ಯೆಹೋಶುವ 19 - ಕನ್ನಡ ಸತ್ಯವೇದವು C.L. Bible (BSI)ಸಿಮೆಯೋನ್ ಕುಲದವರಿಗೆ ಬಂದ ಪಾಲು 1 ಎರಡನೇ ಸಾರಿಯ ಚೀಟು ಸಿಮೆಯೋನ್ ಕುಲದವರಿಗೆ ಬಿದ್ದಿತು. ಈ ಸಿಮೆಯೋನ್ ಕುಲದ ಗೋತ್ರಗಳ ಸೊತ್ತು ಯೂದಕುಲದವರ ಸೊತ್ತಿನ ಮಧ್ಯದಲ್ಲಿತ್ತು. 2 ಅದರ ಊರುಗಳು ಇವು: ಬೇರ್ಷೆಬ, 3 ಶೆಬ, ಮೋಲಾದಾ, ಹಚರ್ ಷೂವಾಲ್, ಬಾಲಾ, 4 ಎಚೆಮ್, ಎಲ್ತೋಲದ್, ಬೆತೂಲ್, 5 ಹೊರ್ಮಾ, ಚಿಕ್ಲಗ್, ಬೇತ್ ಮಾರ್ಕಾಬೋತ್, 6 ಹಚರ್ ಸೂಸಾ, ಬೇತ್ ಲೆಬಾವೋತ್, ಶಾರೂಹೆನ್ ಎಂಬ ಹದಿಮೂರು ನಗರಗಳು ಮತ್ತು ಅವುಗಳ ಗ್ರಾಮಗಳು. 7 ಆಯಿನ್, ರಿಮ್ಮೋನ್, ಏತೆರ್, ಅಷಾನ್ ಎಂಬ ನಾಲ್ಕು ನಗರಗಳು ಮತ್ತವುಗಳ ಗ್ರಾಮಗಳು; 8 ಅವುಗಳ ಸುತ್ತಣ ಪ್ರದೇಶದಲ್ಲಿ ಬಾಲತ್ ಬೇರ್ ಎಂಬ ಊರಿನವರೆಗೆ ಇತರ ಗ್ರಾಮಗಳು ಇವೆ. ಬಾಲತ್ ಬೇರ್ ಎಂಬುದು ದಕ್ಷಿಣದ ರಾಮ ಎನಿಸಿಕೊಳ್ಳುತ್ತದೆ. ಸಿಮೆಯೋನ್ ಕುಲದ ಗೋತ್ರಗಳಿಗೆ ಸಿಕ್ಕಿದ ಆಸ್ತಿ ಇದೇ. 9 ಈ ಆಸ್ತಿ ಯೂದವಂಶದ ಆಸ್ತಿಯಲ್ಲಿ ಒಂದು ಭಾಗ. ಯೂದವಂಶದವರಿಗೆ ದೊರಕಿದ ಪ್ರದೇಶ ಹೆಚ್ಚಾಗಿದ್ದುದರಿಂದ ಸಿಮೆಯೋನ್ಯರಿಗೆ ಅದರಲ್ಲೆ ಪಾಲು ಸಿಕ್ಕಿತು. ಜೆಬುಲೂನ್ಯರಿಗೆ ಬಂದ ಪಾಲು 10 ಮೂರನೇ ಸಾರಿಯ ಚೀಟು ಜೆಬುಲೂನ್ಯರಿಗೆ ಬಿದ್ದಿತು. ಈ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಿನ ಎಲ್ಲೆ. 11 ಸಾರೀದಿನಿಂದ ತೊಡಗಿ ಪಶ್ಚಿಮ ದಿಕ್ಕಿನಲ್ಲಿರುವ ಮರ್ಗಲಾ, ದಬ್ಬೆಷೆತ್ ಇವುಗಳ ಮೇಲೆ ಯೊಕ್ನೆಯಾಮ್ ಊರಿನ ಈಚೆಯಲ್ಲಿರುವ ಹಳ್ಳಕ್ಕೆ ಹೋಗುತ್ತದೆ. 12 ಅದೇ ಸಾರೀದಿನಿಂದ ಅದು ಪೂರ್ವದಿಕ್ಕಿನಲ್ಲಿ ಕಿಸ್ಲೋತ್ ತಾಬೋರಿನ ಎಲ್ಲೆಗೆ ಹತ್ತಿ ದಾಬೆರತಿಗೆ ಹೋಗುತ್ತದೆ. ಅಲ್ಲಿಂದ ಏರುತ್ತಾ ಯಾಫೀಯಕ್ಕೆ ಹೋಗುತ್ತದೆ. 