ಕೀರ್ತನೆಗಳು 125 - ಕನ್ನಡ ಸತ್ಯವೇದವು J.V. (BSI)ಯೆಹೋವನೇ ವಿಶ್ವಾಸಿಗಳ ಆಶ್ರಯ ಯಾತ್ರಾಗೀತ 1 ಯೆಹೋವನಲ್ಲಿ ಭರವಸವಿಡುವವರು ಚೀಯೋನ್ ಪರ್ವತದ ಹಾಗೆ ಇದ್ದಾರೆ; ಅದು ಕದಲುವದಿಲ್ಲ, ಸದಾ ಸ್ಥಿರವಾಗಿರುತ್ತದೆ. 2 ಪರ್ವತಗಳು ಯೆರೂಸಲೇವಿುನ ಸುತ್ತಲೂ ಹೇಗೋ ಹಾಗೆಯೇ ಯೆಹೋವನು ಇಂದಿನಿಂದ ಸದಾಕಾಲವೂ ತನ್ನ ಜನರ ಸುತ್ತಲೂ ಇರುವನು. 3 ದುಷ್ಟರ ದಂಡಾಧಿಕಾರವು ನೀತಿವಂತರ ಸ್ವಾಸ್ತ್ಯದಲ್ಲಿ ಉಳಿಯುವದೇ ಇಲ್ಲ; ಉಳಿದರೆ ನೀತಿವಂತರೂ ಅಕ್ರಮಕ್ಕೆ ಕೈ ಹಚ್ಚಾರು. 4 ಯೆಹೋವನೇ, ಒಳ್ಳೆಯವರೂ ಯಥಾರ್ಥಚಿತ್ತರೂ ಆಗಿರುವವರಿಗೆ ಉಪಕಾರಮಾಡು. 5 ಯೆಹೋವನು ಡೊಂಕುದಾರಿಹಿಡಿದವರನ್ನು ಪಾತಕಿಗಳ ಗತಿಗೆ ಹೋಗಮಾಡಲಿ. ಇಸ್ರಾಯೇಲ್ಯರಿಗೆ ಶುಭವುಂಟಾಗಲಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India