Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 131 - ಕನ್ನಡ ಸತ್ಯವೇದವು J.V. (BSI)


ಭಕ್ತರ ಬಾಲಭಾವ ಯಾತ್ರಾಗೀತ; ದಾವೀದನದು
( ಜ್ಞಾ. 23.26 ; ಮತ್ತಾ. 18.3 )

1 ಯೆಹೋವನೇ, ನನ್ನ ಎದೆಯಲ್ಲಿ ಹವ್ಮಿುಲ್ಲ; ನನಗೆ ಸೊಕ್ಕಿನ ಕಣ್ಣಿಲ್ಲ; ಅಸಾಧ್ಯಕಾರ್ಯಗಳಲ್ಲಿ ಕೈಹಾಕುವದಿಲ್ಲ.

2 ನಿಜವಾಗಿ ನನ್ನ ಮನಸ್ಸನ್ನು ಸಮಾಧಾನಪಡಿಸಿದ್ದೇನೆ; ತಾಯಿಯ ಬಳಿಯಲ್ಲಿರುವ ಮೊಲೆಬಿಡಿಸಿದ ಕೂಸಿನಂತೆ ನೆಮ್ಮದಿಯಿಂದಿದೆ. ನನ್ನಲ್ಲಿ ನನ್ನ ಮನಸ್ಸು ಮೊಲೆಬಿಡಿಸಿದ ಕೂಸಿನಂತಿದೆ.

3 ಇಸ್ರಾಯೇಲೇ, ಇಂದಿನಿಂದ ಯುಗಯುಗಕ್ಕೂ ಯೆಹೋವನನ್ನೇ ನಿರೀಕ್ಷಿಸಿಕೊಂಡಿರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು