Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 75 - ಕನ್ನಡ ಸತ್ಯವೇದವು J.V. (BSI)


ಗರ್ವಿಷ್ಠರನ್ನು ತಗ್ಗಿಸುವ ದೇವರ ಸ್ತುತಿ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಅಲ್ತಷ್ಖೇತೆಂಬ ರಾಗ; ಕೀರ್ತನೆ; ಹಾಡು; ಆಸಾಫನದು
( ಕೀರ್ತ. 57 )

1 ದೇವರೇ, ಕೊಂಡಾಡುತ್ತೇವೆ; ನಿನ್ನನ್ನು ಕೊಂಡಾಡುತ್ತೇವೆ. ನಿನ್ನ ನಾಮಮಹತ್ವವು ಸಮೀಪವಾಗಿದೆ; ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುತ್ತಾರೆ.

2 [ದೇವರು ನುಡಿದದ್ದು -] ಕ್ಲುಪ್ತಕಾಲವು ಬಂದಾಗ ನಾನೇ ನೀತಿಯಿಂದ ತೀರ್ಪುಕೊಡುವೆನು.

3 ಎಲ್ಲಾ ನಿವಾಸಿಗಳೊಡನೆ ಭೂವಿುಯು ಕರಗಿಹೋದರೂ ಅದರ ಸ್ತಂಭಗಳನ್ನು ಸ್ಥಾಪಿಸುವವನು ನಾನೇ [ಎಂಬದು]. ಸೆಲಾ.

4 ಹೆಮ್ಮೆಗಾರರೇ, ಕೊಚ್ಚಿಕೊಳ್ಳಬೇಡಿರಿ; ದುಷ್ಟರೇ, ನಿಮ್ಮ ಕೊಂಬುಗಳನ್ನು ಮೇಲೆತ್ತಬೇಡಿರಿ;

5 ಕೊಂಬುಗಳನ್ನು ಮೇಲೆತ್ತಬೇಡಿರಿ; ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿರಿ ಎಂದು ಹೇಳುವೆನು.

6 ಯಾಕಂದರೆ ಉದ್ಧಾರವು ಮೂಡಲಿಂದಾಗಲಿ ಪಡುವಲಿಂದಾಗಲಿ ಅರಣ್ಯದಿಂದಾಗಲಿ ಬರುವದಿಲ್ಲ.

7 ದೇವರೇ ನ್ಯಾಯಾಧೀಶನಾಗಿ ಒಬ್ಬನನ್ನು ತೆಗೆದು ಇನ್ನೊಬ್ಬನನ್ನು ಸ್ಥಾಪಿಸುತ್ತಾನೆ.

8 ಯೆಹೋವನ ಕೈಯಲ್ಲಿ ಪಾತ್ರೆಯದೆ; ಅದು ಔಷಧಿವಿುಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿದೆ. ಅದರಿಂದ ಹೊಯ್ದು ಹಂಚುತ್ತಾನೆ. ಲೋಕದ ದುಷ್ಟರೆಲ್ಲರೂ ಅದರೊಳಗಿನ ಮಡ್ಡಿಯನ್ನು ಸಹ ಕುಡಿದು ಮುಗಿಸಬೇಕು.

9 ನಾನಾದರೋ ಸದಾ ವರ್ಣಿಸುವವನಾಗಿ ಯಾಕೋಬವಂಶದವರ ದೇವರನ್ನು ಸಂಕೀರ್ತಿಸುವೆನು.

10 ದುಷ್ಟರ ಕೊಂಬುಗಳನ್ನೆಲ್ಲಾ ಮುರಿದುಬಿಡುವೆನು; ಆದರೆ ಭಕ್ತರ ಕೊಂಬುಗಳು ಎತ್ತಲ್ಪಡುವವು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು