Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ 2 - ಕನ್ನಡ ಸತ್ಯವೇದವು J.V. (BSI)


ಧಾನ್ಯಸಮರ್ಪಣಕ್ರಮ

1 ಯಾವನಾದರೂ ಯೆಹೋವನಿಗೆ ಧಾನ್ಯ ನೈವೇದ್ಯ ಮಾಡಬೇಕೆಂದಿದ್ದರೆ ಅದು ಗೋದಿಹಿಟ್ಟಾಗಿರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಹೊಯಿದು ಧೂಪವನ್ನಿಟ್ಟು

2 ಅದನ್ನು ಆರೋನನ ವಂಶದವರಾದ ಯಾಜಕರ ಬಳಿಗೆ ತರಬೇಕು. ಯಾಜಕನು ದೇವರಿಗೆ ನೈವೇದ್ಯವಾದದ್ದನ್ನು ಸೂಚಿಸುವದಕ್ಕಾಗಿ ಆ ಎಣ್ಣೆ ಬೆರಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನೂ ಧೂಪವೆಲ್ಲವನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮ ಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಸುವಾಸನೆಯನ್ನುಂಟುಮಾಡುವದು.

3 ಆ ನೈವೇದ್ಯದಲ್ಲಿ ವಿುಕ್ಕದ್ದು ಆರೋನನಿಗೂ ಅವನ ವಂಶದವರಿಗೂ ಆಗಬೇಕು; ಅದು ಯೆಹೋವನಿಗೆ ಅರ್ಪಿತವಾದ ಹೋಮಶೇಷವಾದದರಿಂದ ಮಹಾಪರಿಶುದ್ಧವಾಗಿದೆ.

4 ನೀವು ಒಲೆಯಲ್ಲಿ ಅಡಿಗೆಮಾಡಿದ್ದನ್ನು ನೈವೇದ್ಯವಾಗಿ ಸಮರ್ಪಿಸಬೇಕಾದರೆ ಅದು ಎಣ್ಣೆ ಬೆರಸಿದ ಹುಳಿಯಿಲ್ಲದ ಗೋದಿಹಿಟ್ಟಿನ ಹೋಳಿಗೆಗಳಾದರೂ ಎಣ್ಣೆ ಹಾಕಿದ ಹುಳಿಯಿಲ್ಲದ ಕಡುಬುಗಳಾದರೂ ಆಗಿರಬೇಕು.

5 ನೀವು ಅರ್ಪಿಸುವದು ಕಬ್ಬಿಣದ ಹಂಚಿನ ಮೇಲೆ ಸುಟ್ಟದ್ದಾದರೆ ಅದು ಎಣ್ಣೆ ಬೆರಸಿದ ಹುಳಿಯಿಲ್ಲದ ಗೋದಿಹಿಟ್ಟಿನದಾಗಿರಬೇಕು.

6 ಅದನ್ನು ಚೂರುಚೂರಾಗಿ ಮುರಿದು ಅದರ ಮೇಲೆ ಎಣ್ಣೆ ಹೊಯಿದು ನೈವೇದ್ಯ ಮಾಡಬೇಕು.

7 ನೀವು ಅರ್ಪಿಸುವದು ಬಾಂಡ್ಲೆಯಲ್ಲಿ ಪಕ್ವಮಾಡಿದ್ದಾದರೆ ಅದು ಎಣ್ಣೆ ಹೊಯಿದ ಗೋದಿಹಿಟ್ಟಿನದಾಗಿರಬೇಕು.

8 ನೀವು ಈ ಮೂರು ವಿಧವಾದ ನೈವೇದ್ಯವನ್ನು ಯೆಹೋವನಿಗೆ ಸಮರ್ಪಿಸುವದಾದರೆ ಯಾಜಕನಿಗೆ ಒಪ್ಪಿಸಬೇಕು; ಅವನೇ ಅದನ್ನು ಯಜ್ಞವೇದಿಯ ಬಳಿಗೆ ತರಬೇಕು.

9 ಯಾಜಕನು ನೈವೇದ್ಯವನ್ನು ಸೂಚಿಸುವದಕ್ಕಾಗಿ ಅದರಲ್ಲಿ ಸ್ವಲ್ಪಭಾಗವನ್ನು ಪ್ರತ್ಯೇಕಿಸಿ ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಸುವಾಸನೆಯನ್ನುಂಟುಮಾಡುವದು.

10 ನೈವೇದ್ಯದಲ್ಲಿ ವಿುಕ್ಕದ್ದು ಆರೋನನಿಗೂ ಅವನ ವಂಶದವರಿಗೂ ಆಗಬೇಕು; ಅದು ಯೆಹೋವನಿಗೆ ಅರ್ಪಿತವಾದ ಹೋಮಶೇಷವಾದದರಿಂದ ಮಹಾಪರಿಶುದ್ಧವಾಗಿದೆ.

11 ನೀವು ಯೆಹೋವನಿಗೆ ನೈವೇದ್ಯವಾಗಿ ಸಮರ್ಪಿಸುವ ಯಾವ ಪದಾರ್ಥವನ್ನಾಗಲಿ ಹುಳಿಹಿಟ್ಟಿನಿಂದ ಮಾಡಬಾರದು. ಯಾವ ಹುಳಿಪದಾರ್ಥವನ್ನಾಗಲಿ ಸಿಹಿಪದಾರ್ಥವನ್ನಾಗಲಿ ಯೆಹೋವನಿಗೆ ಹೋಮ ಮಾಡಕೂಡದು.

12 ಅವುಗಳನ್ನು ಪ್ರಥಮಫಲವಾಗಿ ಯೆಹೋವನಿಗೆ ಸಮರ್ಪಿಸಬಹುದೇ ಹೊರತು ಯಜ್ಞವೇದಿಯ ಮೇಲೆ ಸುವಾಸನೆಯನ್ನುಂಟುಮಾಡುವದಕ್ಕಾಗಿ ಹೋಮಮಾಡಕೂಡದು.

13 ಎಲ್ಲಾ ನೈವೇದ್ಯ ಪದಾರ್ಥಗಳಿಗೂ ಉಪ್ಪುಹಾಕಿ ಸಮರ್ಪಿಸಬೇಕು. ಉಪ್ಪು ಯೆಹೋವನ ಸಂಗಡ ನಿಮಗಿರುವ ಒಡಂಬಡಿಕೆಯನ್ನು ಸೂಚಿಸುವದರಿಂದ ಅದು ಯಾವ ನೈವೇದ್ಯದ್ರವ್ಯವಾದರೂ ಉಪ್ಪಿಲ್ಲದೆ ಇರಬಾರದು. ನೀವು ಅರ್ಪಿಸುವ ಎಲ್ಲಾ ಪದಾರ್ಥಗಳಲ್ಲಿಯೂ ಉಪ್ಪು ಸೇರೇ ಇರಬೇಕು.

14 ನೀವು ಯೆಹೋವನಿಗೆ ಪ್ರಥಮಫಲ ನೈವೇದ್ಯವನ್ನು ಮಾಡಬೇಕಾದರೆ ಗೋದಿಯ ಹಸೀ ತೆನೆಗಳನ್ನು ಬೆಂಕಿಯಲ್ಲಿ ಸುಟ್ಟು ಉವ್ಮಿುಗೆ ಸಮರ್ಪಿಸಬೇಕು.

15 ಅದು ನೈವೇದ್ಯ ವಸ್ತುವಾದದರಿಂದ ಅದರ ಮೇಲೆ ಎಣ್ಣೆ ಹೊಯಿದು ಧೂಪವಿಡಬೇಕು.

16 ಯಾಜಕನು ನೈವೇದ್ಯವನ್ನು ಸೂಚಿಸುವದಕ್ಕಾಗಿ ಆ ಉವ್ಮಿುಗೆಯಲ್ಲಿಯೂ ಎಣ್ಣೆಯಲ್ಲಿಯೂ ಸ್ವಲ್ಪಭಾಗವನ್ನು ತೆಗೆದುಕೊಂಡು ಧೂಪವೆಲ್ಲವನ್ನು ಅದಕ್ಕೆ ಸೇರಿಸಿ ಅಗ್ನಿಯ ಮೂಲಕ ಯೆಹೋವನಿಗೆ ಹೋಮಮಾಡಬೇಕು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು