Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನೆಹೆಮೀಯ 11 - ಕನ್ನಡ ಸತ್ಯವೇದವು J.V. (BSI)


ನೆಹೆಮೀಯನ ಚರಿತ್ರೆಯ ಪೂರಣೆ ( 11—13 ) ಯೆರೂಸಲೇವಿುನಲ್ಲಿಯೂ ಯೆಹೂದದೇಶದ ಬೇರೆ ಪಟ್ಟಣಗಳಲ್ಲಿಯೂ ವಾಸಿಸುತ್ತಿದ್ದವರ ಪಟ್ಟಿ

1 ಇಸ್ರಾಯೇಲ್ಯರ ಪ್ರಭುಗಳು ಮಾತ್ರ ಯೆರೂಸಲೇವಿುನಲ್ಲಿ ವಾಸಿಸುತ್ತಿದ್ದರು. ಉಳಿದ ಜನರೊಳಗೆ ಹತ್ತತ್ತು ಮಂದಿಯಲ್ಲಿ ಒಂಭತ್ತು ಮಂದಿ ತಮ್ಮ ತಮ್ಮ ಊರುಗಳಲ್ಲಿದ್ದುಕೊಂಡು ಒಬ್ಬನು ಪವಿತ್ರನಗರವಾಗಿರುವ ಯೆರೂಸಲೇವಿುನಲ್ಲಿ ವಾಸಿಸುವದಕ್ಕಾಗಿ ಅಲ್ಲಿಗೆ ಬರುವಂತೆ ಚೀಟುಹಾಕಿ ಗೊತ್ತು ಮಾಡಿದರು.

2 ಮತ್ತು ಸ್ವೇಚ್ಫೆಯಿಂದ ಯೆರೂಸಲೇವಿುನಲ್ಲಿ ವಾಸಿಸುವದಕ್ಕೆ ಮನಸ್ಸುಮಾಡಿದಂಥವರನ್ನು ಜನರು ಆಶೀರ್ವದಿಸಿದರು.

3 ಯೆರೂಸಲೇವಿುನಲ್ಲಿ ವಾಸಿಸುತ್ತಿದ್ದ [ಯೆಹೂದ] ಸಂಸ್ಥಾನಪ್ರಧಾನರ ಪಟ್ಟಿ. (ಸಾಧಾರಣ ಇಸ್ರಾಯೇಲ್ಯರೂ ಯಾಜಕರೂ ಲೇವಿಯರೂ ದೇವಸ್ಥಾನದಾಸರೂ ಸೊಲೊಮೋನನ ದಾಸರ ವಂಶದವರೂ ತಮ್ಮ ತಮ್ಮ ಸ್ವಾಸ್ತ್ಯಗಳಿರುವ ಯೆಹೂದ ದೇಶದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.

4 ಯೆರೂಸಲೇವಿುನಲ್ಲಿ ಯೆಹೂದ ಬೆನ್ಯಾಮೀನ್ ಕುಲಗಳವರಲ್ಲಿ ಕೆಲವರು ವಾಸವಾಗಿದ್ದರು.) ಯೆಹೂದ ಕುಲದವರಲ್ಲಿ - ಒಬ್ಬನು ಅತಾಯ; ಇವನು ಉಜ್ಜೀಯನ ಮಗನು; ಇವನು ಜೆಕರ್ಯನ ಮಗನು; ಇವನು ಅಮರ್ಯನ ಮಗನು; ಇವನು ಶೆಫಟ್ಯನ ಮಗನು; ಇವನು ಮಹಲಲೇಲನ ಮಗನು; ಇವನು ಪೆರೆಚ್ ಸಂತಾನದವನು.

5 ಇನ್ನೊಬ್ಬನು ಮಾಸೇಯ; ಇವನು ಬಾರೂಕನ ಮಗನು; ಇವನು ಕೊಲ್ಹೋಜೆಯ ಮಗನು; ಇವನು ಹಜಾಯನ ಮಗನು; ಇವನು ಅದಾಯನ ಮಗನು; ಇವನು ಯೋಯಾರೀಬನ ಮಗನು; ಇವನು ಜೆಕರ್ಯನ ಮಗನು; ಇವನು ಶೇಲಹನ ಸಂತಾನದವನು.

6 ಯೆರೂಸಲೇವಿುನಲ್ಲಿ ವಾಸಿಸುತ್ತಿದ್ದ ಪೆರೆಚ್ ಸಂತಾನದ ರಣವೀರರು ನಾನೂರರುವತ್ತೆಂಟು ಮಂದಿ.

7 ಬೆನ್ಯಾಮೀನ್ ಕುಲದವರಲ್ಲಿ - ಸಲ್ಲು; ಇವನು ಮೆಷುಲ್ಲಾಮನ ಮಗನು; ಇವನು ಯೋವೇದನ ಮಗನು; ಇವನು ಪೆದಾಯನ ಮಗನು; ಇವನು ಕೋಲಾಯನ ಮಗನು; ಇವನು ಮಾಸೇಯನ ಮಗನು; ಇವನು ಈತೀಯೇಲನ ಮಗನು; ಇವನು ಯೆಶಾಯನ ಮಗನು.

8 ರಣವೀರರಾದ ಇವನ ಬಂಧುಜನರು ಒಂಭೈನೂರಿಪ್ಪತ್ತೆಂಟು ಮಂದಿ.

9 ಜಿಕ್ರಿಯ ಮಗನಾದ ಯೋವೇಲನು ಇವರ ನಾಯಕನು; ಹಸ್ಸೆನೂವನ ಮಗನಾದ ಯೆಹೂದನು ಎರಡನೆಯ ಪುರಾಧಿಕಾರಿ.

10 ಯಾಜಕರಲ್ಲಿ - ಯೆದಾಯ, ಯೋಯಾರೀಬ್, ಯಾಕೀನ್,

11 ಅಹೀಟೂಬನ ಸಂತಾನದವನಾದ ಮೆರಾಯೋತನಿಂದ ಹುಟ್ಟಿದ ಚಾದೋಕನ ಮರಿಮಗನೂ ಮೆಷುಲ್ಲಾಮನ ಮೊಮ್ಮಗನೂ ಹಿಲ್ಕೀಯನ ಮಗನೂ ದೇವಾಲಯದ ಅಧಿಪತಿಯೂ ಆದ ಸೆರಾಯ ಇವರು.

12 ಇವರೂ ದೇವಾಲಯದ ಸೇವೆ ನಡಿಸುತ್ತಿದ್ದ ಇವರ ಬಂಧುಗಳೂ ಎಂಟುನೂರಿಪ್ಪತ್ತೆರಡು ಮಂದಿ. ಇವರಲ್ಲದೆ ಅದಾಯನೆಂಬವನು ಇನ್ನೊಬ್ಬನು. ಇವನು ಯೆರೋಹಾಮನ ಮಗನು; ಇವನು ಪೆಲಲ್ಯನ ಮಗನು; ಇವನು ಅವ್ಚಿುೕಯ ಮಗನು; ಇವನು ಜೆಕರ್ಯನ ಮಗನು; ಇವನು ಪಷ್ಹೂರನ ಮಗನು; ಇವನು ಮಲ್ಕೀಯನ ಮಗನು.

13 ಗೋತ್ರಪ್ರಧಾನರಾದ ಈ ಅದಾಯನ ಬಂಧುಗಳು ಇನ್ನೂರ ನಾಲ್ವತ್ತೆರಡು ಮಂದಿ. ಅಮಷ್ಷೈ ಎಂಬವನು ಮತ್ತೊಬ್ಬನು. ಇವನು ಅಜರೇಲನ ಮಗನು; ಇವನು ಅಹಜೈಯ ಮಗನು; ಇವನು ಮೆಷಿಲ್ಲೇಮೋತನ ಮಗನು; ಇವನು ಇಮ್ಮೇರನ ಮಗನು.

14 ರಣವೀರರಾಗಿದ್ದ ಈ ಅಮಷ್ಷೈಯ ಬಂಧುಗಳು ನೂರಿಪ್ಪತ್ತೆಂಟು ಮಂದಿ. ಹಗ್ಗೆದೋಲೀಮನ ಮಗನಾದ ಜಬ್ದೀಯೇಲನು ಇವರ ನಾಯಕನು.

15 ಲೇವಿಯರಲ್ಲಿ - ಹಷ್ಷೂಬನ ಮಗನೂ ಅಜ್ರೀಕಾಮನ ಮೊಮ್ಮಗನೂ ಹಷಬ್ಯನ ಮರಿಮಗನೂ ಬುನ್ನೀವಂಶದವನೂ ಆದ ಶೆಮಾಯನೂ

16 ಲೇವಿಗೋತ್ರಪ್ರಧಾನರಲ್ಲಿ ದೇವಾಲಯದ ಲೌಕಿಕಕಾರ್ಯಗಳ ಮೇಲ್ವಿಚಾರಕರಾದ ಶಬ್ಬೆತೈ, ಯೋಜಾಬಾದ್ ಎಂಬವರೂ

17 ಮೀಕನ ಮಗನೂ ಜಬ್ದೀಯ ಮೊಮ್ಮಗನೂ ಆಸಾಫನ ಮರಿಮಗನೂ ಪ್ರಾರ್ಥನಾಸಮಯದಲ್ಲಿ - ಕೃತಜ್ಞತಾಸ್ತುತಿಮಾಡಿರಿ ಎಂದು ಹೇಳಿ ಭಜಕರನ್ನು ನಡಿಸುತ್ತಿದ್ದ ಮತ್ತನ್ಯ, ತನ್ನ ಬಂಧುಗಳಲ್ಲಿ ದ್ವಿತೀಯ ಸ್ಥಾನದವನಾದ ಬಕ್ಬುಕ್ಯ, ಶಮ್ಮೂವನ ಮಗನೂ ಗಾಲಾಲನ ಮೊಮ್ಮಗನೂ ಯೆದೂತೂನನ ಮರಿಮಗನೂ ಆದ ಅಬ್ದ ಎಂಬವರೂ.

18 ಪರಿಶುದ್ಧ ನಗರದಲ್ಲಿದ್ದ ಎಲ್ಲಾ ಲೇವಿಯರು ಇನ್ನೂರೆಂಭತ್ತನಾಲ್ಕು ಮಂದಿ.

19 ದ್ವಾರಪಾಲಕರಲ್ಲಿ - ಅಕ್ಕೂಬ್ ಟಲ್ಮೋನರೂ ಬಾಗಲುಗಳನ್ನು ಕಾಯುತ್ತಿದ್ದ ಇವರ ಬಂಧುಗಳೂ; ಒಟ್ಟು ನೂರೆಪ್ಪತ್ತೆರಡು ಮಂದಿ.

20 ಉಳಿದ ಇಸ್ರಾಯೇಲ್ಯರೂ ಯಾಜಕರೂ ಲೇವಿಯರೂ ತಮ್ಮ ತಮ್ಮ ಸ್ವಾಸ್ತ್ಯಗಳಿರುವ ಯೆಹೂದದ ಎಲ್ಲಾ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.

21 ದೇವಸ್ಥಾನದಾಸರು ಓಪೇಲ್ ಗುಡ್ಡದಲ್ಲಿ ವಾಸಿಸುತ್ತಿದ್ದರು; ಚೀಹ, ಗಿಷ್ಪ ಎಂಬವರು ಇವರ ನಾಯಕರು.

22 ದೇವಾಲಯ ಸೇವಾ ಸಂಬಂಧದಲ್ಲಿ ಗಾಯಕರಾದ ಆಸಾಫ್ಯರಿಗೆ ಸೇರಿದ ಬಾನೀಯ ಮಗನೂ ಹಷಬ್ಯನ ಮೊಮ್ಮಗನೂ ಮತ್ತನ್ಯನ ಮರಿಮಗನೂ ಮೀಕನ ವಂಶದವನೂ ಆದ ಉಜ್ಜೀಯು ಯೆರೂಸಲೇವಿುನಲ್ಲಿದ್ದ ಲೇವಿಯರ ನಾಯಕನು.

23 ಇವರ ಮತ್ತು ಗಾಯಕರ ಅನುದಿನದ ಕರ್ತವ್ಯಾಂಶಗಳ ವಿಷಯವಾಗಿ ರಾಜನಿಯಮವಿತ್ತು.

24 ಮೆಷೇಜಬೇಲನ ಮಗನೂ ಜೆರಹನ ಸಂತಾನದವನೂ ಯೆಹೂದ ಕುಲದವನೂ ಆದ ಪೆತಹ್ಯನು ಪ್ರಜೆಗಳ ಎಲ್ಲಾ ಕಾರ್ಯಗಳ ಸಂಬಂಧದಲ್ಲಿ ರಾಜನ ಕಾರಭಾರಿಯಾಗಿದ್ದನು.

25 ಭೂಸ್ವಾಸ್ತ್ಯವಿದ್ದವರು ವಾಸಿಸುತ್ತಿದ್ದ ಊರುಗಳು - ಕಿರ್ಯತರ್ಬ, ದೀಬೋನ್, ಯೆಕಬ್ಜೆಯೇಲ್, ಇವುಗಳೂ

26 ಇವುಗಳ ಗ್ರಾಮಗಳೂ ಯೇಷೂವ,

27 ಮೋಲಾದ, ಬೇತ್ಪೆಲೆಟ್, ಹಚರ್ಷೂವಲ್ ಇವುಗಳೂ

28 ಬೇರ್ಷೆಬವೂ ಅದರ ಗ್ರಾಮಗಳೂ ಚಿಕ್ಲಗ್ ಊರೂ

29 ಮೆಕೋನವೂ ಅದರ ಗ್ರಾಮಗಳೂ ಏನ್ರಿಮ್ಮೋನ್, ಚೊರ್ರ, ಯರ್ಮೂತ್ ಇವುಗಳೂ

30 ಜನೋಹ, ಅದುಲ್ಲಾಮ್ ಇವುಗಳೂ ಇವುಗಳ ಗ್ರಾಮಗಳೂ ಲಾಕೀಷ್ ಊರೂ ಇದರ ಪ್ರಾಂತಗಳೂ ಅಜೇಕವೂ ಅದರ ಗ್ರಾಮಗಳೂ ಯೆಹೂದ ಕುಲದವರ ನಿವಾಸಸ್ಥಾನಗಳು. ಅವರು ಬೇರ್ಷೆಬದಿಂದ ಹಿನ್ನೋಮ್ ತಗ್ಗಿನವರೆಗೂ ವಾಸಿಸುತ್ತಿದ್ದರು.

31 ಗೆಬ, ವಿುಕ್ಮಾಷ್, ಅಯ್ಯಾ, ಗ್ರಾಮ ಸಹಿತವಾದ

32 ಬೇತೇಲ್ ಎಂಬ ಊರುಗಳೂ, ಅನಾತೋತ್,

33 ನೋಬ್, ಅನನ್ಯ, ಹಾಚೋರ್, ರಾಮಾ, ಗಿತ್ತಯಿಮ್,

34 ಹಾದೀದ್, ಚೆಬೋಯೀಮ್, ನೆಬಲ್ಲಾಟ್,

35 ಲೋದ್, ಓನೋ, ಗೇಹರಾಷೀಮ್ ಎಂಬ ಊರುಗಳೂ ಬೆನ್ಯಾಮೀನ್ ಕುಲದವರ ನಿವಾಸಸ್ಥಾನಗಳು.

36 ಲೇವಿಯರಲ್ಲಿ ಕೆಲವು ವರ್ಗಗಳವರು ಯೆಹೂದ್ಯರಲ್ಲಿಯೂ ಕೆಲವರು ಬೆನ್ಯಾಮೀನ್ಯರಲ್ಲಿಯೂ ವಾಸಿಸುತ್ತಿದ್ದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು