1 ಪೂರ್ವಕಾಲ ವೃತ್ತಾಂತ 4 - ಕನ್ನಡ ಸತ್ಯವೇದವು J.V. (BSI)ಯೆಹೂದನ ವಂಶಾವಳಿಯ ಪೂರಣೆ 1 ಯೆಹೂದನ ವಂಶಾವಳಿ - ಪೆರೆಚ್, ಹೆಚ್ರೋನ್, ಕರ್ಮೀ, ಹೂರ್, ಶೋಬಾಲ್. 2 ಶೋಬಾಲನ ಮಗನಾದ ರೆವಾಯನು ಯಹತನನ್ನು ಪಡೆದನು. ಯಹತನು ಅಹೂಮೈ, ಲಹದ್ ಇವರನ್ನು ಪಡೆದನು; ಇವರು ಚೊರ್ರದ ಕುಟುಂಬಗಳವರು. 3 ಇಜ್ರೆಯೇಲ್, ಇಷ್ಮ, ಇಬ್ಬಾಷ್ ಇವರೂ ಹಚೆಲೆಲ್‍ಪೋನೀ ಎಂಬ ಹೆಸರುಳ್ಳ ಇವರ ತಂಗಿಯೂ ಏಟಾಮನ ಮಕ್ಕಳು; 4 ಗೆದೋರಿನ ಮೂಲಪುರುಷನಾದ ಪೆನೂವೇಲ್, ಹೂಷಾಹ್ಯರ ಮೂಲಪುರುಷನಾದ ಏಜೆರ್ ಇವರೂ ಎಫ್ರಾತಾಹಳ ಚೊಚ್ಚಲ ಮಗನಾದ ಹೂರನ ಮಕ್ಕಳು; ಈ ಹೂರನೇ ಬೇತ್ಲೆಹೇಮ್ಯರ ಮೂಲಪುರುಷನು. 5 ತೆಕೋವದವರ ಮೂಲಪುರುಷನಾದ ಅಷ್ಹೂರನಿಗೆ ಹೆಲಾಹ, ನಾರ ಎಂಬ ಇಬ್ಬರು ಹೆಂಡತಿಯರಿದ್ದರು. 6 ಅಹುಜ್ಜಾಮ್, ಹೇಫೆರ್ ಎಂಬವರೂ ತೇಮಾನ್ಯರೂ ಅಹಷ್ಟಾರ್ಯರೂ ನಾರಳ ಸಂತಾನದವರು. 7 ಹೆಲಾಹಳ ಮಕ್ಕಳು - ಚೆರೆತ್, ಇಚ್ಹಾರ್, ಎತ್ನಾನ್ ಎಂಬವರು. 8 ಕೋಚನಿಂದ ಆನೂಬ್, ಚೊಬೇಬ ಇವರೂ ಅಹರ್ಹೇಲ್ ಕುಲದವರೂ ಉತ್ಪನ್ನರಾದರು. 9 ಅಹರ್ಹೇಲನು ಹಾರುಮನ ಮಗನು; ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಘನವಂತನಾಗಿದ್ದನು; ಇವನನ್ನು ಬಹುವೇದನೆಯಿಂದ ಹೆತ್ತೆನೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚೆಂದು ಹೆಸರಿಟ್ಟಳು. 10 ಯಾಬೇಚನು ಇಸ್ರಾಯೇಲ್ ದೇವರಿಗೆ - ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ ನನ್ನ ಪ್ರಾಂತವನ್ನು ವಿಸ್ತರಿಸಿ ನಿನ್ನ ಹಸ್ತದಿಂದ ನನ್ನನ್ನು ಹಿಡಿದು ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ರಕ್ಷಿಸಬಾರದೇ ಎಂದು ಮೊರೆಯಿಡಲು ದೇವರು ಅವನ ಮೊರೆಯನ್ನು ಲಾಲಿಸಿದನು. 11 ಶೂಹನ ಸಹೋದರನಾದ ಕೆಲೂಬನು ಮೆಹೀರನನ್ನು ಪಡೆದನು. ಮೆಹೀರನು ಎಷ್ಟೋನನ ತಂದೆ; 12 ಎಷ್ಟೋನನಿಂದ ಬೇತ್ರಾಫ, ಪಾಸೇಹ, ತೆಹಿನ್ನ ಎಂಬ ಊರುಗಳವರು ಉತ್ಪನ್ನರಾದರು. ಇವರು ರೇಕಾಹ್ಯರು. ತೆಹಿನ್ನನು ನಾಹಷ್ ಪಟ್ಟಣದವರ ಮೂಲ ಪುರುಷನು. 13 ಕೆನಜನ ಮಕ್ಕಳು - ಒತ್ನೀಯೇಲ್, ಸೆರಾಯ ಎಂಬವರು. ಒತ್ನೀಯೇಲನ ಮಗನು - ಹತತ್. 14 ಮೆಯೋನೋತೈಯು ಒಫ್ರಾಹನನ್ನು ಪಡೆದನು. ಸೆರಾಯನು ಶಿಲ್ಪಿಗರಾಗಿರುವ ಗೇಹರಾಷೀಮ್ಯರ ಮೂಲಪುರುಷನಾದ ಯೋವಾಬನನ್ನು ಪಡೆದನು. 15 ಯೆಫುನ್ನೆಯ ಮಗನಾದ ಕಾಲೇಬನ ಸಂತಾನದವರು - ಈರು, ಏಲ, ನಾಮ್, ಏಲನವರು, ಕೆನಜ್ ಇವರೇ. 16 ಯೆಹಲ್ಲೆಲೇಲನ ಮಕ್ಕಳು - ಜೀಫ್, ಜೀಫಾ, ತೀರ್ಯ, ಅಸರೇಲ್ ಎಂಬವರು. 17 ಎಜ್ರನ ಮಕ್ಕಳು - ಯೆತೆರ್, ಮೆರೆದ್ ಏಫೆರ್, ಯಾಲೋನ್ ಎಂಬವರು. ಮೆರೆದನು ಫರೋಹನ ಮಗಳಾದ ಬಿತ್ಯಳನ್ನು ಮದುವೆ ಮಾಡಿಕೊಂಡನು. ಈಕೆಯು ಅವನಿಂದ ಗರ್ಭಿಣಿಯಾಗಿ ವಿುರ್ಯಾಮ್, ಶಮ್ಮೈ, ಎಷ್ಟೆಮೋವದವರ ಮೂಲಪುರುಷನಾದ ಇಷ್ಬಹ ಇವರನ್ನು ಹೆತ್ತಳು. 18 ಯೆಹೂದ್ಯಳಾದ ಅವನ ಇನ್ನೊಬ್ಬ ಹೆಂಡತಿಯು ಗೆದೋರ್ಯರ ಮೂಲಪುರುಷನಾದ ಯೆರೆದ್, ಸೋಕೋವಿನವರ ಮೂಲಪುರುಷನಾದ ಹೆಬೆರ್, ಜಾನೋಹದವರ ಮೂಲಪುರುಷನಾದ ಯೆಕೂತೀಯೇಲ್ ಇವರನ್ನು ಹೆತ್ತಳು. 19 ಅವನ ಮತ್ತೊಬ್ಬಳು ಹೆಂಡತಿಯೂ ಕೆಯೀಲದವರ ಮೂಲಪುರುಷನಾದ ನಹಮನ ತಂಗಿಯೂ ಆದ ಹೋದೀಯಳ ಸಂತಾನದವರು - ಗರ್ಮ್ಯರು, ಎಷ್ಟೆಮೋವದವರು, ಮಾಕಾತ್ಯರು. 20 ಶೀಮೋನನ ಮಕ್ಕಳು - ಅಮ್ನೋನ್, ರಿನ್ನ, ಬೆನ್ಹಾನಾನ್, ತೀಲೋನ್. ಇಷ್ಷೀಯ ಮಕ್ಕಳು - ಜೋಹೇತ್, ಬೆನ್‍ಜೋಹೇತ್. 21 ಯೆಹೂದನ ಮಗನಾದ ಶೇಲನ ಸಂತಾನದವರು - ಲೇಕಾಹ್ಯರ ಮೂಲಪುರುಷನಾದ ಏರ್, ಮರೇಷದವರ ಮೂಲಪುರುಷನಾದ ಲದ್ದ, ಬೇತಷ್ಬೇಯದಲ್ಲಿರುವ ನೇಯಿಗಾರರ ಕುಟುಂಬಗಳವರು, 22 ಯೊಕೀಮನು, ಕೋಜೇಬದವರು, ಮೋವಾಬ್ ದೇಶದಲ್ಲಿ ದೊರೆತನನಡಿಸಿ ಬೇತ್ಲೆಹೇವಿುಗೆ ತಿರಿಗಿ ಬಂದ ಯೋವಾಷನು, ಸಾರಾಫನು ಇವರೇ. (ಇವು ಪೂರ್ವಕಾಲದಲ್ಲಿ ನಡೆದ ಸಂಗತಿಗಳು.) 23 ಮೇಲೆ ಕಂಡ ಜನರು ಕುಂಬಾರರು; ಅವರು ನೆಟಾಯಿಮ್, ಗೆದೇರ ಎಂಬ ಊರುಗಳಲ್ಲಿ ವಾಸಿಸುತ್ತಾ ಅರಸನ ಸೇವೆಯನ್ನು ಮಾಡುತ್ತಿದ್ದರು. ಸಿಮೆಯೋನನ ವಂಶಾವಳಿ 24 ಸಿಮೆಯೋನನ ಮಕ್ಕಳು - ನೆಮೂವೇಲ್, ಯಾಮೀನ್, ಯಾರೀದ್, ಜೆರಹ, ಸೌಲ. 25 ಸೌಲನ ಮಗನು ಶಲ್ಲುಮ್; ಇವನ ಮಗನು ವಿುಬ್ಸಾಮ್; ಇವನ ಮಗನು ವಿುಷ್ಮ. 26 ವಿುಷ್ಮಾಗನ ಸಂತಾನದವರು - ಇವನ ಮಗನು ಹಮ್ಮೂವೇಲ್; ಇವನ ಮಗನು ಜಕ್ಕೂರ್; ಇವನ ಮಗನು ಶಿಮ್ಮೀ. 27 ಶಿಮ್ಮಿಗೆ ಹದಿನಾರು ಮಂದಿ ಗಂಡುಮಕ್ಕಳೂ ಆರು ಮಂದಿ ಹೆಣ್ಣು ಮಕ್ಕಳೂ ಇದ್ದರು. ಅವನ ಸಹೋದರರಿಗೆ ಅನೇಕ ಮಂದಿ ಮಕ್ಕಳಿರಲಿಲ್ಲ. ಆದದರಿಂದ ಅವರ ಕುಲವು ಯೆಹೂದ ಕುಲಕ್ಕೆ ಸರಿಯಾಗಿರಲಿಲ್ಲ. 28 ದಾವೀದನ ಆಳಿಕೆಯ ತನಕ ಅವರ ಸ್ವಾಸ್ತ್ಯಗಳಾಗಿದ್ದ ಬೇರ್ಷೆಬ, ಮೋಲಾದ, ಹಚರ್‍ಷೂವಾಲ್, 29-30 ಬಿಲ್ಹ, ಎಚೆಮ್, ತೋಲಾದ್, ಬೆತೂವೇಲ್, ಹೊರ್ಮ, ಚಿಕ್ಲಗ್, 31 ಬೇತ್ಮರ್ಕಾಬೋತ್, ಹಚರ್‍ಸೂಸೀಮ್, ಬೇತ್‍ಬಿರೀ, ಶಾರಯಿಮ್ ಎಂಬ ನಗರಗಳೂ ಇವುಗಳಿಗೆ ಸೇರಿದ ಗ್ರಾಮಗಳೂ 32 ಏಟಾಮ್, ಅಯಿನ್, ರಿಮ್ಮೋನ್, ತೋಕೆನ್, ಆಷಾನ್ ಎಂಬ ಐದು ಪಟ್ಟಣಗಳೂ 33 ಅವುಗಳ ಸುತ್ತಣ ಪ್ರದೇಶದಲ್ಲಿ ಬಾಲ್ ಊರಿನವರೆಗಿರುವ ಗ್ರಾಮಗಳೂ ಅವರ ನಿವಾಸಸ್ಥಾನಗಳಾಗಿದ್ದವು; ಅವರ ಹತ್ತಿರ ವಂಶಾವಳಿ ಪುಸ್ತಕವಿರುತ್ತದೆ. 34 ಮೆಷೋಬಾಬ್, ಯಮ್ಲೇಕ್, ಅಮಚ್ಯನ ಮಗನಾದ ಯೋಷ, 35 ಯೋವೇಲ್, ಯೊಷಿಬ್ಯನ ಮಗನೂ ಸೆರಾಯನ ಮೊಮ್ಮಗನೂ ಅಸಿಯೇಲನ ಮರಿಮಗನೂ ಆಗಿರುವ ಯೇಹೂ, 36 ಎಲ್ಯೋವೇನೈ, ಯಾಕೋಬ, ಯೆಷೋಹಾಯ, ಅಸಾಯ, ಅದೀಯೇಲ್, 37 ಯೆಸೀವಿುಯೇಲ್, ಬೆನಾಯ, ಶೆಮಾಯನ ಮಗನಾದ ಶಿಮ್ರಿಯಿಂದ ಹುಟ್ಟಿದ ಯೆದಾಯನ ಮರಿಮಗನೂ ಅಲ್ಲೋನನ ಮೊಮ್ಮಗನೂ ಶಿಪ್ಫಿಯ ಮಗನೂ ಆದ ಜೀಜ ಎಂಬ ಹೆಸರುಳ್ಳವರು ತಮ್ಮತಮ್ಮ ಗೋತ್ರಗಳಲ್ಲಿ ಪ್ರಭುಗಳಾಗಿದ್ದರು. 38 ಅವರ ಕುಟುಂಬಗಳು ಬಹಳವಾಗಿ ಅಭಿವೃದ್ಧಿಯಾದವು. 39 ಅವರು ತಮ್ಮ ಆಡುಕುರಿಗಳಿಗೋಸ್ಕರ ಹುಲ್ಲುಗಾವಲನ್ನು ಹುಡುಕುತ್ತಾ ಗೆದೋರಿಗೆ ಹೋಗುವ ಕಣಿವೆಯನ್ನು ದಾಟಿ ಆಚೆಯ ತಗ್ಗಿನ ಪೂರ್ವದಿಕ್ಕಿಗೆ ಹೋದಾಗ 40 ಅಲ್ಲಿ ಶ್ರೇಷ್ಠವಾದ ಹಸುರುಹುಲ್ಲುಗಾವಲನ್ನು ಕಂಡರು. ದೇಶವು ಎಲ್ಲಾ ಕಡೆಗಳಲ್ಲಿಯೂ ವಿಸ್ತಾರವಾಗಿದ್ದು ಸುಖಸಮಾಧಾನಗಳಿಂದಿತ್ತು; ಅಲ್ಲಿ ಪೂರ್ವದಿಂದ ವಾಸವಾಗಿದ್ದವರು ಹಾಮ್ಯರೇ. 41 ಮೇಲೆ ಹೇಳಿದ ಪ್ರಭುಗಳು ಯೆಹೂದ ರಾಜನಾದ ಹಿಜ್ಕೀಯನ ಕಾಲದಲ್ಲಿ ಅಲ್ಲಿಗೆ ಹೋಗಿ [ಆ ಹಾಮ್ಯರ] ಪಾಳೆಯಗಳನ್ನೂ ಅಲ್ಲಿ ಸಿಕ್ಕಿದ ಮೆಗೂನ್ಯರನ್ನೂ ಜಯಿಸಿ ಎಲ್ಲರನ್ನೂ ನಿರ್ನಾಮಮಾಡಿದರು; ಮತ್ತು ತಮ್ಮ ಆಡುಕುರಿಗಳಿಗೆ ಅಲ್ಲಿ ಮೇವು ಸಿಕ್ಕಿದದರಿಂದ ಅಲ್ಲೇ ವಾಸಿಸಿದರು. ಅಲ್ಲಿನ ಮೂಲನಿವಾಸಿಗಳು ಈಗ ಯಾರೂ ಉಳಿದಿರುವದಿಲ್ಲ. 42 ಇದಲ್ಲದೆ ಸಿಮೆಯೋನನ ಕುಲದ ಐನೂರು ಮಂದಿ ಸೇಯೀರ್ ಪರ್ವತಕ್ಕೆ ಹೋದರು; ಇಷ್ಷೀಯ ಮಕ್ಕಳಾದ ಪೆಲಟ್ಯ, ನೆಗರ್ಯ, ರೆಫಾಯ, ಉಜ್ಜೀಯೇಲ್ ಎಂಬವರು ಅವರ ಮುಖ್ಯಸ್ಥರು. 43 ಅವರು ಅಮಾಲೇಕ್ಯರಲ್ಲಿ ಉಳಿದವರನ್ನು ಸಂಹರಿಸಿ ಇಂದಿನವರೆಗೂ ಅಲ್ಲೇ ವಾಸವಾಗಿದ್ದಾರೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India