Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಎಜ್ರ 2 - ಕನ್ನಡ ಸತ್ಯವೇದವು J.V. (BSI)


ಸೆರೆಯಿಂದ ತಿರಿಗಿ ಬಂದವರ ಖಾನೇಷುಮಾರಿ

1 ಸೆರೆಯಿಂದ ತಿರಿಗಿ ಬಂದ [ಯೆಹೂದ] ಸಂಸ್ಥಾನದವರ ಖಾನೇಷುಮಾರಿ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬೆಲಿಗೆ ಸೆರೆಯೊಯ್ಯಲ್ಪಟ್ಟವರಲ್ಲಿ

2 ಯೆರೂಸಲೇವಿುಗೂ ಯೆಹೂದ ಪ್ರಾಂತದ ಸ್ವಂತ ಪಟ್ಟಣಗಳಿಗೂ ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ವಿುಸ್ಪಾರ್, ಬಿಗ್ವೈ, ರೆಹೂಮ್, ಬಾಣ ಎಂಬ ನಾಯಕರೊಡನೆ ತಿರಿಗಿ ಬಂದವರು ಯಾರಂದರೆ -


ಸಾಧಾರಣರಾದ ಇಸ್ರಾಯೇಲ್ ಪುರುಷರ ಸಂಖ್ಯೆ -

3 ಪರೋಷಿನವರು 2172

4 ಶೆಫಟ್ಯನವರು 372

5 ಆರಹನವರು 775

6 ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬ್ ಸಂತಾನದವರು 2812

7 ಏಲಾವಿುನವರು 1254

8 ಜತ್ತೂವಿನವರು 945

9 ಜಕ್ಕೈಯವರು 760

10 ಬಾನೀಯವರು 642

11 ಬೇಬೈಯವರು 623

12 ಅಜ್ಗಾದಿನವರು 1222

13 ಅದೋನೀಕಾವಿುನವರು 666

14 ಬಿಗ್ವೈಯವರು 2056

15 ಆದೀನನವರು 454

16 ಆಟೇರಿನವರಾದ ಹಿಜ್ಕೀಯನ ಸಂತಾನದವರು 98

17 ಬೇಚೈಯವರು 323

18 ಯೋರನವರು 112

19 ಹಾಷುವಿುನವರು 223

20 ಗಿಬ್ಬಾರಿನವರು 95

21 ಬೇತ್ಲೆಹೇವಿುನವರು 123

22 ನೆಟೋಫ ಊರಿನವರು 56

23 ಅನಾತೋತ್ ಊರಿನವರು 128

24 ಅಜ್ಮಾವೆತಿನವರು 42

25 ಕಿರ್ಯತ್ಯಾರೀಮ್ ಕೆಫೀರ ಬೇರೋತ್ ಊರುಗಳವರು 743

26 ರಾಮಾ ಗೆಬ ಊರುಗಳವರು 621

27 ವಿುಕ್ಮಾಸಿನವರು 122

28 ಬೇತೇಲ್ ಆಯಿ ಎಂಬ ಊರುಗಳವರು 223

29 ನೆಬೋವಿನವರು 52

30 ಮಗ್ಬೀಷಿನವರು 156

31 ಬೇರೆ ಏಲಾವಿುನವರು 1254

32 ಹಾರಿಮನವರು 320

33 ಲೋದ್, ಹಾದೀದ್, ಓನೋ ಎಂಬ ಊರುಗಳವರು 725

34 ಯೆರಿಕೋವಿನವರು 345

35 ಸೆನಾಹನವರು 3630

36 ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು 973

37 ಇಮ್ಮೇರನವರು 1052

38 ಪಷ್ಹೂರನವರು 1247

39 ಹಾರಿಮನವರು 1017

40 ಲೇವಿಯರಲ್ಲಿ - ಹೋದವ್ಯನವರಾದ ಯೇಷೂವ, ಕದ್ಮೀಯೇಲ್ ಇವರ ಸಂತಾನದವರು 74

41 ಗಾಯಕರಲ್ಲಿ - ಆಸಾಫ್ಯರು 128

42 ದ್ವಾರಪಾಲಕರಲ್ಲಿ - ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ ಇವರ ಸಂತಾನದವರು ಒಟ್ಟು 139

43 ದೇವಸ್ಥಾನದಾಸರಲ್ಲಿ - ಜೀಹ, ಹಸೂಫ,

44 ಟಬ್ಬಾವೋತ್, ಕೇರೋಸ್, ಸೀಯಹಾ, ಪಾದೋನ್,

45-46 ಲೆಬಾನ, ಹಗಾಬ, ಅಕ್ಕೂಬ್, ಹಾಗಾಬ್,

47 ಶಮ್ಲೈ, ಹಾನಾನ್, ಗಿದ್ದೇಲ್, ಗಹರ್, ರೆವಾಯ,

48-49 ರೆಚೀನ್, ನೆಕೋದ, ಗಜ್ಜಾಮ್, ಉಜ್ಜ, ಪಾಸೇಹ,

50 ಬೇಸೈ, ಅಸ್ನ, ಮೆಗೂನೀಮ್, ನೆಫೀಸೀಮ್,

51-52 ಬಕ್ಬೂಕ್, ಹಕ್ಕೂಫ, ಹರ್ಹೂರ್, ಬಚ್ಲೂತ್,

53 ಮೆಹೀದ, ಹರ್ಷ, ಬರ್ಕೋಸ್, ಸೀಸೆರ, ತೆಮಹ,

54 ನೆಚೀಹ, ಹಟೀಫ, ಇವರ ಸಂತಾನದವರೂ.

55 ಸೊಲೊಮೋನನ ದಾಸರಲ್ಲಿ - ಸೋಟೈ,

56 ಹಸ್ಸೋಫೆರೆತ್, ಪೆರೂದ, ಯಾಲ, ದರ್ಕೋನ್,

57 ಗಿದ್ದೇಲ್, ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆ ಬಾಯೀಮ್, ಆಮೀ ಇವರ ಸಂತಾನದವರೂ.

58 ಎಲ್ಲಾ ದೇವಸ್ಥಾನದಾಸರೂ ಸೊಲೊಮೋನನ ದಾಸರೂ ಒಟ್ಟು 392.

59 ತೇಲ್ಮೆಲಹ, ತೇಲ್ಹರ್ಷ, ಕೆರೂಬದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ ತಾವು ಇಸ್ರಾಯೇಲ್ಯರೆಂಬದನ್ನು

60 ಸ್ಥಾಪಿಸಲಾರದವರಾದ ದೆಲಾಯ, ಟೋಬೀಯ, ನೆಕೋದ, ಇವರ ಸಂತಾನದವರು 652.

61 ಯಾಜಕರಲ್ಲಿ - ಹಬಯ್ಯ, ಹಕ್ಕೋಜ್, ಬರ್ಜಿಲ್ಲೈ ಇವರ ಸಂತಾನದವರು. ( ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣು ಮಕ್ಕಳಲ್ಲೊಬ್ಬಾಕೆಯನ್ನು ಮದುವೆಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)

62 ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ

63 ಅಶುದ್ಧರೆಂದು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟರು. ಊರೀಮ್ ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬದಾಗಿ ದೇಶಾಧಿಪತಿಯು ತೀರ್ಪುಮಾಡಿದನು.

64 ಸರ್ವಸಮೂಹದವರ ಒಟ್ಟು ಸಂಖೈಯು ನಾಲ್ವತ್ತೆರಡು ಸಾವಿರದ ಮುನ್ನೂರರುವತ್ತು.

65 ಈ ಸಂಖೈಯಲ್ಲಿ ಲೆಕ್ಕಿಸಲ್ಪಡದ ಅವರ ದಾಸದಾಸಿಯರು ಏಳುಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರಲ್ಲಿ ಗಾಯಕರೂ ಗಾಯಕಿಯರೂ ಇನ್ನೂರು ಮಂದಿ ಇದ್ದರು.

66 ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ ಇನ್ನೂರ ನಾಲ್ವತ್ತೈದು ಹೇಸರಕತ್ತೆಗಳೂ

67 ನಾನೂರ ಮೂವತ್ತೈದು ಒಂಟೆಗಳೂ ಆರು ಸಾವಿರದ ಏಳು ನೂರ ಇಪ್ಪತ್ತು ಕತ್ತೆಗಳೂ ಇದ್ದವು.

68 ಗೋತ್ರಪ್ರಧಾನರಲ್ಲಿ ಕೆಲವರು ಯೆರೂಸಲೇವಿುನಲ್ಲಿ ಯೆಹೋವನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ತಿರಿಗಿ ಅದರ ಸ್ಥಳದಲ್ಲಿ ಕಟ್ಟುವದಕ್ಕೋಸ್ಕರ ಕಾಣಿಕೆಗಳನ್ನು ಕೊಟ್ಟರು.

69 ಅವರು ತಮ್ಮ ಸಾಮರ್ಥ್ಯಾನುಸಾರ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು - ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಎರಡು ಲಕ್ಷದ ಐವತ್ತು ಸಾವಿರ ತೊಲೆ ಬೆಳ್ಳಿ, ನೂರು ಯಾಜಕವಸ್ತ್ರಗಳು.

70 ಯಾಜಕ, ಲೇವಿಯ, ಗಾಯಕ, ದ್ವಾರಪಾಲಕ, ದೇವಸ್ಥಾನದಾಸ ಇವರೂ ಸಾಧಾರಣ ಜನರಲ್ಲಿ ಕೆಲವರೂ ತಮತಮಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲ್ಯರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು