಮಾಡಿ ನನ್ನ ಉನ್ನತಪ್ರದೇಶಗಳಲ್ಲಿ ನನ್ನನ್ನು ನಡಿಸುತ್ತಾನೆ. ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು