ಮುನ್ನುಡಿ
ಕ್ರಿ. ಪೂ. ಏಳನೇ ಶತಮಾನ, ಬಾಬಿಲೋನಿನವರು ಯೆಹೂದ್ಯರನ್ನು ಆಳುತ್ತಿದ್ದ ಕಾಲ. ಆಗ ತಮ್ಮ ಆಳ್ವಿಕೆಗೆ ಒಳಪಟ್ಟವರನ್ನು ಕ್ರೂರವಾಗಿ ಹಿಂಸಿಸುವುದು ಸರ್ವೇಸಾಮಾನ್ಯವಾಗಿತ್ತು. ಎಂದೇ ಯೆಹೂದ್ಯರು ಬಾಬಿಲೋನಿನವರ ದಬ್ಬಾಳಿಕೆಗೆ ಹೊರತಾಗಲಿಲ್ಲ. ಆಗ ಪ್ರವಾದಿಯಾಗಿದ್ದ ಹಬಕ್ಕೂಕನು ತನ್ನ ಜನರ ಪರಿಸ್ಥಿತಿಯನ್ನು ಕಂಡು ಮನಮರುಗಿ ದೇವರಲ್ಲಿ ಮೊರೆಯಿಡುತ್ತಾನೆ: “ದುಷ್ಟನು ಶಿಷ್ಟನಾದವನನ್ನು ಕಬಳಿಸುತ್ತಿರುವುದನ್ನು ನೋಡಿ ಸುಮ್ಮನಿರುವೆ, ಏಕೆ?” (1:13) ಎಂದು ಕೇಳುತ್ತಾನೆ. ಅದಕ್ಕೆ ದೇವರು: “ನಿಯಮಿತ ಕಾಲದಲ್ಲಿ ನ್ಯಾಯನಿರ್ಣಯವಾಗುವುದು. ಸಜ್ಜನರು ಶ್ರದ್ಧೆಯಿಂದ ಜೀವಿಸುವನು” ಎಂದು ಉತ್ತರಿಸುತ್ತಾರೆ.
ಮೇಲ್ಕಂಡ ವಿಷಯಗಳನ್ನೊಳಗೊಂಡ ಈ ಗ್ರಂಥದಲ್ಲಿ ದುರುಳರಿಗೆ ಬರಲಿರುವ ದಂಡನೆಯನ್ನು ಕುರಿತು ಪ್ರವಾದಿ ಪ್ರಸ್ತಾಪಿಸುತ್ತಾನೆ. ಕೊನೆಯದಾಗಿ ದೇವರ ಮಹಿಮೆಯನ್ನೂ ಅವರಲ್ಲಿ ತನಗಿದ್ದ ಭಕ್ತಿವಿಶ್ವಾಸವನ್ನೂ ವರ್ಣಿಸುತ್ತಾ ಒಂದು ಗೀತೆಯನ್ನು ರಚಿಸುತ್ತಾನೆ.
ಪರಿವಿಡಿ
ಹಬಕ್ಕೂಕನ ಮೊರೆ - ದೇವರ ಸದುತ್ತರ 1:1—2:4
ದುರುಳರಿಗೆ ಬರಲಿರುವ ದಂಡನೆ 2:5-20
ಹಬಕ್ಕೂಕನ ಪ್ರಾರ್ಥನೆ 3:1-19