Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 136 - ಕನ್ನಡ ಸತ್ಯವೇದವು J.V. (BSI)


ಯೆಹೋವಸ್ತುತಿ
( ಕೀರ್ತ. 135 )

1 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾದದ್ದು.

2 ದೇವಾಧಿದೇವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನ ಕೃಪೆಯು ಶಾಶ್ವತವಾದದ್ದು.

3 ಕರ್ತರ ಕರ್ತನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನ ಕೃಪೆಯು ಶಾಶ್ವತವಾದದ್ದು.

4 ಮಹತ್ಕಾರ್ಯಗಳನ್ನು ನಡಿಸುವದಕ್ಕೆ ಆತನೊಬ್ಬನೇ ಶಕ್ತನು; ಆತನ ಕೃಪೆಯು ಶಾಶ್ವತವಾದದ್ದು.

5 ಆತನು ಆಕಾಶವನ್ನು ಜ್ಞಾನದಿಂದ ನಿರ್ಮಿಸಿದ್ದಾನೆ; ಆತನ ಕೃಪೆಯು ಶಾಶ್ವತವಾದದ್ದು.

6 ಆತನು ಭೂವಿುಯನ್ನು ಜಲರಾಶಿಗಳ ಮೇಲೆ ಹಾಸಿದ್ದಾನೆ; ಆತನ ಕೃಪೆಯು ಶಾಶ್ವತವಾದದ್ದು.

7 ಆತನು ಮಹಾಜ್ಯೋತಿರ್ಮಂಡಲಗಳನ್ನು ಸೃಷ್ಟಿಸಿದ್ದಾನೆ; ಆತನ ಕೃಪೆಯು ಶಾಶ್ವತವಾದದ್ದು.

8 ಸೂರ್ಯನು ಹಗಲನ್ನಾಳುತ್ತಾನೆ; ಆತನ ಕೃಪೆಯು ಶಾಶ್ವತವಾದದ್ದು.

9 ಚಂದ್ರನಕ್ಷತ್ರಗಳು ರಾತ್ರಿಯನ್ನಾಳುತ್ತವೆ; ಆತನ ಕೃಪೆಯು ಶಾಶ್ವತವಾದದ್ದು.

10 ಆತನು ಐಗುಪ್ತ್ಯರ ಚೊಚ್ಚಲಮಕ್ಕಳನ್ನು ಸಂಹರಿಸಿದನು; ಆತನ ಕೃಪೆಯು ಶಾಶ್ವತವಾದದ್ದು.

11 ಇಸ್ರಾಯೇಲ್ಯರನ್ನು ಅವರ ಮಧ್ಯದಿಂದ ಹೊರತಂದನು; ಆತನ ಕೃಪೆಯು ಶಾಶ್ವತವಾದದ್ದು.

12 ತನ್ನ ಭುಜಬಲ, ಶಿಕ್ಷಾಹಸ್ತ ಇವುಗಳಿಂದ ಅವರನ್ನು ಬಿಡಿಸಿದನು; ಆತನ ಕೃಪೆಯು ಶಾಶ್ವತವಾದದ್ದು.

13 ಆತನು ಕೆಂಪುಸಮುದ್ರವನ್ನು ಭೇದಿಸಿದನು; ಆತನ ಕೃಪೆಯು ಶಾಶ್ವತವಾದದ್ದು.

14 ಇಸ್ರಾಯೇಲ್ಯರನ್ನು ಅದರ ಮಧ್ಯದಲ್ಲಿಯೇ ನಡಿಸಿದನು; ಆತನ ಕೃಪೆಯು ಶಾಶ್ವತವಾದದ್ದು.

15 ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪುಸಮುದ್ರದಲ್ಲಿ ಕೆಡವಿಬಿಟ್ಟನು; ಆತನ ಕೃಪೆಯು ಶಾಶ್ವತವಾದದ್ದು.

16 ಆತನು ತನ್ನ ಪ್ರಜೆಯನ್ನು ಅರಣ್ಯದೊಳಗೆ ಕರತಂದನು; ಆತನ ಕೃಪೆಯು ಶಾಶ್ವತವಾದದ್ದು.

17 ದೊಡ್ಡ ಅರಸರನ್ನು ಹೊಡೆದನು; ಆತನ ಕೃಪೆಯು ಶಾಶ್ವತವಾದದ್ದು.

18 ಶ್ರೇಷ್ಠರಾಜರನ್ನು ಸಂಹರಿಸಿದನು; ಆತನ ಕೃಪೆಯು ಶಾಶ್ವತವಾದದ್ದು.

19 ಅಮೋರಿಯರ ಅರಸನಾದ ಸೀಹೋನನು ಅವರಲ್ಲೊಬ್ಬನು; ಆತನ ಕೃಪೆಯು ಶಾಶ್ವತವಾದದ್ದು.

20 ಬಾಷಾನಿನ ಅರಸನಾದ ಓಗನು ಇನ್ನೊಬ್ಬನು; ಆತನ ಕೃಪೆಯು ಶಾಶ್ವತವಾದದ್ದು.

21 ಅವರ ದೇಶವನ್ನು ಇಸ್ರಾಯೇಲ್ಯರಿಗೆ ಕೊಟ್ಟನು; ಆತನ ಕೃಪೆಯು ಶಾಶ್ವತವಾದದ್ದು.

22 ಆತನ ಸೇವಕರಿಗೆ ಅದು ಸ್ವಾಸ್ತ್ಯವಾಯಿತು; ಆತನ ಕೃಪೆಯು ಶಾಶ್ವತವಾದದ್ದು.

23 ನಾವು ದೀನಾವಸ್ಥೆಯಲ್ಲಿದ್ದಾಗ ನಮ್ಮನ್ನು ನೆನಪುಮಾಡಿಕೊಂಡನು; ಆತನ ಕೃಪೆಯು ಶಾಶ್ವತವಾದದ್ದು.

24 ನಮ್ಮ ಶತ್ರುಗಳಿಂದ ನಮ್ಮನ್ನು ಬಿಡಿಸಿದನು; ಆತನ ಕೃಪೆಯು ಶಾಶ್ವತವಾದದ್ದು.

25 ಎಲ್ಲಾ ಜೀವಿಗಳಿಗೂ ಆಹಾರಕೊಡುವವನು ಆತನೇ; ಆತನ ಕೃಪೆಯು ಶಾಶ್ವತವಾದದ್ದು.

26 ಪರಲೋಕದಲ್ಲಿರುವ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನ ಕೃಪೆಯು ಶಾಶ್ವತವಾದದ್ದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು