Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 6 - ಕನ್ನಡ ಸತ್ಯವೇದವು J.V. (BSI)


ಕಷ್ಟಪೀಡಿತನಾದ ಭಕ್ತನ ಪ್ರಾರ್ಥನೆ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ತಂತಿವಾದ್ಯದ ಮಂದರಸ್ಥಾಯಿಯೊಡನೆ ಹಾಡತಕ್ಕದ್ದು; ದಾವೀದನು ರಚಿಸಿದ ಕೀರ್ತನೆ

1 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ; ರೋಷದಿಂದ ದಂಡಿಸಬೇಡ.

2 ಯೆಹೋವನೇ, ಕನಿಕರಿಸು; ನಾನು ನಿಶ್ಶಕ್ತನಾಗಿ ಹೋಗಿದ್ದೇನೆ. ಯೆಹೋವನೇ, ವಾಸಿಮಾಡು; ನನ್ನ ಎಲುಬುಗಳೆಲ್ಲಾ ತತ್ತರಿಸುತ್ತವೆ.

3 ನನ್ನ ಪ್ರಾಣವು ಸಹ ಬಹಳವಾಗಿ ತತ್ತರಿಸುತ್ತದೆ; ಯೆಹೋವನೇ, ಎಷ್ಟರವರೆಗೂ [ನನ್ನ ಕೈ ಬಿಟ್ಟಿರುವಿ]?

4 ಯೆಹೋವನೇ, ಅಭಿಮುಖನಾಗಿ ನನ್ನನ್ನು ಬಿಡಿಸು; ನಿನ್ನ ಕೃಪೆಯ ನಿವಿುತ್ತವೇ ನನ್ನನ್ನು ರಕ್ಷಿಸು.

5 ಮೃತರಿಗೆ ನಿನ್ನ ಜ್ಞಾಪಕವಿರುವದಿಲ್ಲವಲ್ಲಾ; ಪಾತಾಳದಲ್ಲಿ ನಿನ್ನನ್ನು ಸ್ತುತಿಸುವವರು ಯಾರು?

6 ನಾನು ನರನರಳಿ ದಣಿದಿದ್ದೇನೆ; ಪ್ರತಿರಾತ್ರಿಯೂ ನನ್ನ ಕಣ್ಣೀರಿನಿಂದ ಮಂಚವು ತೇಲಾಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನೆದು ಹೋಗುತ್ತದೆ.

7 ದುಃಖದಿಂದ ನನ್ನ ಕಣ್ಣು ಡೊಗರಾಯಿತು; ವಿರೋಧಿಗಳ ಬಾಧೆಯ ದೆಸೆಯಿಂದಲೇ ಮೊಬ್ಬಾಯಿತು.

8 ಧರ್ಮವನ್ನು ಮೀರಿ ನಡೆಯುವವರೇ, ನೀವೆಲ್ಲರು ನನ್ನಿಂದ ತೊಲಗಿಹೋಗಿರಿ; ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟು

9 ನನ್ನ ವಿಜ್ಞಾಪನೆಯನ್ನು ಕೇಳಿದ್ದಾನಲ್ಲಾ; ನನ್ನ ಪ್ರಾರ್ಥನೆಯನ್ನು ಅಂಗೀಕರಿಸುವನು.

10 ನನ್ನ ವಿರೋಧಿಗಳೆಲ್ಲರು ಆಶೆಗೆಟ್ಟು ಕಳವಳಗೊಳ್ಳುವರು; ಅವರು ಫಕ್ಕನೆ ಆಶಾಭಂಗಪಟ್ಟು ಹಿಂದಿರುಗುವರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು