Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಯೇಲ INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ಪ್ರವಾದಿ ಯೊವೇಲನ ಕಾಲ ಮತ್ತು ಜೀವನವನ್ನು ಕುರಿತು ನಮಗೆ ಸಾಕಷ್ಟು ಮಾಹಿತಿ ದೊರಕಿಲ್ಲ. ಕ್ರಿ. ಪೂ. ನಾಲ್ಕು ಅಥವಾ ಐದನೇ ಶತಮಾನದಲ್ಲಿ ಪರ್ಷಿಯನ್ನರು ಜುದೇಯ ನಾಡನ್ನು ಆಳುತ್ತಿದ್ದಾಗ ಈ ಗ್ರಂಥ ಉಗಮವಾಗಿರಬಹುದೆಂಬುದು ಕೆಲವರ ಅಭಿಪ್ರಾಯ. ಪಾಲೆಸ್ಟಿನ್ ನಾಡಿನಲ್ಲಿ ಮಿಡತೆಗಳ ಭೀಕರ ಹಾವಳಿ ಹಾಗೂ ಘೋರಕ್ಷಾಮ ತಲೆದೋರಲಿವೆಯೆಂದು ಯೊವೇಲನು ಮುಂತಿಳಿಸುತ್ತಾನೆ. ಈ ಅನಾಹುತ ಸರ್ವೇಶ್ವರನ ಮಹಾದಿನದ ಮುನ್ಸೂಚನೆ ಮತ್ತು ಅನೀತಿವಂತರಿಗೆ ಬರಲಿರುವ ದಂಡನೆಯ ಕುರುಹು ಎಂದು ಅರುಹಿಸುತ್ತಾನೆ.
ಜನರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ದೇವರಾದ ಸರ್ವೇಶ್ವರಸ್ವಾಮಿಗೆ ಶರಣರಾಗಬೇಕು. ಸೂಕ್ತಕಾಲದಲ್ಲಿ ದೇವರು ಎಲ್ಲಾ ಮಾನವರ ಮೇಲೆ ತಮ್ಮ ಪವಿತ್ರಾತ್ಮರನ್ನು ಸುರಿಸಿ ಆಶೀರ್ವಾದ ಮಾಡುವರು ಎಂಬುದು ಈ ಗ್ರಂಥದ ಮುಖ್ಯಾಂಶ.
ಪರಿವಿಡಿ
1. ಮಿಡತೆಗಳ ಹಾವಳಿ 1:1—2:17
2. ಜೀವೋದ್ಧಾರದ ವಾಗ್ದಾನ 2:18—2:27
3. ಸರ್ವೇಶ್ವರನ ದಿನ 2:28—3:21

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು