ಕೀರ್ತನೆಗಳು 120 - ಕನ್ನಡ ಸತ್ಯವೇದವು J.V. (BSI)ಮೋಸಗಾರರ ಮಧ್ಯದಲ್ಲಿ ವಾಸಿಸುವವನ ಪ್ರಾರ್ಥನೆ ಯಾತ್ರಾಗೀತ 1 ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು; ಆತನು ಸದುತ್ತರವನ್ನು ದಯಪಾಲಿಸಿದನು. 2 ಯೆಹೋವನೇ, ಸುಳ್ಳುಬಾಯಿಯೂ ವಂಚಿಸುವ ನಾಲಿಗೆಯೂ ಉಳ್ಳವರಿಂದ ನನ್ನನ್ನು ಬಿಡಿಸು. 3 ವಂಚಿಸುವ ನಾಲಿಗೆಯೇ, ದೇವರು ನಿನಗೇನು ಕೊಡಬೇಕು? ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು? 4 ಶೂರನ ಹದವಾದ ಬಾಣಗಳನ್ನೂ ಜಾಲಿಯ ಕೆಂಡಗಳನ್ನೂ ನಿನಗೆ ಕೊಡಲಿ. 5 ಅಯ್ಯೋ, ನಾನು ಮೇಷೆಕಿನವರಲ್ಲಿ ತಂಗಬೇಕಲ್ಲಾ! ಕೇದಾರಿನವರ ಪಾಳೆಯಗಳಲ್ಲಿ ವಾಸಿಸಬೇಕಾಯಿತಲ್ಲಾ! 6 ಸಮಾಧಾನವನ್ನು ಹಗೆಮಾಡುವವರೊಳಗೆ ಇದ್ದು ಇದ್ದು ಸಾಕಾಯಿತು. 7 ನಾನು ಸಮಾಧಾನಪ್ರಿಯನು; ಅವರೋ, ಮಾತಾಡಿದರೆ ಯುದ್ಧಕ್ಕೆ ಬರುತ್ತಾರೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India