1 ಪೂರ್ವಕಾಲ ವೃತ್ತಾಂತ 25 - ಕನ್ನಡ ಸತ್ಯವೇದವು J.V. (BSI)ಗಾಯಕರ ಇಪ್ಪತ್ತನಾಲ್ಕು ವರ್ಗಗಳು 1 ಆಮೇಲೆ ದಾವೀದನೂ ಆರಾಧಕಮಂಡಲಿಯವರ ಪ್ರಧಾನರೂ ಕಿನ್ನರಿ ಸ್ವರಮಂಡಲ ತಾಳ ಇವುಗಳನ್ನು ಬಾರಿಸುತ್ತಾ ಪರವಶರಾಗಿ ಗಾಯನ ಸೇವೆಮಾಡುವದಕ್ಕೋಸ್ಕರ ಆಸಾಫ್ಯರನ್ನೂ ಹೇಮಾನ್ಯರನ್ನೂ ಯೆದುತೂನ್ಯರನ್ನೂ ಆರಿಸಿದರು. ಈ ಸೇವೆಯನ್ನು ಮಾಡತಕ್ಕ ಪುರುಷರ ಪಟ್ಟಿ - 2 ಆಸಾಫ್ಯರಲ್ಲಿ ಜಕ್ಕೂರ್, ಯೋಸೇಫ್, ನೆತನ್ಯ, ಅಶರೇಲ ಎಂಬವರು. ಇವರು ಅರಮನೆಯ ಗಾಯಕನಾದ ಆಸಾಫನ ಸಹಾಯಕರು. 3 ಯೆದುತೂನ್ಯರಲ್ಲಿ - ಗೆದಲ್ಯ, ಚೆರೀ, ಯೆಶಾಯ, [ಶಿಮ್ಮೀ] ಹಷಬ್ಯ, ಮತ್ತಿತ್ಯ ಇವರೇ. ಕಿನ್ನರಿಯನ್ನು ಬಾರಿಸುತ್ತಾ ಪರವಶರಾಗಿ ಯೆಹೋವ ಕೀರ್ತನೆಮಾಡುವ ತಮ್ಮ ತಂದೆಯಾದ ಯೆದುತೂನನಿಗೆ ಈ ಆರು ಮಂದಿಯೂ ಸಹಾಯಕರು. 4 ಹೇಮಾನ್ಯರಲ್ಲಿ - ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂವೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ, ರೋಮವ್ತಿುಯೆಜೆರ್, ಯೊಷ್ಬೆಕಾಷ, ಮಲ್ಲೋತೀ, ಹೋತೀರ್, ಮಹಜೀಯೋತ್. ಇವರೆಲ್ಲರೂ ಅರಸನ ದರ್ಶಿಯಾದ ಹೇಮಾನನ ಮಕ್ಕಳು. 5 ದೇವರು ಅವನಿಗೆ - ನೀನು ಅಭಿವೃದ್ಧಿಯಾಗುವ ಹಾಗೆ ಮಾಡುವೆನು ಎಂಬದಾಗಿ ವಾಗ್ದಾನ ಮಾಡಿದ್ದನು. ಅದರಂತೆಯೇ ಆತನು ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳನ್ನೂ ಮೂರು ಮಂದಿ ಹೆಣ್ಣುಮಕ್ಕಳನ್ನೂ ದಯಪಾಲಿಸಿದನು. 6 ದೇವರಾದ ಯೆಹೋವನ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ ಇವರೆಲ್ಲರೂ ತಮ್ಮ ತಂದೆಯ ಕೈಕೆಳಗಿದ್ದುಕೊಂಡು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನಮಾಡುತ್ತಿದ್ದರು. ಆಸಾಫ್ ಯೆದುತೂನ್ ಹೇಮಾನರು ಅರಸನ ಸೇವೆಯಲ್ಲಿದ್ದರು. 7 ಇವರೂ ಯೆಹೋವಕೀರ್ತನೆಗಳನ್ನು ಕಲಿತ ಇವರ ಸಹೋದರರೂ ಒಟ್ಟು ಇನ್ನೂರ ಎಂಭತ್ತೆಂಟು ಮಂದಿ; ಇವೆಲ್ಲರೂ ಗಾಯನಪ್ರವೀಣರು. 8 ಇವರಲ್ಲಿ ಹಿರಿಕಿರಿಯರೂ ಗುರುಶಿಷ್ಯರೂ ಕೂಡಿಕೊಂಡು ಚೀಟಿನಿಂದ ತಮ್ಮ ಸೇವಾಕ್ರಮವನ್ನು ಗೊತ್ತುಮಾಡಿಕೊಂಡರು. ಚೀಟಿನ ಪ್ರಕಾರವಾಗಿ 9 ಮೊದಲನೆಯವನು ಆಸಾಫ್ಯನಾದ ಯೋಸೇಫನು. ಎರಡನೆಯವನು ಗೆದಲ್ಯ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 10 ಮೂರನೆಯವನು ಜಕ್ಕೂರ್; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 11 ನಾಲ್ಕನೆಯವನು ಇಚ್ರೀ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 12 ಐದನೆಯವನು ನೆತನ್ಯ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 13 ಆರನೆಯವನು ಬುಕ್ಕೀಯ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 14 ಏಳನೆಯವನು ಯೆಸರೇಲ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 15 ಎಂಟನೆಯವನು ಯೆಶಾಯ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 16 ಒಂಭತ್ತನೆಯವನು ಮತ್ತನ್ಯ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 17 ಹತ್ತನೆಯವನು ಶಿಮ್ಮೀ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 18 ಹನ್ನೊಂದನೆಯವನು ಅಜರೇಲ್; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 19 ಹನ್ನೆರಡನೆಯವನು ಹಷಬ್ಯ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 20 ಹದಿಮೂರನೆಯವನು ಶೂಬಾಯೇಲ್; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 21 ಹದಿನಾಲ್ಕನೆಯವನು ಮತ್ತಿತ್ಯ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 22 ಹದಿನೈದನೆಯವನು ಯೆರೆಮೋತ್; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 23 ಹದಿನಾರನೆಯವನು ಹನನ್ಯ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 24 ಹದಿನೇಳನೆಯವನು ಯೊಷ್ಬೆಕಾಷ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 25 ಹದಿನೆಂಟನೆಯವನು ಹನಾನೀ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 26 ಹತ್ತೊಂಭತ್ತನೆಯವನು ಮಲ್ಲೋತಿ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 27 ಇಪ್ಪತ್ತನೆಯವನು ಎಲೀಯಾತ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 28 ಇಪ್ಪತ್ತೊಂದನೆಯವನು ಹೋತೀರ್; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 29 ಇಪ್ಪತ್ತೆರಡನೆಯವನು ಗಿದ್ದಲ್ತಿ; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 30 ಇಪ್ಪತ್ತಮೂರನೆಯವನು ಮಹಜೀಯೋತ್; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. 31 ಇಪ್ಪತ್ತನಾಲ್ಕನೆಯವನು ರೋಮವ್ತಿುಯೆಜೆರ್; ಇವನೂ ಇವನ ಸಹೋದರರೂ ಮಕ್ಕಳೂ ಕೂಡಿ ಹನ್ನೆರಡು ಮಂದಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India