Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 129 - ಕನ್ನಡ ಸತ್ಯವೇದವು J.V. (BSI)


ಯೆಹೋವನು ತನ್ನ ಭಕ್ತರನ್ನು ಪೀಡಿಸುವವರಿಂದ ಬಿಡಿಸುವನೆಂಬ ನಿರೀಕ್ಷೆ ಯಾತ್ರಾಗೀತ
( ಕೀರ್ತ. 124 )

1 ನಮ್ಮ ಯೌವನಾರಭ್ಯ ಶತ್ರುಗಳು ನಮ್ಮನ್ನು ಹಲವು ಸಾರಿ ಬಾಧಿಸಿದ್ದಾರೆಂದು ಇಸ್ರಾಯೇಲು ಹೇಳಲಿ.

2 ನಾವು ಯೌವನಾರಭ್ಯ ಎಷ್ಟೋ ಸಾರಿ ಬಾಧೆಹೊಂದಿದರೂ ಅವರು ನಮ್ಮನ್ನು ಜಯಿಸಲಿಲ್ಲ.

3 ಉಳುವವರು ನಮ್ಮ ಬೆನ್ನಿನ ಮೇಲೆ ಉತ್ತುತ್ತು ಉದ್ದವಾದ ಗೆರೆಗಳನ್ನು ಮಾಡಿದರು;

4 ಆದರೆ ನೀತಿಸ್ವರೂಪನಾದ ಯೆಹೋವನು ದುಷ್ಟರು ಹಾಕಿದ ಬಂಧನಗಳನ್ನು ಛೇಧಿಸಿಬಿಟ್ಟನು.

5 ಚೀಯೋನನ್ನು ದ್ವೇಷಿಸುವವರೆಲ್ಲರು ಅವಮಾನದಿಂದ ಹಿಂದಿರುಗಲಿ.

6 ಅವರು ಮಾಳಿಗೆಯ ಮೇಲಣ ಹುಲ್ಲಿನಂತಾಗಲಿ; ಅದು ಹೂವುಬಿಡುವದಕ್ಕೆ ಮೊದಲೇ ಒಣಗಿಹೋಗುತ್ತದೆ;

7 ಅದನ್ನು ಕೊಯ್ಯುವವನ ಹಿಡಿಯೂ ಸಿವುಡುಕಟ್ಟುವವನ ಉಡಿಲೂ ತುಂಬುವದಿಲ್ಲ.

8 ಹಾದುಹೋಗುವವರು - ಯೆಹೋವನು ನಿಮ್ಮನ್ನು ಆಶೀರ್ವದಿಸಲಿ ಎಂದೂ ಯೆಹೋವನಾಮದಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇವೆ ಎಂದೂ ಹೇಳುವದಿಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು