ಯೋಬ 25 - ಕನ್ನಡ ಸತ್ಯವೇದವು C.L. Bible (BSI)1 ಬಳಿಕ ಶೂಹ್ಯನಾದ ಬಿಲ್ದದನು ಹೀಗೆಂದನು: 2 “ದೇವರು ಮಹೋನ್ನತ ಪ್ರಭು; ಭಯಭಕ್ತಿಗೆ ಪಾತ್ರನು ಉನ್ನತಲೋಕದಲ್ಲಿ ಶಾಂತಿಸಮಾಧಾನವನು ಸ್ಥಾಪಿಸಿಹನು. 3 ಲೆಕ್ಕವಿದೆಯೇ ಆತನ ಸೇನೆಗಳಿಗೆ? ಆತನ ತೇಜಸ್ಸು ಮೂಡದಿರುವುದು ಯಾರಿಗೆ? 4 ನರನು ದೇವರ ದೃಷ್ಟಿಯಲ್ಲಿ ಸಜ್ಜನನಾಗಿರಲು ಸಾಧ್ಯವೆ? ಸ್ತ್ರೀಯರಲ್ಲಿ ಹುಟ್ಟಿದವನು ಪರಿಶುದ್ಧನಾಗಿರುವುದು ಶಕ್ಯವೆ? 5 ಆತನ ದೃಷ್ಟಿಗೆ ಚಂದ್ರನೂ ಕಾಂತಿಯುತನಲ್ಲ ನಕ್ಷತ್ರಗಳೂ ನಿರ್ಮಲವಾದವುಗಳಲ್ಲ. 6 ಇಂತಿರಲು ಹುಳುವಿನಂಥ ನರನು ಏತರವನು? ಕ್ರಿಮಿಯಂಥ ನರನು ಎಷ್ಟುಮಾತ್ರದವನು?” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India