1 ಪೂರ್ವಕಾಲ ವೃತ್ತಾಂತ 9 - ಕನ್ನಡ ಸತ್ಯವೇದವು J.V. (BSI)ಯೆರೂಸಲೇವಿುನವರ ಪಟ್ಟಿ 1 ಎಲ್ಲಾ ಇಸ್ರಾಯೇಲ್ಯರು ವಂಶಾವಳಿಗಳಲ್ಲಿ ಲಿಖಿತರಾದರು; ಅವರ ಹೆಸರುಗಳು ಇಸ್ರಾಯೇಲ್ಯರ ಅರಸರ ಪುಸ್ತಕದಲ್ಲಿ ಬರೆದಿರುತ್ತವೆ. ಯೆಹೂದ್ಯರು ದೇವದ್ರೋಹಿಗಳಾದದರಿಂದ ಬಾಬೆಲಿಗೆ ಸೆರೆಯವರಾಗಿ ಹೋಗಬೇಕಾಯಿತು. 2 ಆಗ ಅವರ ಪಟ್ಟಣಗಳನ್ನೂ ಸ್ವಾಸ್ತ್ಯವನ್ನೂ ಮೊದಲು ಸ್ವಾಧೀನಮಾಡಿಕೊಂಡವರು ಇಸ್ರಾಯೇಲ್ಯರು, ಯಾಜಕರು, ಲೇವಿಯರು, ದೇವಸ್ಥಾನದಾಸರು ಇವರೇ. 3 ಯೆಹೂದ್ಯರು, ಬೆನ್ಯಾಮೀನ್ಯರು, ಎಫ್ರಾಯೀಮ್ಯರು, ಮನಸ್ಸೆಯರು ಇವರಲ್ಲಿ ಯೆರೂಸಲೇವಿುನಲ್ಲಿ ವಾಸಿಸುತ್ತಿದ್ದವರ ಪಟ್ಟಿ - 4 [ಯೆಹೂದಕುಲದವರಲ್ಲಿ] - ಊತೈ, (ಇವನು ಅಮ್ಮೀಹೂದನ ಮಗನು; ಇವನು ಒವ್ರಿುಯ ಮಗನು; ಇವನು ಇವ್ರಿುಯ ಮಗನು; ಇವನು ಬಾನೀಯ ಮಗನು; ಇವನು ಯೆಹೂದನ ಮಗನಾದ ಪೆರೆಚನ ಸಂತಾನದವನು) 5 ಶೇಲಾಹನ ಸಂತಾನದ ಚೊಚ್ಚಲನಾದ ಅಸಾಯ ಮತ್ತು ಅವನ ಮಕ್ಕಳು, 6 ಜೆರಹನ ಸಂತಾನದ ಯೆಯೂವೇಲ್, ಇವರೂ ಇವರ ಸಹೋದರರೂ; ಒಟ್ಟಿಗೆ ಆರುನೂರ ತೊಂಭತ್ತು ಮಂದಿ. 7 ಬೆನ್ಯಾಮೀನ್‍ಕುಲದವರಲ್ಲಿ ಮೆಷುಲ್ಲಾಮನ ಮಗನೂ ಹೋದವ್ಯನ ಮೊಮ್ಮಗನೂ ಹಸ್ಸೆನುವಾಹನ ಮರಿಮಗನೂ ಆಗಿರುವ ಸಲ್ಲೂ, 8 ಯೆರೋಹಾಮನ ಮಗನಾದ ಇಬ್ನೆಯಾಹ, ಉಜ್ಜೀಯ ಮಗನೂ ವಿುಕ್ರೀಯ ಮೊಮ್ಮಗನೂ ಆದ ಏಲಾ, ಶೆಫಟ್ಯನ ಮಗನೂ ರೆಯೂವೇಲನ ಮೊಮ್ಮಗನೂ ಇಬ್ನಿಯಾಹನ ಮರಿಮಗನೂ ಆದ ಮೆಷುಲ್ಲಾಮ್ ಇವರೂ ಇವರ ಸಹೋದರರೂ; 9 ಒಟ್ಟಿಗೆ ಒಂಭೈನೂರ ಐವತ್ತಾರು ಮಂದಿ. ಇವರೆಲರೂ ತಮ್ಮ ಗೋತ್ರಗಳಲ್ಲಿ ಪ್ರಧಾನಪುರುಷರು. 10 ಯಾಜಕರಲ್ಲಿ - ಯೆದಾಯ, ಯೆಹೋಯಾರೀಬ್, 11 ಯಾಕೀನ್, ಅಹೀಟೂಬನ ಸಂತಾನದವನಾದ ಮೆರಾಯೋತನಿಂದ ಹುಟ್ಟಿದ ಚಾದೋಕನ ಮರಿಮಗನೂ ಮೆಷುಲ್ಲಾಮನ ಮೊಮ್ಮಗನೂ ಹಿಲ್ಕೀಯನ ಮಗನೂ ದೇವಾಲಯದ ಅಧಿಪತಿಯಾಗಿದ್ದವನೂ ಆದ ಅಜರ್ಯ, 12 ಯೆರೋಹಾಮನ ಮಗನಾದ ಅದಾಯ ಇವರೂ ಇವರ ಸಹೋದರರೂ. ಯೆರೋಹಾಮನು ಪಶ್ಹೂರನ ಮಗನು; ಇವನು ಮಲ್ಕೀಯನ ಮಗನು; ಇವನು ಮಾಸೈಯ ಮಗನು; ಇವನು ಅದೀಯೇಲನ ಮಗನು; ಇವನು ಯಹ್ಜೇರನ ಮಗನು; ಇವನು ಮೆಷುಲ್ಲಾಮನ ಮಗನು; ಇವನು ಮೆಷಿಲ್ಲೇಮೋತನ ಮಗನು; ಇವನು ಇಮ್ಮೇರನ ಮಗನು. 13 ಗೋತ್ರಪ್ರಧಾನರೂ ದೇವಾಲಯ ಸೇವೆಯಲ್ಲಿ ಗಟ್ಟಿಗರೂ ಆಗಿದ್ದ ಇವರೂ ಇವರ ಸಹೋದರರೂ ಒಟ್ಟಿಗೆ ಸಾವಿರದ ಏಳುನೂರ ಅರುವತ್ತು ಮಂದಿ. 14 ಲೇವಿಯರಲ್ಲಿ ಹಷ್ಷೂಬನ ಮಗನೂ ಅಜ್ರೀಕಾಮನ ಮೊಮ್ಮಗನೂ ಹಷಬ್ಯನ ಮರಿಮಗನೂ ಮೆರಾರೀಗೋತ್ರದವನೂ ಆದ ಶೆಮಾಯ, 15 ಬಕ್ಬಕ್ಕರ್, ಹೆರೆಷ್, ಗಾಲಾಲ್, ಮೀಕನ ಮಗನೂ ಜಿಕ್ರೀಯ ಮೊಮ್ಮಗನೂ ಆಸಾಫನ ಮರಿಮಗನೂ ಆದ ಮತ್ತನ್ಯ, 16 ಶೆಮಾಯನ ಮಗನೂ ಗಾಲಾಲನ ಮೊಮ್ಮಗನೂ ಯೆದೂತೂನನ ಮರಿಮಗನೂ ಆದ ಓಬದ್ಯ, ನೆಟೋಫಾತ್ಯರ ಗ್ರಾಮಗಳಲ್ಲಿ ವಾಸವಾಗಿದ್ದ ಎಲ್ಕಾನನ ಮೊಮ್ಮಗನೂ ಆಸನ ಮಗನೂ ಆದ ಬೆರೆಕ್ಯ ಇವರೇ. 17 ದ್ವಾರಪಾಲಕರಲ್ಲಿ ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್ ಇವರೂ ಇವರ ಸಹೋದರರೂ. ಇವರಲ್ಲಿ ಶಲ್ಲೂಮನು ಪ್ರಮುಖನಾಗಿದ್ದನು. 18 ಶಲ್ಲೂಮ್ಯರು ಇಂದಿನವರೆಗೂ ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಲನ್ನು ಕಾಯುತ್ತಿರುತ್ತಾರೆ. ಇವರು ಲೇವಿಯರ ಪಾಳೆಯಗಳ ದ್ವಾರಪಾಲಕರು. 19 ಕೋರೇಯನ ಮಗನೂ ಎಬ್ಯಾಸಾಫನ ಮೊಮ್ಮಗನೂ ಕೋರಹನ ಮರಿಮಗನೂ ಆದ ಶಲ್ಲೂಮನೂ ಅವನ ಗೋತ್ರ ಬಂಧುಗಳಾದ ವಿುಕ್ಕ ಕೋರಹಿಯರೂ ಗುಡಾರದ ದ್ವಾರಪಾಲಕಸೇವೆಗೆ ನೇವಿುಸಲ್ಪಟ್ಟರು. ಇವರ ಪೂರ್ವಿಕರು ಯೆಹೋವನ ಪಾಳೆಯದ ಪ್ರವೇಶಸ್ಥಳವನ್ನು ಕಾಯುವವರಾಗಿದ್ದರು. 20 ಆಗ ಎಲ್ಲಾಜಾರನ ಮಗನಾದ ಫೀನೆಹಾಸನು ಅವರ ನಾಯಕನಾಗಿದ್ದನು; ಯೆಹೋವನು ಇವನ ಸಂಗಡ ಇದ್ದನು. 21 ಮೆಷೆಲೆಮ್ಯನ ಮಗನಾದ ಜೆಕರ್ಯನು ದೇವದರ್ಶನದ ಗುಡಾರದ ದ್ವಾರಪಾಲಕನಾಗಿದ್ದನು. 22 ದ್ವಾರಪಾಲಕ ಸೇವೆಗೆ ಪ್ರತ್ಯೇಕಿಸಲ್ಪಟ್ಟವರು ಒಟ್ಟಿಗೆ ಇನ್ನೂರ ಹನ್ನೆರಡು ಮಂದಿ; ಅವರ ಹೆಸರುಗಳು ಅವರವರ ಗ್ರಾಮಗಳ ಪಟ್ಟಿಗಳಲ್ಲಿ ಲಿಖಿತವಾಗಿದ್ದವು. ದಾವೀದನೂ ದರ್ಶಿಯಾದ ಸಮುವೇಲನೂ ಅವರನ್ನು ಈ ಉದ್ಯೋಗಕ್ಕೆ ನೇವಿುಸಿದರು. 23 ಅವರೂ ಅವರ ಮಕ್ಕಳೂ ಯೆಹೋವನ ಮಂದಿರದ ಅಂದರೆ ಗುಡಾರದ ಬಾಗಲುಗಳನ್ನು ಕಾಯುತ್ತಿದ್ದರು. 24 ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಈ ದಿಕ್ಕುಗಳಲ್ಲಿರುವ ಬಾಗಲುಗಳನ್ನು ಕಾಯುವವರಾಗಿದ್ದರು. 25 ಗ್ರಾಮಗಳಲ್ಲಿದ್ದ ಅವರ ಗೋತ್ರ ಬಂಧುಗಳು ಅವರ ಸಂಗಡ ಕೆಲಸಮಾಡುವದಕ್ಕೋಸ್ಕರ ಸರತಿಯ ಮೇಲೆ ಏಳೇಳು ದಿವಸ ಬರಬೇಕಾಯಿತು. 26 ಲೇವಿಯರಾದ ಮೇಲ್ಕಂಡ ನಾಲ್ಕು ಮಂದಿ ದ್ವಾರಪಾಲಕ ಮುಖ್ಯಸ್ಥರು ಜವಾಬುದಾರರಾಗಿದ್ದು ದೇವಾಲಯದ ಕೋಣೆಗಳನ್ನೂ ಭಂಡಾರಗಳನ್ನೂ ನೋಡಿಕೊಳ್ಳುವವರಾಗಿದ್ದರು. 27 ಅವರು ರಾತ್ರಿಯಲ್ಲಿಯೂ ದೇವಾಲಯದ ಸುತ್ತಲೂ ಇಳುಕೊಂಡು ಅವುಗಳನ್ನು ಕಾಯುತ್ತಿದ್ದರು; ಪ್ರತಿದಿನ ಬೆಳಿಗ್ಗೆ ಅವುಗಳನ್ನು ತೆರೆಯುತ್ತಿದ್ದರು. 28 ಇದಲ್ಲದೆ ಅವರಲ್ಲಿ ಕೆಲವರು ಪೂಜಾಸಾಮಗ್ರಿಗಳನ್ನು ನೋಡಿಕೊಳ್ಳುವವರಾಗಿದ್ದರು. ಅವುಗಳನ್ನು ಕೊಡುವಾಗಲೂ ತಿರಿಗಿ ತೆಗೆದುಕೊಳ್ಳುವಾಗಲೂ ಲೆಕ್ಕಿಸುತ್ತಿದ್ದರು. 29 ಇನ್ನು ಕೆಲವರು ದೇವಾಲಯದ ಎಲ್ಲಾ ಸಾಮಾನುಗಳ ಮೇಲ್ವಿಚಾರಕರೂ ಗೋದಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ, ಪರಿಮಳದ್ರವ್ಯ ಇವುಗಳ ಪಾರುಪತ್ಯಗಾರರು ಆಗಿದ್ದರು. 30 ಯಾಜಕಸಂತಾನದವರಲ್ಲಿ ಕೆಲವರು ಪರಿಮಳದ್ರವ್ಯಗಳಿಂದ ತೈಲಮಾಡುತ್ತಿದ್ದರು. 31 ಲೇವಿಯರಲ್ಲಿ ಕೋರಹಿಯನಾದ ಶಲ್ಲೂಮನ ಚೊಚ್ಚಲಮಗನಾದ ಮತ್ತಿತ್ಯನು ರೊಟ್ಟಿಸುಡುವ ಕೆಲಸದ ಮೇಲ್ವಿಚಾರಕನು. 32 ಅವರ ಸಹೋದರರಾದ ವಿುಕ್ಕ ಕೆಹಾತ್ಯರಲ್ಲಿ ಕೆಲವರಿಗೆ ಪ್ರತಿ ಸಬ್ಬತ್ತಿನಲ್ಲಿ ನೈವೇದ್ಯದ ರೊಟ್ಟಿಗಳನ್ನು ಕ್ರಮಪಡಿಸುವ ಕೆಲಸವಿತ್ತು. 33 ವಾದ್ಯಗಾರರ ಪಟ್ಟಿ. ಅವರು ಲೇವಿಯ ಗೋತ್ರಗಳಲ್ಲಿ ಪ್ರಧಾನರೂ ದೇವಾಲಯದ ಕೋಣೆಗಳಲ್ಲಿ ವಾಸಿಸುವವರೂ ಆಗಿದ್ದರು. ಅವರು ಹಗಲಿರುಳೂ ಕೆಲಸದಲ್ಲಿರುತ್ತಿದ್ದದರಿಂದ ಇತರ ಸೇವೆಯಿಂದ ಬಿಡುಗಡೆ ಹೊಂದಿದ್ದರು. 34 ಇವರು ವಂಶಾವಳಿಯ ಪ್ರಕಾರ ಲೇವಿಗೋತ್ರಪ್ರಧಾನರೂ ಯೆರೂಸಲೇವಿುನಲ್ಲಿ ವಾಸಿಸುವವರೂ ಆಗಿದ್ದರು. ಸೌಲನ ವಂಶಾವಳಿ 35 ಗಿಬ್ಯೋನಿನಲ್ಲಿ ಗಿಬ್ಯೋನ್ಯರ ಮೂಲ ಪುರುಷನಾದ ಯೆಯೂವೇಲನು ವಾಸಿಸುತ್ತಿದ್ದನು. ಅವನ ಹೆಂಡತಿಯ ಹೆಸರು ಮಾಕ; 36 ಚೊಚ್ಚಲಮಗನು ಅಬ್ದೋನನು; ತರುವಾಯ ಹುಟ್ಟಿದವರು - ಚೂರ್, ಕೀಷ್, 37 ಬಾಳ್, ನೇರ್, ನಾದಾಬ್, ಗೆದೋರ್, ಅಹ್ಯೋ, ಜೆಕರ್ಯ, ವಿುಕ್ಲೋತ್ ಇವರೇ. 38 ವಿುಕ್ಲೋತನು ಶಿಮಾಮನನ್ನು ಪಡೆದನು. ಇವರು ತಮ್ಮ ಸಹೋದರರಿಂದ ಬೇರೆಯಾಗಿ ಯೆರೂಸಲೇವಿುನಲ್ಲಿರುವ ತಮ್ಮ ಕುಲಸಂಬಂಧಿಕರ ಜೊತೆಯಲ್ಲಿ ವಾಸಿಸುತ್ತಿದ್ದರು. 39 ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ್ ಇವರನ್ನು ಪಡೆದನು. 40 ಯೋನಾತಾನನು ಮೆರೀಬ್ಬಾಳನನ್ನು ಪಡೆದನು. 41 ಮೆರೀಬ್ಬಾಳನು ಮೀಕನನ್ನು ಪಡೆದನು. ಮೀಕನ ಮಕ್ಕಳು - ಪೀತೋನ್, ಮೆಲೆಕ್, ತಹ್ರೇಯ, [ಆಹಾಜ್] ಇವರೇ. 42 ಆಹಾಜನು ಯಗ್ರಾಹನನ್ನು ಪಡೆದನು; ಯಗ್ರಾಹನು ಆಲೆಮೆತ್, ಅಜ್ಮಾವೆತ್, ಜಿವ್ರಿು ಇವರನ್ನು ಪಡೆದನು. ಜಿವ್ರಿುಯು ಮೋಚನನ್ನು ಪಡೆದನು. 43 ಮೋಚನು ಬಿನ್ನನನ್ನು ಪಡೆದನು; ಇವನ ಮಗನು ರೆಫಾಯ; ಇವನ ಮಗನು ಎಲ್ಲಾಸ; ಇವನ ಮಗನು ಆಚೇಲ್. 44 ಆಚೇಲನಿಗೆ ಆರು ಮಂದಿ ಮಕ್ಕಳಿದ್ದರು. ಅವರ ಹೆಸರುಗಳು - ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ, ಹಾನಾನ್ ಇವೇ. ಇವರೆಲ್ಲರೂ ಆಚೇಲನ ಮಕ್ಕಳು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India