Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ಸೆರೆಹೋಗಿದ್ದ ಇಸ್ರಯೇಲರನ್ನು ಅದ್ಭುತಕರವಾಗಿ ಈಜಿಪ್ಟಿನಿಂದ ಬಿಡುಗಡೆ ಮಾಡಿ ಹೊರತಂದ ವರದಿ ಜೀವೋದ್ಧಾರದ ಯೋಜನೆಯಲ್ಲೇ ಒಂದು ಮಹತ್ತಾದ ಘಟನೆ. ಈ ವರದಿಯನ್ನೇ ತಿರುಳನ್ನಾಗಿಸಿಕೊಂಡಿರುವ ಬೈಬಲ್ಲಿನ ಈ ದ್ವಿತೀಯ ಕಾಂಡದಲ್ಲಿ ನಾಲ್ಕು ಮುಖ್ಯ ಭಾಗಗಳನ್ನು ಗುರುತಿಸಬಹುದು:
1: ಭೀಕರ ದಾಸತ್ವದಿಂದ ಬಿಡುಗಡೆ; 2: ಈಜಿಪ್ಟಿನಿಂದ ಸೀನಾಯಿ ಬೆಟ್ಟಕ್ಕೆ ಪಯಣ; 3: ಅಲ್ಲಿ ದೇವರಿಗೂ ಇಸ್ರಯೇಲರಿಗೂ ಆದ ಒಪ್ಪಂದ ಮತ್ತು ದೇವರಿಂದ ಬಂದ ನೈತಿಕ, ಸಾಮಾಜಿಕ ಹಾಗು ಧಾರ್ಮಿಕ ನಿಯಮಗಳು; 4: ದೇವಾರಾಧನೆಗೆ ಬೇಕಾದ ಗುಡಾರದ ನಿರ್ಮಾಣ, ಯಾಜಕರ ಸೇವಾವೃತ್ತಿ ಹಾಗೂ ಪೂಜಾವಿಧಿಗಳು.
ದಾಸತ್ವದಿಂದ ಬಿಡುಗಡೆಯಾದ ಈ ಇಸ್ರಯೇಲ್ ಜನಾಂಗವನ್ನು ದೇವರು ಒಂದು ವ್ಯವಸ್ಥಿತ ಸಮಾಜವನ್ನಾಗಿ ಮಾರ್ಪಡಿಸುತ್ತಾರೆ. ಅವರಿಗೆ ಒಂದು ಭವ್ಯ ಭವಿಷ್ಯವನ್ನು ತೆರೆದಿಡುತ್ತಾರೆ. ಈ ಗ್ರಂಥದ ಮೂಲ ಮಹಾತ್ಮ ಮೋಶೆ; ಇದರ ಬಹು ಮುಖ್ಯಭಾಗ ವಿಶ್ವವಿಖ್ಯಾತವಾದ, ದೇವರಿತ್ತ ಹತ್ತು ಆಜ್ಞೆಗಳು.
ಪರಿವಿಡಿ
ಈಜಿಪ್ಟಿನಿಂದ ಇಸ್ರಯೇಲರ ಬಿಡುಗಡೆ 1:1—15:21
ಅ) ಈಜಿಪ್ಟಿನಲ್ಲಿ ಗುಲಾಮಗಿರಿ 1:1-22
ಆ) ಮೋಶೆಯ ಜನನ ಮತ್ತು ಬಾಲ್ಯ 2:1—4:31
ಇ) ಫರೋಹನ ಮುಂದೆ ಮೋಶೆ ಮತ್ತು ಆರೋನ್ 5:1—11:10
ಈ) ಪಾಸ್ಕ ಆಚರಣೆ ಮತ್ತು ಈಜಿಪ್ಟಿನಿಂದ ಪಲಾಯನ 12:1—15:21
ಕೆಂಪುಸಮುದ್ರದಿಂದ ಸೀನಾಯಿ ಬೆಟ್ಟಕ್ಕೆ ಪಯಣ 15:22—18:27
ಆಜ್ಞಾವಿಧಿಗಳು ಮತ್ತು ಒಡಂಬಡಿಕೆ 19:1—24:18
ಒಡಂಬಡಿಕೆ, ಗುಡಾರದ ನಿರ್ಮಾಣ ಮತ್ತು ಆರಾಧನಾ ವಿಧಿಗಳು 25:1—40:38

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು