ಮುನ್ನುಡಿ
ದೇವರಿಂದ ಆಯ್ಕೆಯಾಗಿ ಹಾಗು ಮೋಶೆಯ ಉತ್ತರಾಧಿಕಾರಿಯಾಗಿ ಇಸ್ರಯೇಲ್ ಜನಾಂಗವನ್ನು ಮುನ್ನಡೆಸಿದ ಮಹಾನುಭಾವ ಯೆಹೋಶುವ. ಇವನು ಹೇಗೆ ವಾಗ್ದತ್ತ ನಾಡಾದ ಕಾನಾನನ್ನು ಜಯಿಸಿ ಆ ನಾಡನ್ನು ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ಹಂಚಿಕೊಟ್ಟ ಎಂಬುದನ್ನು ವಿವರಿಸುತ್ತದೆ ಈ ಗ್ರಂಥ.
ಇದರಲ್ಲಿ ಗಮನಾರ್ಹವಾದ ಘಟನೆಗಳು ಇವು: ಜೋರ್ಡನ್ ನದಿದಾಟು, ಜೆರಿಕೋ ಪಟ್ಟಣದ ಪತನ, ಆಯಿ ನಗರದ ಆಕ್ರಮಣ, ವಾಗ್ದತ್ತ ನಾಡಿನಲ್ಲಿ ನಿವಾಸ, ದೇವರೊಡನೆ ಇಸ್ರಯೇಲ್ ಸಮಾಜ ಮಾಡಿಕೊಂಡಿದ್ದ ಒಡಂಬಡಿಕೆಯ ನವೀಕರಣ. ಈ ಭಾಗದ ಗಮನಾರ್ಹ ವಾಕ್ಯವೆಂದರೆ ಇದು: “ನೀವು ಯಾರಿಗೆ ಸೇವೆ ಸಲ್ಲಿಸಬೇಕೆಂದಿದ್ದೀರಿ? ಇಂದೇ ಆರಿಸಿಕೊಳ್ಳಿ; ನಾನು ಮತ್ತು ನನ್ನ ಮನೆಯವರಾದರೋ ಸರ್ವೇಶ್ವರನಿಗೆ ಮಾತ್ರ ಸೇವೆ ಸಲ್ಲಿಸುತ್ತೇವೆ” (24:15).
ಪರಿವಿಡಿ
1: ಕಾನಾನ್ ನಾಡಿನ ವಶೀಕರಣ 1:1—12:24
2: ಆ ನಾಡಿನ ವಿಭಜನೆ 13:1—21:45
ಅ) ಜೋರ್ಡನಿನ ಪೂರ್ವಪ್ರದೇಶ 13:1-33
ಆ) ಜೋರ್ಡನಿನ ಪಶ್ಚಿಮ ಪ್ರದೇಶ 14:1—19:51
ಇ) ಆಶ್ರಯ ನಗರಗಳ ಸ್ಥಾಪನೆ 20:1—20:9
ಈ) ಲೇವಿಯರ ನಿವಾಸ ನಗರಗಳು 21:1-45
3: ಪೂರ್ವ ಗೋತ್ರಗಳು ಮರಳಿ ಬಂದದ್ದು 22:1-34
4: ಯೆಹೋಶುವನಿಂದ ಬೀಳ್ಕೊಡುಗೆಯ ಬುದ್ಧಿವಾದ 23:1-16
5: ಶೆಕೆಮಿನಲ್ಲಿ ಒಡಂಬಡಿಕೆಯ ನವೀಕರಣ 24:1-33