Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 8 - ಕನ್ನಡ ಸತ್ಯವೇದವು J.V. (BSI)


ಬೆನ್ಯಾಮೀನ್ ಕುಲ

1 ಬೇನ್ಯಾಮೀನನ ಮಕ್ಕಳು - ಬೆಳನು ಚೊಚ್ಚಲನು; ಅಷ್ಬೇಲ್ ಮರಚಲನು; ಅಹ್ರಹ ಮೂರನೆಯವನು;

2 ನೋಹ ನಾಲ್ಕನೆಯವನು; ರಾಫ ಐದನೆಯವನು.

3 ಬೆಳನ ಮಕ್ಕಳು - ಅದ್ದಾರ್, ಗೇರ,

4-5 ಅಬೀಹೂದ್ ಅಬೀಷೂವ, ನಾಮಾನ್, ಅಹೋಹ, ಗೇರ, ಶೆಪೂಫಾನ್, ಹೂರಾಮ್ ಎಂಬವರು.

6 ಏಹೂದನ ಸಂತಾನದವರು. (ಗೆಬ ಊರಿನ ಎಲ್ಲಾ ಕುಟುಂಬಗಳಲ್ಲಿ ಪ್ರಮುಖರಾದ ಏಹೂದನ ಸಂತಾನದವರೂ ನಾಮಾನ್,

7 ಅಹೀಯ, ಗೇರ ಇವರೂ ಮಾನಹತಿಗೆ ಒಯ್ಯಲ್ಪಟ್ಟರು.) [ಏಹೂದನು] ಉಚ್ಚ, ಅಹೀಹುದ್ ಇವರನ್ನು ಪಡೆದನು.

8 ಶಹರಯಿಮನು ತನ್ನ ಹೆಂಡರಾದ ಹೂಷೀಮ್, ಬಾರ ಎಂಬವರನ್ನು ತಳ್ಳಿಬಿಟ್ಟು

9 ಮತ್ತೊಬ್ಬ ಹೆಂಡತಿಯಾದ ಹೋದೆಷಳಿಂದ ಮೋವಾಬ್ ದೇಶದಲ್ಲಿ ಯೋವಾಬ್, ಚಿಬ್ಯ, ಮೇಷ, ಮಲ್ಕಾಮ್, ಯೆಯೂಜ್, ಸಾಕ್ಯ, ವಿುರ್ಮ ಇವರನ್ನು ಪಡೆದನು.

10 ಶಹರಯಿಮನ ಮಕ್ಕಳಾದ ಇವರು ಗೋತ್ರಪ್ರಧಾನರು.

11 ಇದಲ್ಲದೆ ಅವನು ಹುಷೀಮಳಿಂದ ಅಬೀಟೂಬ್, ಎಲ್ಪಾಲ ಇವರನ್ನು ಪಡೆದನು.

12 ಎಲ್ಪಾಲನ ಮಕ್ಕಳು - ಏಬೆರ್, ವಿುಷ್ಷಾಮ್ ಇವರೂ ಓನೋ, ಲೋದ್ ಎಂಬ ಪಟ್ಟಣಗಳನ್ನೂ ಅವುಗಳಿಗೆ ಸೇರುವ ಗ್ರಾಮಗಳನ್ನೂ ಕಟ್ಟಿಸಿದ ಶೆಮೆದನೂ

13 ಅಯ್ಯಾಲೋನ್ ಊರಿನ ಕುಟುಂಬಗಳಲ್ಲಿ ಪ್ರಮುಖರೂ ಗತ್ ಊರಿನವರನ್ನು ಓಡಿಸಿಬಿಟ್ಟವರೂ ಆದ ಬೆರೀಯ, ಶಮ ಇವರೂ.

14-15 ಅಹ್ಯೋ, ಶಾಷಕ್, ಯೆರೇಮೋತ್,

16 ಜೆಬದ್ಯ, ಅರಾದ್, ಎದೆರ್, ಮೀಕಾಯೇಲ್, ಇಷ್ಪ, ಯೋಹ ಇವರು ಬೆರೀಯನ ಮಕ್ಕಳು.

17 ಜೆಬದ್ಯ, ಮೆಷುಲ್ಲಾಮ್, ಹಿಜ್ಕೀ,

18 ಹೆಬೆರ್, ಇಷ್ಮೆರೈ, ಇಜ್ಲೀಯ,

19 ಯೋಬಾಬ್ ಇವರು ಎಲ್ಪಾಲನ ಮಕ್ಕಳು.

20 ಯಾಕೀಮ್, ಜಿಕ್ರೀ, ಜಬ್ದೀ, ಎಲೀಗೇನೈ, ಚಿಲ್ಲೆತೈ,

21 ಎಲೀಯೇಲ್, ಅದಾಯ, ಬೆರಾಯ, ಶಿಮ್ರಾತ್ ಇವರು ಶಿಮ್ಮೀಯ ಮಕ್ಕಳು.

22 ಇಷ್ಪಾನ್, ಏಬೆರ್, ಎಲೀಯೇಲ್,

23-24 ಅಬ್ದೋನ್, ಜಿಕ್ರೀ, ಹಾನಾನ್, ಹನನ್ಯ,

25 ಏಲಾಮ್, ಅನೆತೋತೀಯ, ಇಫ್ದೆಯಾಹ, ಪೆನೂವೇಲ್ ಇವರು ಶಾಷಕನ ಮಕ್ಕಳು.

26 ಶಂಷೆರೈ, ಶೆಹರ್ಯ, ಅತಲ್ಯ,

27 ಯಾರೆಷ್ಯ, ಏಲೀಯ, ಜಿಕ್ರೀ ಇವರು ಯೆರೋಹಾಮನ ಮಕ್ಕಳು.

28 ಇವರು ವಂಶಾವಳಿಯ ಪ್ರಕಾರ ಗೋತ್ರ ಪ್ರಧಾನರೂ ಯೆರೂಸಲೇವಿುನಲ್ಲಿ ವಾಸಿಸುವವರೂ ಆಗಿದ್ದರು.

29 ಗಿಬ್ಯೋನಿನಲ್ಲಿ ಗಿಬ್ಯೋನ್ಯರ ಮೂಲ ಪುರುಷನಾದ [ಯೆಗೂವೇಲ್] ವಾಸಿಸುತ್ತಿದ್ದನು. ಅವನ ಹೆಂಡತಿಯ ಹೆಸರು ಮಾಕ; ಚೊಚ್ಚಲಮಗನು ಅಬ್ದೋನನು;

30 ತರುವಾಯ ಹುಟ್ಟಿದವರು - ಚೂರ್, ಕೀಷ್, ಬಾಳ್,

31 ನಾದಾಬ್, ಗೆದೋರ್, ಅಹ್ಯೋ, ಜೆಕೆರ್ ಇವರು.

32 ವಿುಕ್ಲೋತನು ಶಿಮಾಹನನ್ನು ಪಡೆದನು. ಇವರು ತಮ್ಮ ಸಹೋದರರಿಗೆ ಎದುರಾಗಿ ಯೆರೂಸಲೇವಿುನಲ್ಲಿ ಅವರೊಂದಿಗೆ ವಾಸಿಸುತ್ತಿದ್ದರು.

33 ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಇವರನ್ನು ಪಡೆದನು.

34 ಯೋನಾತಾನನು ಮೆರೀಬ್ಬಾಳನನ್ನು ಪಡೆದನು; ಮೆರೀಬ್ಬಾಳನು ಮೀಕನನ್ನು ಪಡೆದನು.

35 ಮೀಕನ ಮಕ್ಕಳು - ಪೀತೋನ್, ಮೆಲೆಕ್, ತರೇಯ, ಆಹಾಜ್ ಇವರೇ.

36 ಆಹಾಜನು ಯೆಹೋವದ್ದಾಹನನ್ನು ಪಡೆದನು. ಯೆಹೋವದ್ದಾಹನು ಆಲೆಮೆತ್, ಅಜ್ಮಾವೆತ್, ಜಿಮ್ರೀ ಇವರನ್ನು ಪಡೆದನು.

37 ಜಿಮ್ರೀಯು ಮೋಚನನ್ನು ಪಡೆದನು. ಮೋಚನು ಬಿನ್ನನನ್ನು ಪಡೆದನು;

38 ಇವನ ಮಗನು ರಾಫ; ಇವನ ಮಗನು ಎಲ್ಲಾಸ; ಇವನ ಮಗನು ಆಚೇಲ್. ಆಚೇಲನಿಗೆ ಆರು ಮಂದಿ ಮಕ್ಕಳಿದ್ದರು; ಅವರ ಹೆಸರುಗಳು - ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ, ಹಾನಾನ್ ಇವೇ. ಅವರೆಲ್ಲರೂ ಆಚೇಲನ ಮಕ್ಕಳು.

39 ಆಚೇಲನ ತಮ್ಮನಾದ ಏಷೆಕನ ಮಕ್ಕಳು - ಚೊಚ್ಚಲನು ಊಲಾಮ್; ಮರಚಲನು ಯೆಯೂಷ್; ಮೂರನೆಯವನು ಎಲೀಫೆಲೆಟ್.

40 ಊಲಾಮನ ಮಕ್ಕಳು ಬಿಲ್ಲನ್ನು ಉಪಯೋಗಿಸುವದರಲ್ಲಿ ಗಟ್ಟಿಗರಾದ ರಣವೀರರು. ಅವರು ಅನೇಕ ಮಂದಿ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆದರು. ಅವರು ಒಟ್ಟಿಗೆ ನೂರ ಐವತ್ತು ಮಂದಿ. ಎಲ್ಲರೂ ಬೆನ್ಯಾಮೀನ್ಯರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು