ಮುನ್ನುಡಿ
ಪ್ರವಾದಿ ಹಗ್ಗಾಯನ ಕಾಲ ಕ್ರಿ. ಪೂ. 520. ಬಾಬಿಲೋನಿಗೆ ಸೆರೆಹೋಗಿದ್ದ ಯೆಹೂದ್ಯರು ಜೆರುಸಲೇಮಿಗೆ ಹಿಂತಿರುಗಿ ಕೆಲವೇ ವರ್ಷಗಳಾಗಿದ್ದವು. ಜೆರುಸಲೇಮ್ ನಗರ ನಾಶವಾಗಿತ್ತು. ಮಹಾದೇವಾಲಯವೂ ನೆಮಸಮವಾಗಿತ್ತು. ಅದನ್ನು ಪುನಃ ಕಟ್ಟಲು ಹಗ್ಗಾಯನ ಮುಖಾಂತರ ದೇವರು ಜನರನ್ನು ಪ್ರೋತ್ಸಾಹಿಸುತ್ತಾರೆ. ಜನರು ತಮ್ಮ ಜೀವನವನ್ನು ಸುಧಾರಿಸಿ ಹೊಸಬರಾಗಬೇಕು, ಪರಿಶುದ್ಧರಾಗಬೇಕು. ಹಾಗೆ ಮಾಡಿದ್ದಲ್ಲಿ ದೇವರು ವಾಗ್ದಾನಮಾಡಿರುವ ಶಾಂತಿ ಸೌಭಾಗ್ಯ, ಲಭ್ಯವಾಗುತ್ತದೆ. ಈ ವಿಷಯಗಳನ್ನು ಕುರಿತ ದೈವೋಕ್ತಿಗಳ ಸಂಕಲನವೇ ಈ ಗ್ರಂಥ.
ಪರಿವಿಡಿ
ಮಹಾದೇವಾಲಯವನ್ನು ಪುನಃ ಕಟ್ಟಲು ಆಜ್ಞೆ 1:1-15
ಉಪಶಮನ ಹಾಗೂ ಭರವಸೆಯ ಸಂದೇಶ 2:1-23