ಯೆಹೋಶುವ 12 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲ್ಯರು ಸೋಲಿಸಿದ ಅರಸರ ಪಟ್ಟಿ 1 ಇಸ್ರಾಯೇಲ್ಯರು ಯೊರ್ದನ್ ಹೊಳೆಯ ಪೂರ್ವದಿಕ್ಕಿನಲ್ಲಿ ಅರ್ನೋನ್ ತಗ್ಗು ಮೊದಲುಗೊಂಡು ಹೆರ್ಮೋನ್ ಪರ್ವತದವರೆಗಿದ್ದ ಪ್ರದೇಶವನ್ನೂ ತಗ್ಗಾದ ಪ್ರದೇಶದ ಪೂರ್ವಭಾಗವನ್ನೂ ಸ್ವಾಧೀನ ಮಾಡಿಕೊಂಡು ಅವುಗಳಲ್ಲಿದ್ದ ಅರಸರನ್ನು ಸಂಹರಿಸಿದರು. 2 [ಅವರಲ್ಲಿ ಮೊದಲನೆಯವನು] ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾದ ಸೀಹೋನ್ ಎಂಬವನು. ಅರ್ನೋನ್ ತಗ್ಗಿನ ಅಂಚಿನಲ್ಲಿರುವ ಅರೋಯೇರ್ ಪಟ್ಟಣವು ಮತ್ತು ತಗ್ಗಿನಲ್ಲಿಯೇ ಇರುವ ಪಟ್ಟಣವು ಇವುಗಳು ಮೊದಲುಗೊಂಡು ಅಮ್ಮೋನಿಯರ ಮೇರೆಯಾಗಿರುವ ಯಬ್ಬೋಕ್ ಹೊಳೆಯವರೆಗಿರುವ ಗಿಲ್ಯಾದಿನ ಅರ್ಧ ಪ್ರಾಂತವು, 3 ಯೊರ್ದನ್ ಹೊಳೆಯ ಪೂರ್ವದಲ್ಲಿ ಕಿನ್ನೆರೋತ್ ಸಮುದ್ರದಿಂದ ಲವಣ ಸಮುದ್ರವೆನಿಸಿಕೊಳ್ಳುವ ಅರಾಬಾ ಸಮುದ್ರದ ಹತ್ತಿರವಿರುವ ಬೇತ್‍ಯೆಷಿಮೋತಿನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ತಗ್ಗಾದ ಪ್ರದೇಶವು ಇವೇ ಅವನ ರಾಜ್ಯ. 4 ಅಷ್ಟರೋತ್, ಎದ್ರೈ ಎಂಬ ಊರುಗಳಲ್ಲಿ ವಾಸವಾಗಿದ್ದ ರೆಫಾಯರ ವಂಶಸ್ಥನೂ ಬಾಷಾನಿನ ಅರಸನೂ ಆದ ಓಗನು [ಎರಡನೆಯವನು]. 5 ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಪಟ್ಟಣವು, ಗೆಷೂರ್ಯರ ಮತ್ತು ಮಾಕತೀಯರ ಮೇರೆಯವರೆಗಿದ್ದ ಬಾಷಾನ್ ಸೀಮೆ, ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧಪ್ರಾಂತವು ಇವೇ ಇವನ ರಾಜ್ಯ. 6 ಯೆಹೋವನ ಸೇವಕನಾದ ಮೋಶೆಯು ಇಸ್ರಾಯೇಲ್ಯರ ಸಹಿತವಾಗಿ ಆ ಇಬ್ಬರನ್ನೂ ಸೋಲಿಸಿ ಅವರ ರಾಜ್ಯಗಳನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಕುಲದ ಅರ್ಧ ಜನರಿಗೂ ಸ್ವಾಸ್ತ್ಯವಾಗಿ ಕೊಟ್ಟನು. 7 ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಯೊರ್ದನ್ ಹೊಳೆಯ ಪಶ್ಚಿಮದಲ್ಲಿ ಲೆಬನೋನ್ ತಗ್ಗಿನಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಬೆಟ್ಟದ ಮೇಲಿನ ಪ್ರದೇಶ, 8 ಇಳಕಲಿನ ಪ್ರದೇಶ, ತಗ್ಗಾದ ಪ್ರದೇಶ, ಬೆಟ್ಟಗಳ ಬುಡದಲ್ಲಿರುವ ಸೀಮೆ, ಅರಣ್ಯ, ದಕ್ಷಿಣಪ್ರಾಂತ್ಯ ಇವುಗಳಲ್ಲಿ ಆಳುತ್ತಿದ್ದ ಹಿತ್ತಿಯ ಅಮೋರಿಯ ಕಾನಾನ್ ಪೆರಿಜ್ಜೀಯ ಹಿವ್ವಿಯ ಯೆಬೂಸಿಯ ಅರಸರನ್ನು ಸೋಲಿಸಿ ಅವರ ದೇಶಗಳನ್ನು ಇಸ್ರಾಯೇಲ್ ಕುಲಭಾಗಗಳಿಗೆ ಸ್ವಾಸ್ತ್ಯವಾಗಿ ಕೊಟ್ಟನು. ಆ ಅರಸರ ಪಟ್ಟಿಯು ಹೇಗಂದರೆ - 9 ಯೆರಿಕೋವಿನ ಅರಸನು 1; ಬೇತೇಲಿನ ಹತ್ತಿರವಿರುವ ಆಯಿ ಎಂಬ ಊರಿನ ಅರಸನು 1; 10 ಯೆರೂಸಲೇವಿುನ ಅರಸನು 1; ಹೆಬ್ರೋನಿನ ಅರಸನು 1; 11 ಯರ್ಮೂತಿನ ಅರಸನು 1; ಲಾಕೀಷಿನ ಅರಸನು 1; ಎಗ್ಲೋನಿನ ಅರಸನು 1; ಗೆಜೆರಿನ ಅರಸನು 1; 12-13 ದೆಬೀರಿನ ಅರಸನು 1; ಗೆದೆರಿನ ಅರಸನು 1; 14 ಹೊರ್ಮದ ಅರಸನು 1; ಅರಾದಿನ ಅರಸನು 1; 15 ಲಿಬ್ನದ ಅರಸನು 1; ಅದುಲ್ಲಾಮದ ಅರಸನು 1; 16 ಮಕ್ಕೇದದ ಅರಸನು 1; ಬೇತೇಲಿನ ಅರಸನು 1; 17 ತಪ್ಪೂಹದ ಅರಸನು 1; ಹೇಫೆರಿನ ಅರಸನು 1; 18 ಅಫೇಕದ ಅರಸನು 1, ಲಷ್ಷಾರೋನಿನ ಅರಸನು 1; 19 ಮಾದೋನಿನ ಅರಸನು 1; ಹಾಚೋರಿನ ಅರಸನು 1; 20 ಶಿಮ್ರೋನ್ಮೆರೋನಿನ ಅರಸನು 1; ಅಕ್ಷಾಫಿನ ಅರಸನು 1; 21 ತಾನಕದ ಅರಸನು 1; ಮೆಗಿದ್ದೋವಿನ ಅರಸನು 1; 22 ಕೆದೆಷಿನ ಅರಸನು 1; ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು 1; 23 ದೋರ್ ಬೆಟ್ಟದ ಮೇಲಿರುವ ದೋರಿನ ಅರಸನು 1; ಗಿಲ್ಗಾಲಿನವರ ಅರಸನು 1; 24 ತಿರ್ಚದ ಅರಸನು 1; ಒಟ್ಟು ಅರಸರು 31 ಮಂದಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India