Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 70 - ಕನ್ನಡ ಸತ್ಯವೇದವು J.V. (BSI)


ಶತ್ರುಗಳಿಂದ ಬೇಗನೆ ಸಂರಕ್ಷಿಸಬೇಕೆಂದು ಯೆಹೋವನನ್ನು ಬೇಡಿಕೊಳ್ಳುವದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ದಾವೀದನ ಕೀರ್ತನೆ; ಜ್ಞಾಪಕಾರ್ಥನೈವೇದ್ಯ ಸಮರ್ಪಣೆಯಲ್ಲಿ ಹಾಡತಕ್ಕದ್ದು
( ಕೀರ್ತ. 40.13-17 )

1 ದೇವರೇ, ದಯವಿಟ್ಟು ನನ್ನನ್ನು ರಕ್ಷಿಸು. ಯೆಹೋವನೇ, ಬೇಗ ಬಂದು ಸಹಾಯಮಾಡು.

2 ನನ್ನ ಪ್ರಾಣಕ್ಕಾಗಿ ಸಮಯನೋಡುವವರು ಆಶಾಭಂಗಪಟ್ಟು ಅಪಮಾನಹೊಂದಲಿ; ನನ್ನ ಆಪತ್ತಿನಲ್ಲಿ ಸಂತೋಷಿಸುವವರು ಮಾನಭಂಗದಿಂದ ಹಿಂದಿರುಗಿ ಓಡಲಿ.

3 ಆಹಾ, ಆಹಾ ಎಂದು ಪರಿಹಾಸ್ಯ ಮಾಡುವವರು ತಮಗಾಗುವ ಅಪಮಾನದಿಂದ ಬೆಂಗೊಟ್ಟು ಓಡಿಹೋಗಲಿ.

4 ನಿನ್ನ ದರ್ಶನವನ್ನು ಕೋರುವವರೆಲ್ಲರು ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ; ನಿನ್ನ ಜಯದಲ್ಲಿ ಆನಂದಿಸುವವರು - ದೇವರಿಗೆ ಸ್ತೋತ್ರವೆಂದು ಯಾವಾಗಲೂ ಅನ್ನುವವರಾಗಲಿ.

5 ನಾನಾದರೋ ಕುಗ್ಗಿದವನೂ ದಿಕ್ಕಿಲ್ಲದವನೂ ಆಗಿದ್ದೇನೆ; ದೇವರೇ, ಶೀಘ್ರವಾಗಿ ಬಾ. ಯೆಹೋವನೇ, ನೀನೇ ನನಗೆ ಸಹಾಯಕನೂ ರಕ್ಷಕನೂ ಆಗಿದ್ದೀ; ತಡಮಾಡಬೇಡ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು