1 ಪೂರ್ವಕಾಲ ವೃತ್ತಾಂತ 7 - ಕನ್ನಡ ಸತ್ಯವೇದವು J.V. (BSI)ಇಸ್ಸಾಕಾರ್ ಕುಲ 1 ಇಸ್ಸಾಕಾರನ ಮಕ್ಕಳು - ತೋಲ, ಪೂವ, ಯಾಶೂಬ್, ಶಿಮ್ರೋನ್ ಎಂಬ ನಾಲ್ಕು ಮಂದಿ. 2 ತೋಲನ ಮಕ್ಕಳಾದ ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್, ಸಮುವೇಲ್ ಇವರು ತೋಲವಂಶದ ಕುಟುಂಬಗಳಲ್ಲಿ ಪ್ರಧಾನಪುರುಷರೂ ರಣವೀರರೂ ಆಗಿದ್ದರು. ತೋಲವಂಶದವರ ಸಂಖ್ಯೆಯು ದಾವೀದನ ಕಾಲದಲ್ಲಿ ಇಪ್ಪತ್ತೆರಡು ಸಾವಿರದ ಆರುನೂರು. 3 ಉಜ್ಜೀಯ ಮಗನು ಇಜ್ಯಹ್ಯಾಹ; ಇಜ್ಯಹ್ಯಾಹನ ಮಕ್ಕಳು - ಮೀಕಾಯೇಲ್, ಓಬದ್ಯ, ಯೋವೇಲ್, ಇಷ್ಷೀಯ. ಈ ಐದು ಮಂದಿಯೂ ಗೋತ್ರಪ್ರಧಾನರು. 4 ಅನೇಕ ಮಂದಿ ಹೆಂಡರೂ ಮಕ್ಕಳೂ ಉಳ್ಳ ಇವರ ಗೋತ್ರಕುಟುಂಬಗಳಿಗೆ ಸೇರುವ ಯುದ್ಧಭಟರು ಮೂವತ್ತಾರು ಸಾವಿರ ಮಂದಿ. 5 ಇವರ ಗೋತ್ರ ಸಂಬಂಧಿಗಳಾದ ಇಸ್ಸಾಕಾರ್ಯರೆಲ್ಲರೂ ರಣವೀರರು. ವಂಶಾವಳಿಯ ಪಟ್ಟಿಯಲ್ಲಿ ಲೆಕ್ಕಿಸಲ್ಪಟ್ಟವರು ಒಟ್ಟಿಗೆ ಎಂಭತ್ತೇಳು ಸಾವಿರ ಮಂದಿ. ಬೆನ್ಯಾಮೀನ್ ಕುಲ 6 ಬೆನ್ಯಾಮೀನನಿಗೆ ಬೆಳ, ಬೆಕೆರ್, ಯೆದೀಯಯೇಲ್ ಎಂಬ ಮೂರು ಮಂದಿ ಮಕ್ಕಳು. 7 ಬೆಳನ ಮಕ್ಕಳು - ಎಚ್ಬೋನ್, ಉಜ್ಜೀ, ಉಜ್ಜೀಯೇಲ್, ಯೆರೀಮೋತ್, ಈರೀ ಎಂಬವರು. ಈ ಐದು ಮಂದಿಯು ಗೋತ್ರ ಪ್ರಧಾನರೂ ರಣವೀರರೂ ಆಗಿದ್ದರು. ಅವರ ವಂಶಾವಳಿಯ ಪಟ್ಟಿಯಲ್ಲಿ ಲೆಕ್ಕಿಸಲ್ಪಟ್ಟವರು ಇಪ್ಪತ್ತೆರಡು ಸಾವಿರದ ಮೂವತ್ತನಾಲ್ಕು ಮಂದಿ. 8 ಬೆಕೆರನ ಮಕ್ಕಳು - ಜೆಮೀರ, ಯೋವಾಷ್, ಎಲೀಯೆಜೆರ್, ಎಲ್ಯೋವೇನೈ, ಒವ್ರಿು, ಯೆರೀಮೋತ್, ಅಬೀಯ, ಅನಾತೋತ್, ಆಲೆಮೆತ್. ಇವರೆಲ್ಲರೂ ಬೆಕೆರನ ಸಂತಾನದವರು. 9 ರಣವೀರರಾದ ಈ ಗೋತ್ರ ಪ್ರಧಾನರ ವಂಶಾವಳಿಯ ಪಟ್ಟಿಯಲ್ಲಿ ಲೆಕ್ಕಿಸಲ್ಪಟ್ಟ ಭಟರು ಇಪ್ಪತ್ತು ಸಾವಿರದ ಇನ್ನೂರು ಮಂದಿ. 10 ಯೆದೀಯಯೇಲನ ಮಗನು ಬಿಲ್ಹಾನ್. ಬಿಲ್ಹಾನನ ಮಕ್ಕಳು - ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ, ಜೇತಾನ್, ತಾರ್ಷೀಷ್, ಅಹೀಷೆಹರ್ ಎಂಬವರು. 11 ಈ ಗೋತ್ರಪ್ರಧಾನರಿಗೆ ಸೇರಿದವರೆಲ್ಲರೂ ಯೆದೀಯಯೇಲನ ಸಂತಾನದವರು. ಇವರಲ್ಲಿ ಯುದ್ಧಕ್ಕೆ ಹೋಗತಕ್ಕ ಭಟರು ಹದಿನೇಳು ಸಾವಿರದ ಇನ್ನೂರು ಮಂದಿ. ದಾನ್‍ಕುಲ 12 ಶುಪ್ಪೀಮ್ ಹುಪ್ಪೀಮರು ಈರನ ಮಕ್ಕಳು; ಹುಶೀಮನು ಅಹೇರನ ಮಗನು. ನಫ್ತಾಲಿಕುಲ 13 ನಫ್ತಾಲಿಯ ಮಕ್ಕಳು - ಯಹಚಿಯೇಲ್, ಗೂನೀ, ಯೇಚೆರ್, ಶಲ್ಲೂಮ್ ಎಂಬವರು. ಇವರು ಬಿಲ್ಹಳ ಸಂತಾನದವರು. ಮನಸ್ಸೆಕುಲ 14 ಮನಸ್ಸೆಯ ಸಂತಾನದವರು - ಮನಸ್ಸೆಯ ಅರಾಮ್ಯಳಾದ ಉಪಪತ್ನಿಯು ಅವನಿಗೆ ಅಷ್ರೀಯೇಲನನ್ನೂ ಮಾಕೀರನನ್ನೂ ಹೆತ್ತಳು; ಮಾಕೀರನು ಗಿಲ್ಯಾದನ ತಂದೆ. 15 ಮಾಕೀರನು ಹುಪ್ಪೀಮ್ ಶುಪ್ಪೀಮ್ಯರಿಂದ ಹೆಣ್ಣನ್ನು ತೆಗೆದುಕೊಂಡನು; ಅವನ ತಂಗಿಯ ಹೆಸರು ಮಾಕ; ಅವನ ತಮ್ಮನ ಹೆಸರು ಚೆಲೋಫಾದ್; ಚೆಲೋಫಾದನಿಗೆ ಹೆಣ್ಣು ಮಕ್ಕಳು ಮಾತ್ರ ಇದ್ದರು. 16 ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು ಅವನಿಗೆ ಪೆರೆಷೆಂದು ಹೆಸರಿಟ್ಟಳು; ಇವನ ತಮ್ಮನ ಹೆಸರು ಶೆರೆಷ್. ಶೆರೆಷನ ಮಕ್ಕಳು - ಊಲಾಮ್, ರೆಕೆಮ್ ಎಂಬವರು. 17 ಊಲಾಮನ ಮಗನು ಬೆದಾನ್. ಇವರು ಮನಸ್ಸೆಯ ಮೊಮ್ಮಗನೂ ಮಾಕೀರನ ಮಗನೂ ಆದ ಗಿಲ್ಯಾದನ ಸಂತಾನದವರು. 18 ಗಿಲ್ಯಾದನ ತಂಗಿಯಾದ ಹಮ್ಮೋಲೆಕೆತಳು ಈಷ್ಹೋದ್, ಅಬೀಯೆಜೆರ್, ಮಹ್ಲ ಎಂಬವರನ್ನು ಹೆತ್ತಳು. 19 ಶೆಮೀದನ ಮಕ್ಕಳು - ಅಹ್ಯಾನ್, ಶೆಕೆಮ್, ಲಿಕ್ಹೀ, ಅನೀಯಾಮ್ ಎಂಬವರು. ಎಫ್ರಾಯೀಮ್ ಕುಲ 20 ಎಫ್ರಾಯೀಮನ ಸಂತಾನದವರು - ಎಫ್ರಾಯೀಮನ ಮಗನು ಶೂತೆಲಹ; ಇವನ ಮಗನು ಬೆರೆದ್; ಇವನ ಮಗನು ತಹತ್; ಇವನ ಮಗನು ಎಲ್ಲಾದ; ಇವನ ಮಗನು ತಹತ್. 21 ಇವನ ಮಗನು ಜಾಬಾದ್; ಇವನ ಮಕ್ಕಳು - ಶೂತೆಲಹ, ಎಜೆರ್, ಎಲ್ಲಾದ್ ಎಂಬವರು. ಇವರು ಗತ್ ಊರಿನವರ ದನಕುರಿಗಳನ್ನು ಸುಲಿಗೆ ಮಾಡುವದಕ್ಕೋಸ್ಕರ ಗಟ್ಟಾ ಇಳಿದು ಅವರ ದೇಶಕ್ಕೆ ಹೋದದರಿಂದ ಆ ದೇಶದ ಮೂಲನಿವಾಸಿಗಳು ಇವರನ್ನು ಕೊಂದುಹಾಕಿದರು. 22 ಆದದರಿಂದ ಇವರ ತಂದೆಯಾದ ಎಫ್ರಾಯೀಮನು ಬಹು ದಿನಗಳವರೆಗೂ ದುಃಖಪಡುತ್ತಿದ್ದನು. ಅವನ ಸಹೋದರರು ಅವನನ್ನು ಸಂತೈಸುವದಕ್ಕೋಸ್ಕರ ಬಂದರು. 23 ಅವನು ತನ್ನ ಹೆಂಡತಿಯನ್ನು ಕೂಡಲು ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಇದು ಅವನ ಕುಟುಂಬಕ್ಕೊದಗಿದ ಆಪತ್ತಿನಲ್ಲಿ ಸಂಭವಿಸಿದದರಿಂದ ಆ ಮಗನಿಗೆ ಬೆರೀಯ ಎಂದು ಹೆಸರಿಟ್ಟನು. 24 ಶೇರ ಎಂಬವಳು ಅವನ ಮಗಳು; ಈಕೆಯು ಮೇಲಣ ಮತ್ತು ಕೆಳಗಣ ಬೇತ್‍ಹೋರೋನ್ ಎಂಬ ಪಟ್ಟಣಗಳನ್ನೂ ಉಜ್ಜೇನ್‍ಶೇರ ಎಂಬ ಪಟ್ಟಣವನ್ನೂ ಕಟ್ಟಿಸಿದಳು. 25 ಬೆರೀಯ ಮಗನು ರೆಫಹ; [ಇವನ ಮಗನು] ರೆಷೆಫ್; ಇವನ ಮಗನು ತೆಲಹ; ಇವನ ಮಗನು ತಹನ್; 26 ಇವನ ಮಗನು ಲದ್ದಾನ್; ಇವನ ಮಗನು ಅಮ್ಮೀಹೂದ್; 27 ಇವನ ಮಗನು ಎಲೀಷಾಮ; ಇವನ ಮಗನು ನೋನ್; ಇವನ ಮಗನು ಯೆಹೋಷುವ, 28 ಅವರು ವಾಸಿಸುವ ಸ್ವಾಸ್ತ್ಯದ ಮೇರೆಗಳು - [ದಕ್ಷಿಣ ದಿಕ್ಕಿನಲ್ಲಿ] ಬೇತೇಲ್ ಪಟ್ಟಣವೂ ಅದರ ಗ್ರಾಮಗಳೂ ; ಪೂರ್ವದಿಕ್ಕಿನಲ್ಲಿ ನಾರಾನ್; ಪಶ್ಚಿಮ ದಿಕ್ಕಿನಲ್ಲಿ ಗೆಜೆರ್ ಪಟ್ಟಣವೂ ಅದರ ಗ್ರಾಮಗಳೂ; [ಉತ್ತರ ದಿಕ್ಕಿನಲ್ಲಿ] ಶೆಕೆಮ್ ಅಯ್ಯಾ ಪಟ್ಟಣಗಳೂ ಅವುಗಳ ಗ್ರಾಮಗಳೂ ಇವೇ. 29 ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಮನಸ್ಸೆಕುಲದವರ ವಶದಲ್ಲಿದ್ದವು. ಈ ಊರುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಸಂತಾನದವರು ವಾಸಿಸುತ್ತಿದ್ದರು. ಆಶೇರ್ ಕುಲ 30 ಆಶೇರನ ಸಂತಾನದವರು - ಇಮ್ನ, ಇಷ್ವ, ಇಷ್ವೀ, ಬೆರೀಯ ಎಂಬವರೂ ಸೆರಹಳೆಂಬ ಇವರ ತಂಗಿಯೂ. 31 ಬೆರೀಯನ ಮಕ್ಕಳು - ಹೆಬೆರ್, ಬಿರ್ಜೈತ್ ಊರಿನವರ ಮೂಲಪುರುಷನಾದ ಮಲ್ಕೀಯೇಲ್ ಎಂಬವರು. 32 ಹೆಬೆರನು ಯಫ್ಲೇಟ್, ಶೋಮೇರ್, ಹೋತಾಮ್ ಇವರನ್ನೂ ಇವರ ತಂಗಿಯಾದ ಶೂವಳನ್ನೂ ಪಡೆದನು. 33 ಪಾಸಕ್, ಬಿಮ್ಹಾಲ್, ಅಶ್ವಾತ್ ಇವರು ಯಫ್ಲೇಟನ ಮಕ್ಕಳು. 34 ಅಹೀ, ರೊಹ್ಗ, ಹುಬ್ಬ, ಅರಾಮ್ ಎಂಬವರು ಶೆಮೆರನ ಮಕ್ಕಳು. 35 ಇವನ ತಮ್ಮನಾದ ಹೆಲೆಮನ ಮಕ್ಕಳು - ಚೋಫಹ, ಇಮ್ನ, ಶೇಲೆಷ್, ಆಮಾಲ್ ಇವರೇ. 36 ಸೂಹ, ಹರ್ನೆಫೆರ್, ಶೂಗಾಲ್, ಬೇರೀ, ಇಮ್ರ, 37 ಬೆಚೆರ್, ಹೋದ್, ಶಮ್ಮ, ಶಿಲ್ಷ, ಇತ್ರಾನ್, ಬೇರ ಇವರು ಚೋಫಹನ ಮಕ್ಕಳು. 38 ಯೆಫುನ್ನೆ, ಪಿಸ್ಪ, ಅರಾ ಎಂಬವರು ಯೆತೆರನ ಮಕ್ಕಳು. 39 ಆರಹ, ಹನ್ನೀಯೇಲ್, ರಿಚ್ಯ ಇವರು ಉಲ್ಲನ ಮಕ್ಕಳು. 40 ಇವರೆಲ್ಲರೂ ಆಶೇರ್ಯರಲ್ಲಿ ಗೋತ್ರ ಪ್ರಧಾನರೂ ಪರೀಕ್ಷಿತರಾದ ರಣವೀರರೂ ಪ್ರಭುಶ್ರೇಷ್ಠರೂ ಆಗಿದ್ದರು. ಇವರ ವಂಶಾವಳಿಯ ಪಟ್ಟಿಯ ಪ್ರಕಾರ ಯುದ್ಧಕ್ಕೆ ಹೋಗತಕ್ಕ ಭಟರ ಸಂಖ್ಯೆಯು ಇಪ್ಪತ್ತಾರು ಸಾವಿರ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India