Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 21 - ಕನ್ನಡ ಸತ್ಯವೇದವು C.L. Bible (BSI)


ಲೇವಿಕುಲಕ್ಕೆ ದೊರಕಿದ ನಗರಗಳು

1 ಲೇವಿ ಕುಲಾಧಿಪತಿಗಳು ಕಾನಾನ್ ನಾಡಿನ ಶೀಲೋವಿನಲ್ಲಿದ್ದ ಯಾಜಕ ಎಲ್ಲಾಜಾರ್, ನೂನನ ಮಗ ಯೆಹೋಶುವ ಮತ್ತು ಇಸ್ರಯೇಲ್ ಕುಲಾಧಿಪತಿಗಳ ಬಳಿಗೆ ಬಂದರು.

2 “ನಮ್ಮ ನಿವಾಸಕ್ಕೆ ನಗರಗಳನ್ನೂ ನಮ್ಮ ಪಶುಪ್ರಾಣಿಗಳಿಗೆ ಗೋಮಾಳಗಳನ್ನೂ ಕೊಡಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಯ ಮುಖಾಂತರ ಆಜ್ಞಾಪಿಸಿದ್ದಾರಲ್ಲವೆ?” ಎಂದು ವಿನಂತಿಸಿದರು.

3 ಸರ್ವೇಶ್ವರನ ಆಜ್ಞೆಯಂತೆಯೇ ಅವರಿಗೆ ಸೊತ್ತಾಗಿ ಈ ಕೆಳಕಂಡ ನಗರಗಳನ್ನು ಅವುಗಳಿಗೆ ಸೇರಿದ ಗೋಮಾಳಗಳನ್ನೂ ಕೊಡಲಾಯಿತು.

4 ಕೆಹಾತ್ಯರಿಗಾಗಿ ಚೀಟು ಹಾಕಿದಾಗ ಆರೋನನ ವಂಶದವರಾದ ಲೇವಿಯರಿಗೆ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನ್ ಕುಲಗಳಿಂದ ಹದಿಮೂರು ನಗರಗಳು ದೊರಕಿದವು.

5 ಮಿಕ್ಕ ಕೆಹಾತ್ಯರಿಗೆ ಎಪ್ರಯಿಮ್ ಹಾಗೂ ದಾನ್ ಕುಲಗಳಿಂದ ಮತ್ತು ಮನಸ್ಸೆಯ ಅರ್ಧ ಕುಲಗಳಿಂದ ಹತ್ತು ನಗರಗಳು ಸಿಕ್ಕಿದವು.

6 ಮತ್ತೆ ಚೀಟು ಹಾಕಿದಾಗ ಗೇರ್ಷೋನ್ಯರಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ ಎಂಬ ಕುಲಗಳಿಂದ ಮತ್ತು ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಕುಲದಿಂದ ಹದಿಮೂರು ನಗರಗಳು ದೊರೆತವು.

7 ಮೆರಾರಿ ಗೋತ್ರದವರಿಗೆ ರೂಬೇನ್, ಗಾದ್ ಹಾಗೂ ಜೆಬುಲೂನ್ ಕುಲಗಳಿಂದ ಹನ್ನೆರಡು ನಗರಗಳು ಸಿಕ್ಕಿದವು.

8 ಸರ್ವೇಶ್ವರ ಸ್ವಾಮಿ ಮೋಶೆಯ ಮುಖಾಂತರ ಆಜ್ಞಾಪಿಸಿದಂತೆ ಇಸ್ರಯೇಲರು ಚೀಟು ಹಾಕಿ ಲೇವಿಯರಿಗೆ ಇಷ್ಟು ನಗರಗಳನ್ನು ಅವುಗಳಿಗೆ ಸೇರಿದ ಗೋಮಾಳಗಳನ್ನೂ ಕೊಟ್ಟರು.


ಕೆಹಾತನ ಗೋತ್ರದ ಲೇವಿಯರಿಗೆ ದೊರೆತ ನಗರಗಳು

9 ಲೇವಿ ಕುಲದವರು ಹಾಗೂ ಕೆಹಾತನ ಗೋತ್ರದವರು ಆದ ಆರೋನನ ಕುಟುಂಬದವರಿಗೆ ಚೀಟು ಮೊದಲು ಬಿದ್ದಿತು.

10 ಆದ್ದರಿಂದ ಇಸ್ರಯೇಲರು ಅವರಿಗೆ ಯೆಹೂದ ಮತ್ತು ಸಿಮೆಯೋನ್ ಕುಲಗಳಿಂದ ಕೆಳಗೆ ಹೇಳಿರುವ ನಗರಗಳನ್ನು ಕೊಟ್ಟರು:

11 ಇವುಗಳಲ್ಲಿ ಯೆಹೂದ ಮಲೆನಾಡಿನ ಹೆಬ್ರೋನೆಂಬ ಗೋಮಾಳ ಸಹಿತವಾದ ಕಿರ್ಯತರ್ಬವೂ ಸೇರಿರುತ್ತದೆ. (ಕಿರ್ಯತರ್ಬ ಎಂದರೆ ಅನಾಕನ ತಂದೆಯಾದ ಅರ್ಬನನಗರ).

12 ಆದರೆ ಇದಕ್ಕೆ ಸೇರಿದ ಹೊಲಗಳನ್ನು ಮತ್ತು ಗ್ರಾಮಗಳನ್ನು ಯಫುನ್ನೆಯ ಮಗ ಕಾಲೇಬನಿಗೆ ಕೊಟ್ಟರು.

13 ಯಾಜಕ ಆರೋನನ ವಂಶದವರಿಗೆ ಮೇಲೆ ಹೇಳಿದ ಎರಡು ಕುಲಗಳಿಂದ ಹೆಬ್ರೋನ್ ಎಂಬ ಆಶ್ರಯ ನಗರ.

14 ಲಿಬ್ನಾ, ಯತ್ತೀರ್, ಎಷ್ಟೆಮೋಹ

15-16 ಹೋಲೋನ್, ದೆಬೀರ್, ಅಯಿನ್, ಯುಟ್ಟಾ, ಬೇತ್ ಷೆಮೆಷ್ ಎಂಬ ಒಂಬತ್ತು ಗೋಮಾಳ ಸಹಿತವಾದ ನಗರಗಳು

17 ಹಾಗೂ ಬೆನ್ಯಾಮೀನ್ ಕುಲದಿಂದ

18 ಗಿಬ್ಯೋನ್, ಗೆಬ, ಗೆನತೋತ್, ಅಲ್ಮೋನ್ ಎಂಬ ನಾಲ್ಕು ಗೋಮಾಳ ಸಹಿತವಾದ ನಗರಗಳು ದೊರೆತವು.

19 ಯಾಜಕನಾದ ಆರೋನನ ವಂಶದವರ ಪಾಲಿಗೆ ಬಂದಂಥ ಗೋಮಾಳ ಸಹಿತವಾದ ನಗರಗಳು ಹದಿಮೂರು.

20 ಲೇವಿಯರಾದ ಕೆಹಾತ್ಯರ ಉಳಿದ ಕುಟುಂಬಗಳಿಗೆ

21 ಎಫ್ರಯಿಮ್ ಸೊತ್ತಿನಿಂದ ಬೆಟ್ಟದಲ್ಲಿರುವ ಶೆಕೆಮೆಂಬ ಆಶ್ರಯ ನಗರ,

22 ಗೆಜೆರ್, ಕಿದ್ ಚೈಮ್ ಹಾಗೂ ಬೇತ್ ಹೋರೋನ್ ಎಂಬ ಗೋಮಾಳಸಹಿತವಾದ ನಾಲ್ಕು ನಗರಗಳು,

23 ದಾನ್ಯರ ಸೊತ್ತಿನಿಂದ ಎಲ್ಲೆಕೇ, ಗಿಬ್ಬೆತೋನ್,

24 ಅಯ್ಯಾಲೋನ್, ಗತ್ ರಿಮ್ಮೋನ್ ಎಂಬ ಗೋಮಾಳಸಹಿತವಾದ ನಾಲ್ಕು ಪಟ್ಟಣಗಳು,

25 ಮನಸ್ಸೆಕುಲದ ಅರ್ಧಜನರ ಸೊತ್ತಿನಿಂದ ತಾನಾಕ್, ಗತ್ ರಿಮ್ಮೋನ್ ಎಂಬ ಎರಡು ಗೋಮಾಳಸಹಿತವಾದ ನಗರಗಳು ಚೀಟಿನಿಂದ ದೊರಕಿದವು.

26 ಒಟ್ಟಾರೆ ಕೆಹಾತ್ಯರಿಗೆ ಸಿಕ್ಕಿದಂಥ ಗೋಮಾಳ ಸಹಿತವಾದ ನಗರಗಳು ಹತ್ತು.


ಗೇರ್ಷೋನ್ಯರ ಕುಟುಂಬದ ಲೇವಿಯರಿಗೆ ದೊರೆತ ನಗರಗಳು

27 ಗೇರ್ಷೋನ್ಯರ ಕುಟುಂಬ಼ಗಳಿಗೆ ಅರ್ಧ ಮನಸ್ಸೆಯವರ ಸೊತ್ತಿನಿಂದ ದೊರಕಿದವುಗಳು ಇವು: ಕೊಲೆ ಮಾಡಿದವನಿಗೆ ಆಶ್ರಯನಗರವಾದ ಬಾಷಾನಿನ ಗೋಲಾನ್, ಬೆಯೆಷ್ಟೆರಾ ಎಂಬ ಗೋಮಾಳ ಸಹಿತವಾದ ಎರಡು ನಗರಗಳು;

28 ಇಸ್ಸಾಕಾರ್ ಸೊತ್ತಿನಿಂದ ಕಿಷ್ಯೋನ್, ದಾಬೆರತ್

29 ಯರ್ಮೂತ್, ಎಂಗನ್ನೀಮ್ ಎಂಬ ನಾಲ್ಕು ಗೋಮಾಳ ಸಹಿತವಾದ ನಗರಗಳು;

30 ಆಶೇರ್ ಕುಲದಿಂದ ಮಿಶಾಲ್, ಅಬ್ದೋನ್,

31 ಹೆಲ್ಕಾತ್, ರೆಹೋಬ್‍ ಎಂಬ ನಾಲ್ಕು ಗೋಮಾಳ ಸಹಿತವಾದ ನಗರಗಳು;

32 ನಫ್ತಾಲಿ ಸೊತ್ತಿನಿಂದ ಕೊಲೆಮಾಡಿದವನಿಗೆ ಆಶ್ರಯನಗರವಾದ ಗಲಿಲೇಯದ ಕೆದೆಷ್, ಹಮ್ಮೋತ್ ದೋರ್, ಕರ್ತಾನ್ ಎಂಬ ಗೋಮಾಳ ಸಹಿತವಾದ ಮೂರು ನಗರಗಳು.

33 ಹೀಗೆ ಗೇರ್ಷೋನ್ಯರಿಗೆ ಸಿಕ್ಕಿದ ಗೋಮಾಳ ಸಹಿತವಾದ ಒಟ್ಟು ನಗರಗಳು ಹದಿಮೂರು.


ಮೆರಾರೀ ಗೋತ್ರದ ಲೇವಿಯರಿಗೆ ದೊರೆತ ನಗರಗಳು

34 ಮಿಕ್ಕ ಲೇವಿಯರಾದ ಮೆರಾರೀ ಗೋತ್ರದವರಿಗೆ ಜೆಬುಲೂನ್ ಸೊತ್ತಿನಿಂದ ಯೊಕ್ನೆಯಾಮ್, ಕರ್ತಾ,

35 ದಿಮ್ನಾ ಹಾಗೂ ನಹಲಾಲ್ ಎಂಬ ಗೋಮಾಳ ಸಹಿತವಾದ ನಾಲ್ಕು ನಗರಗಳು;

36 ರೂಬೇನ್ಯರ ಸೊತ್ತಿನಿಂದ ಬೆಚೆರ್, ಯಹಚಾ,

37 ಕೆದೇಮೋತ್ ಹಾಗೂ ಮೇಫಾಗತ್ ಎಂಬ ಗೋಮಾಳ ಸಹಿತವಾದ ನಾಲ್ಕು ನಗರಗಳು;

38 ಗಾದ್ಯರ ಸೊತ್ತಿನಿಂದ ಕೊಲೆಮಾಡಿದವನಿಗೆ ಆಶ್ರಯ ನಗರವಾಗಿರುವ ಗಿಲ್ಯಾದಿನ ರಾಮೋತ್, ಮಹನಯಿಮ್,

39 ಹೆಷ್ಬೋನ್ ಹಾಗೂ ಯಗ್ಜೇರ್ ಎಂಬ ಗೋಮಾಳ ಸಹಿತವಾದ ನಾಲ್ಕು ನಗರಗಳು ಸಿಕ್ಕಿದವು.

40 ಮಿಕ್ಕ ಲೇವಿಯರಾದ ಮೆರಾರೀ ಗೋತ್ರಗಳಿಗೆ ಚೀಟಿನಿಂದ ಹೀಗೆ ದೊರೆತ ನಗರಗಳು ಒಟ್ಟು ಹನ್ನೆರಡು.

41 ಲೇವಿಯರಿಗೆ ಇಸ್ರಯೇಲರ ನಡುವೆ ದೊರಕಿದ ಗೋಮಾಳ ಸಹಿತವಾದ ನಗರಗಳು ಒಟ್ಟು ನಾಲ್ವತ್ತೆಂಟು.

42 ಈ ನಗರಗಳಲ್ಲಿ ಪ್ರತಿ ಒಂದಕ್ಕೂ ಗೋಮಾಳವಿರುತ್ತದೆ. ಎಲ್ಲ ನಗರಗಳಲ್ಲೂ ಹೀಗೆಯೇ ಇದೆ.


ನಾಡಿನ ವಿಭಜನೆಯ ಮುಕ್ತಾಯ

43 ಸರ್ವೇಶ್ವರಸ್ವಾಮಿ ಇಸ್ರಯೇಲರ ಪೂರ್ವಜರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ನಾಡನ್ನು ಹೀಗೆ ಅವರಿಗೆ ಕೊಟ್ಟರು. ಇಸ್ರಯೇಲರು ಅದನ್ನು ವಶಪಡಿಸಿಕೊಂಡು ಅದರಲ್ಲಿ ವಾಸಮಾಡಿದರು.

44 ಸರ್ವೇಶ್ವರ ಅವರ ಪೂರ್ವಜರಿಗೆ ಆಣೆಯಿಟ್ಟು ಹೇಳಿದಂತೆ ಅವರಿಗೆ ಎಲ್ಲೆಡೆಯಲ್ಲೂ ಶಾಂತಿಸಮಾಧಾನವನ್ನು ಅನುಗ್ರಹಿಸಿದರು. ಶತ್ರುಗಳಾರು ಅವರನ್ನು ಪ್ರತಿಭಟಿಸಿ ನಿಲ್ಲಲಿಲ್ಲ. ಎಲ್ಲರೂ ಅವರ ಕೈವಶವಾದರು.

45 ಸರ್ವೇಶ್ವರ ಇಸ್ರಯೇಲರಿಗೆ ಮಾಡಿದ ಅತ್ಯುನ್ನತ ವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ. ಎಲ್ಲವೂ ನೆರವೇರಿದವು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು