Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 17 - ಕನ್ನಡ ಸತ್ಯವೇದವು J.V. (BSI)


ಯೆಹೋವನು ಆರೋನನ ಕೋಲನ್ನು ಚಿಗುರಿಸಿ ಅವನ ಅಧಿಕಾರವನ್ನು ಸ್ಥಾಪಿಸಿದ್ದು

1 ಯೆಹೋವನು ಮೋಶೆಗೆ ಹೇಳಿದ್ದೇನಂದರೆ -

2 ನೀನು ಇಸ್ರಾಯೇಲ್ಯರ ಸಂಗಡ ಮಾತಾಡಿ ಹೀಗೆ ಮಾಡಬೇಕು. ಒಂದೊಂದು ಕುಲದ ಅಧಿಪತಿಯಿಂದ ಒಂದೊಂದು ಕೋಲಿನ ಮೇರೆಗೆ ಹನ್ನೆರಡು ಕೋಲುಗಳನ್ನು ತೆಗೆದುಕೊಳ್ಳಬೇಕು. ಅವನವನ ಕೋಲಿನ ಮೇಲೆ ಆಯಾ ಕುಲಾಧಿಪತಿಯ ಹೆಸರನ್ನು ಬರೆಯಿಸಬೇಕು.

3 ಲೇವಿ ಕುಲಕ್ಕೂ ಒಂದು ಕೋಲು ಇರುವದರಿಂದ ಅದರ ಮೇಲೆ ಆರೋನನ ಹೆಸರನ್ನು ಬರೆಯಿಸಬೇಕು.

4 ನೀನು ಆ ಕೋಲುಗಳನ್ನು ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮುಂದೆ ನಾನು ನಿಮಗೆ ದರ್ಶನಕೊಡುವ ಸ್ಥಳದಲ್ಲಿ ಇಡಬೇಕು.

5 ನಾನು ಯಾರನ್ನು ಮೆಚ್ಚಿದ್ದೇನೋ ಅವನ ಕೋಲು ಚಿಗುರುವುದು. ಇಸ್ರಾಯೇಲ್ಯರು ನಿವ್ಮಿುಬ್ಬರಿಗೆ ವಿರೋಧವಾಗಿ ಮಾಡುವ ಗುಣುಗುಟ್ಟುವಿಕೆಯು ನನಗೆ ಇನ್ನು ಕೇಳಿಸದಂತೆ ಹೀಗೆ ನಿಲ್ಲಿಸಿಬಿಡುತ್ತೇನೆ ಅಂದನು.

6 ಅದಕ್ಕನುಸಾರವಾಗಿ ಮೋಶೆಯು ಇಸ್ರಾಯೇಲ್ಯರ ಸಂಗಡ ಮಾತಾಡಲಾಗಿ ಅವರ ಕುಲಾಧಿಪತಿಗಳೆಲ್ಲರೂ ಕುಲಕ್ಕೆ ಒಂದು ಕೋಲಿನ ಮೇರೆಗೆ ಹನ್ನೆರಡು ಕೋಲುಗಳನ್ನು ಅವನ ಕೈಗೆ ಕೊಟ್ಟರು; ಅವುಗಳೊಡನೆ ಆರೋನನ ಕೋಲೂ ಇತ್ತು.

7 ಮೋಶೆ ಆ ಕೋಲುಗಳನ್ನು ಆಜ್ಞಾಶಾಸನಗಳಿರುವ ಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಇಟ್ಟನು.

8 ಮರುದಿನ ಮೋಶೆ ಗುಡಾರದಲ್ಲಿ ಹೋಗಿ ನೋಡಲಾಗಿ ಆಹಾ, ಲೇವಿಕುಲಕ್ಕೋಸ್ಕರ ಆರೋನನು ಕೊಟ್ಟಿದ್ದ ಕೋಲು ಚಿಗುರಿ ಮೊಗ್ಗೆ ಬಿಟ್ಟು ಹೂವರಳಿ ಬಾದಾವಿು ಹಣ್ಣುಗಳನ್ನು ಫಲಿಸಿತ್ತು.

9 ಮೋಶೆ ಆ ಕೋಲುಗಳನ್ನೆಲ್ಲಾ ಯೆಹೋವನ ಸನ್ನಿಧಿಯಿಂದ ಇಸ್ರಾಯೇಲ್ಯರೆಲ್ಲರ ಬಳಿಗೆ ತಂದು ತೋರಿಸಿದನು; ಅವರು ನೋಡಿ ತಮ್ಮ ತಮ್ಮ ಕೋಲುಗಳನ್ನು ತೆಗೆದುಕೊಂಡರು.

10 ತರುವಾಯ ಯೆಹೋವನು ಮೋಶೆಗೆ - ಆರೋನನ ಕೋಲನ್ನು ತಿರಿಗಿ ಆಜ್ಞಾಶಾಸನಗಳ ಮುಂದೆ ಇಡಬೇಕು. ಅದು ತಿರುಗಿಬೀಳುವವರಿಗೆ ದೃಷ್ಟಾಂತವಾಗಿ ಅಲ್ಲೇ ಇರಬೇಕು; ಇವರು ಇನ್ನು ಮುಂದೆ ನನಗೆ ವಿರೋಧವಾಗಿ ಗುಣುಗುಟ್ಟಿ ನಾಶವಾಗದಂತೆ ನೀನು ಹೀಗೆ ಮಾಡಬೇಕು ಎಂದು ಆಜ್ಞಾಪಿಸಿದನು.

11 ಯೆಹೋವನ ಅಪ್ಪಣೆಯ ಪ್ರಕಾರವೇ ಮೋಶೆ ಮಾಡಿದನು.


ಯಾಜಕರೂ ಲೇವಿಯರೂ ದೇವದರ್ಶನದ ಗುಡಾರದ ವಿಷಯದಲ್ಲಿ ಜವಾಬ್ದಾರಿಗಳಾಗಿರಬೇಕೆಂದು ಯೆಹೋವನು ನೇವಿುಸಿ ಅವರಿಗೆ ಸಲ್ಲಬೇಕಾದ ಕಾಣಿಕೆಗಳನ್ನು ವಿವರಿಸಿದ್ದು

12 ಇಸ್ರಾಯೇಲ್ಯರು ಮೋಶೆಯ ಬಳಿಗೆ ಬಂದು ಅವನಿಗೆ - ನಾವು ಪ್ರಾಣಕಳಕೊಳ್ಳುವವರಾದೆವಲ್ಲಾ; ಇಲ್ಲದೆ ಹೋಗುತ್ತೇವೆ; ನಾವು ನಿಶ್ಶೇಷವಾಗಿ ಇಲ್ಲದೆ ಹೋಗುವ ಹಾಗೆ ಕಾಣುತ್ತದೆ;

13 ಯೆಹೋವನ ಗುಡಾರದ ಹತ್ತಿರಕ್ಕೆ ಬರುವವರೆಲ್ಲರೂ ಸಾಯುತ್ತಾರಷ್ಟೆ; ನಾವೆಲ್ಲರೂ ಹಾಗೆಯೇ ಸಾಯಬೇಕೇನು ಎಂದು ಹೇಳಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು