ಕೀರ್ತನೆಗಳು 122 - ಕನ್ನಡ ಸತ್ಯವೇದವು J.V. (BSI)ಯಾತ್ರಿಕರು ಯೆರೂಸಲೇಮನ್ನು ವಂದಿಸುವದು ಯಾತ್ರಾಗೀತ; ದಾವೀದನದು 1 ಯೆಹೋವನ ಮಂದಿರಕ್ಕೆ ಹೋಗೋಣ, ಬಾ ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು. 2 ಯೆರೂಸಲೇಮೇ, ನಮ್ಮ ಕಾಲುಗಳು ನಿನ್ನ ಬಾಗಲುಗಳಲ್ಲಿ ಸೇರಿರುತ್ತವಲ್ಲಾ! 3 ಯೆರೂಸಲೇಮೇ, ನೀನು ಸರಿಯಾದ ಹೊಂದಿಕೆಯಿಂದ ಕಟ್ಟಲ್ಪಟ್ಟ ನಗರವಾಗಿದ್ದೀ. 4 ಕುಲಗಳು ಅಂದರೆ ಯಾಹುವಿನ ಕುಲದವರು ಯೆಹೋವನ ನಾಮಕೀರ್ತನೆಗೋಸ್ಕರ ಇಲ್ಲಿಗೇ ಯಾತ್ರೆಮಾಡುತ್ತಿದ್ದರು. ಇದು ಇಸ್ರಾಯೇಲ್ಯರಲ್ಲಿದ್ದ ಕಟ್ಟಳೆಯಷ್ಟೆ. 5 ನ್ಯಾಯಪೀಠಗಳಾಗಿರುವ ದಾವೀದನ ಮನೆತನದವರ ಸಿಂಹಾಸನಗಳು ಇಲ್ಲಿಯೇ ಇದ್ದವಲ್ಲಾ. 6 ಯೆರೂಸಲೇವಿುನ ಶುಭಕ್ಕೋಸ್ಕರ ಪ್ರಾರ್ಥಿಸಿರಿ. [ಯೆರೂಸಲೇಮೇ,] ನಿನ್ನನ್ನು ಪ್ರೀತಿಸುವವರಿಗೆ ಸೌಭಾಗ್ಯವುಂಟಾಗಲಿ. 7 ನಿನ್ನ ಪೌಳಿಗೋಡೆಗಳೊಳಗೆ ಶುಭವುಂಟಾಗಲಿ; ನಿನ್ನ ಅರಮನೆಗಳಲ್ಲಿ ಸೌಭಾಗ್ಯವಿರಲಿ. 8 ನನ್ನ ಬಂಧುವಿುತ್ರರ ನಿವಿುತ್ತವಾಗಿ ನಿನಗೆ ಶುಭವಾಗಲೆಂದು ಹೇಳುತ್ತೇನೆ. 9 ನಮ್ಮ ಯೆಹೋವದೇವರ ಮಂದಿರ ನಿವಿುತ್ತವಾಗಿ ನಿನಗೆ ಸುಕ್ಷೇಮವನ್ನು ಹಾರೈಸುತ್ತೇನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India