13 ಅಲ್ಲಿಂದ ಮತ್ತೂ ಪೂರ್ವಕ್ಕೆ ಮುಂದುವರೆದು ಗತ್ ಹೇಫರ್, ಎತ್ ಕಾಚೀನ್ ಇವುಗಳ ಮೇಲೆ ನೇಯದ ಮಗ್ಗಲಲ್ಲಿರುವ ರಿಮ್ಮೇನಿಗೆ ಹೋಗುತ್ತದೆ. 14 ಅಲ್ಲಿಂದ ಅದು ಉತ್ತರಕ್ಕೆ ತಿರುಗಿಕೊಂಡು ಹನ್ನಾತೋನಿನ ಮೇಲೆ ಇಪ್ತಹೇಲಿನ ಕಣಿವೆಗೆ ಹೋಗಿ ಅಲ್ಲಿ ಮುಕ್ತಾಯಗೊಳ್ಳುತ್ತದೆ. 15 ಕಟ್ಟಾತ್, ನಹಲ್ಲಾಲ್, ಶಿಮ್ರೋನ್, ಇದಲಾ, ಬೆತ್ಲೆಹೇಮ್ ಇವೇ ಮೊದಲಾದ ಹನ್ನೆರಡು ನಗರಗಳೂ ಅವುಗಳಿಗೆ ಸೇರಿದ ಗ್ರಾಮಗಳು - 16 ಜೆಬುಲೂನ್ ಕುಲದ ಗೋತ್ರಗಳಿಗೆ ಸೊತ್ತಾಗಿ ದೊರಕಿದವು. ಇಸ್ಸಾಕಾರ್ ಕುಲದವರಿಗೆ ಬಂದ ಪಾಲು 17 ನಾಲ್ಕನೇ ಸಾರಿಯ ಚೀಟು ಇಸ್ಸಾಕಾರ್ ಕುಲದವರಿಗೆ ಬಿದ್ದಿತು. ಅದರ ಗೋತ್ರಗಳಿಗೆ ಸಿಕ್ಕಿದ ನಾಡಿನಲ್ಲಿರುವ ನಗರಗಳು ಯಾವುವು ಎಂದರೆ - 18 ಇಜ್ರೇಲ್, ಕೆಸುಲ್ಲೋತ್, 19 ಶೂನೇಮ್, ಹಫಾರಯಿಮ್, ಶೀಯೋನ್, 20 ಅನಾಹರತ್, ರಬ್ಬೀತ್, ಕಿಷ್ಯೋನ್, ಎಬೆಜ್, 21 ರೆಮೆತ್, ಏಂಗನ್ನೀಮ್, ಏನ್ ಹದ್ದಾ, ಬೇತ್ ಪಚ್ಚೇಚ್, 22 ತಾಬೋರ್, ಶಹಚೀಮಾ, ಬೇತ್ ಷೆಮೆಷ್ ಎಂಬ ಊರುಗಳೂ ಅದರ ಮೇರೆಯೊಳಗಿದ್ದವು. ಈ ಮೇರೆಯು ಜೋರ್ಡನ್ ನದಿಯ ತೀರದಲ್ಲಿ ಮುಗಿಯುತ್ತದೆ. 23 ಒಟ್ಟಾರೆ ಹದಿನಾರು ನಗರಗಳೂ ಅವುಗಳ ಗ್ರಾಮಗಳೂ ಇಸ್ಸಾಕಾರ್ ಕುಲದ ಗೋತ್ರಗಳಿಗೆ ದೊರಕಿದವು. ಅಶೇರ್ ಕುಲದವರಿಗೆ ಬಂದ ಪಾಲು 24 ಐದನೇ ಸಾರಿಯ ಚೀಟು ಅಶೇರ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಊರುಗಳು ಇವು: 25 ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್, 26 ಅಲಮ್ಮೆಲೆಕ್, ಅಮಾದ್, ಮಿಷಾಲ್. ಇವರ ನಾಡಿನ ಎಲ್ಲೆ ಪಶ್ಚಿಮದಲ್ಲಿ ಕರ್ಮೆಲ್ ಬೆಟ್ಟಕ್ಕೂ ಶೀಹೋರ್ ಲಿಬ್ನತ್ ಎಂಬ ಹಳ್ಳಕ್ಕೂ ತಾಕಿ 27 ಅಲ್ಲಿಂದ ಪೂರ್ವಕ್ಕೆ ತಿರುಗಿ ಬೇತ್ ದಾಗೋನಿಗೆ ಹೋಗುತ್ತದೆ. ಅಲ್ಲಿಂದ ಜೆಬುಲೂನ್ಯರ ಎಲ್ಲೆಗೂ ಇಫ್ತಹೇಲ್ ಕಣಿವೆಯ ಉತ್ತರದಿಕ್ಕಿನ ಮೂಲೆಗೂ ಹೊಂದಿಕೊಂಡು ಬೇತ್ ಏಮೆಕ್, ನೆಗೀಯೆಲ್ ಇವುಗಳ ಮೇಲೆ ಉತ್ತರಕ್ಕೆ ಮುಂದುವರೆದು 28 ಕಾಬೂಲ್, ಎಬ್ರೋನ್, ರೆಹೋಬ್, ಹಮ್ಮೋನ್, ಕಾನಾ ಇವುಗಳ ಮೇಲೆ ಸಿದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ. 29 ಅಲ್ಲಿಂದ ಅದು ತಿರುಗಿಕೊಂಡು ರಾಮಾ, ಟೈರ್ ಕೋಟೆ, ಹೋಸಾ ಇವುಗಳ ಮೇಲೆ ಅಕ್ಜೀಬ್ ಪ್ರಾಂತ್ಯಕ್ಕೆ ಹೋಗಿ ಸಮುದ್ರತೀರದಲ್ಲಿ ಕೊನೆಗೊಳ್ಳುತ್ತದೆ. 30 ಉಮ್ಮಾ, ಅಫೇಕ್, ರೆಹೂಬ್ ಇವೇ ಮೊದಲಾದ ಇಪ್ಪತ್ತೆರಡು ನಗರಗಳೂ ಅವುಗಳ ಗ್ರಾಮಗಳೂ 31 ಅಶೇರ್ ಕುಲದ ಗೋತ್ರಗಳ ಸೊತ್ತಾಗಿವೆ. ನಫ್ತಾಲಿ ಕುಲದವರಿಗೆ ಬಂದ ಪಾಲು 32 ಆರನೇ ಸಾರಿಯ ಚೀಟು ನಫ್ತಾಲಿ ಕುಲದವರಿಗೆ ಬಿದ್ದಿತು. ಆ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಿನ ಎಲ್ಲೆ ಹೀಗಿದೆ: 33 ಚಾನನ್ನೀಮಿನಲ್ಲಿರುವ ಹೇಲೆಫಿನ ಅಲ್ಲೋನ್ ಮರದಿಂದ ತೊಡಗಿ ಅದಾಮೀನೆಕೆಬ್, ಯೆಬ್ನೆಯೇಲ್ ಇವುಗಳ ಮೇಲೆ ಲಕ್ಕೂಮಿಗೆ ಹೋಗಿ ಜೋರ್ಡನ್ ನದಿಯ ತೀರದಲ್ಲಿ ಮುಗಿಯುತ್ತದೆ. 34 ಮತ್ತೆ ಅದೇ ಸ್ಥಳದಿಂದ ತೊಡಗಿ ಅಜ್ನೋತ್ ತಾಬೋರಿನ ಮೇಲೆ ಹುಕ್ಕೋಕಿಗೆ ಹೋಗುತ್ತದೆ. ದಕ್ಷಿಣದಲ್ಲಿ ಜೆಬುಲೂನ್ಯರ ಎಲ್ಲೆಗೂ ಪಶ್ಚಿಮದಲ್ಲಿ ಆಶೇರ್ಯರ ಮತ್ತು ಯೂದವಂಶದವರ ಎಲ್ಲೆಗೂ ಪೂರ್ವದಲ್ಲಿ ಜೋರ್ಡನ್ ನದಿಗೂ ಹೊಂದಿಕೊಂಡಿರುತ್ತದೆ. 35 ಚಿದ್ದೀಮ್, ಚೇರ್, ಹಮ್ಮತ್, 36 ರಕ್ಕತ್, ಕಿನ್ನೆರೆತ್, ಅದಾಮಾ, ರಾಮಾ, ಹಾಚೋರ್, 37-38 ಕೆದೆಷ್, ಎದ್ರೈ, ಏನ್ ಹಾಚೋರ್, ಇರೋನ್, ಮಿಗ್ದಲೇಲ್, ಹೊರೇಮ್, ಬೇತನಾತ್, ಬೇತ್ ಷೆಮೆಷ್ ಇವೇ ಮೊದಲಾದ ಹತ್ತೊಂಬತ್ತು ಕೋಟೆಕೊತ್ತಲಗಳುಳ್ಳ ನಗರಗಳೂ ಅವುಗಳ ಗ್ರಾಮಗಳೂ 39 ನಫ್ತಾಲಿ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಾಗಿವೆ. ದಾನ್ ಕುಲದವರಿಗೆ ಬಂದ ಪಾಲು 40 ಏಳನೇ ಸಾರಿಯ ಚೀಟು ದಾನ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸೊತ್ತಾಗಿ ದೊರಕಿದ ಊರುಗಳು ಇವು: 41 ಚೊರ್ಗಾ, ಎಷ್ಟಾವೋಲ್, 42 ಈರ್ಷೆಮೆಷ್, ಶಾಲಬ್ಬೀನ್, ಅಯ್ಯಾಲೋನ್, 43-44 ಇತ್ಲಾ, ಏಲೋನ್, ತಿಮ್ಮಾ, ಎಕ್ರೋನ್, ಎಲ್ತೆಕೇ, 45 ಗಿಬ್ಬೆತೋನ್, ಬಾಲತ್, ಯೆಹುದ್, ಬೆನೇಬೆರಕ್, 46 ಗತ್ ರಿಮ್ಮೋನ್, ಮೇಯರ್ಕೋನ್, ರಕ್ಕೋನ್, ಮತ್ತು ಜೊಪ್ಪಕ್ಕೆ ಎದುರಿಗಿರುವ ಪ್ರದೇಶವೂ ಇವರಿಗೆ ದೊರಕಿತು. 47 ದಾನ್ ಕುಲದವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸುವುದಕ್ಕಾಗಿ ಹೊರಟು ಲೆಷೆಮಿನವರೊಡನೆ ಯುದ್ಧಮಾಡಿ ಜಯಿಸಿದರು. ಆ ಜನರನ್ನು ಕತ್ತಿಯಿಂದ ಸಂಹರಿಸಿ ಅವರ ನಗರವನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸಿದರು. ಅಲ್ಲದೆ, ಅದಕ್ಕೆ ತಮ್ಮ ಮೂಲ ಪುರುಷನ ಹೆಸರಾದ ದಾನ್ ಎಂಬ ಹೆಸರನ್ನಿಟ್ಟರು. 48 ದಾನ್ ಕುಲದ ಗೋತ್ರಗಳಿಗೆ ದೊರಕಿದ ಸೊತ್ತು ಹಾಗೂ ಅದರಲ್ಲಿದ್ದ ನಗರ ಹಾಗೂ ಗ್ರಾಮಗಳು ಇವೇ. ಯೆಹೋಶುವನಿಗೆ ಕೊಟ್ಟ ಪಾಲು 49 ಇಸ್ರಯೇಲರು ನಾಡನ್ನು ಎಲ್ಲೆಎಲ್ಲೆಗಳ ಪ್ರಕಾರ ತಮ್ಮೊಳಗೆ ಹಂಚಿಕೊಂಡ ಮೇಲೆ ನೂನನ ಮಗ ಯೆಹೋಶುವನಿಗೂ ತಮ್ಮದರಲ್ಲಿ ಪಾಲು ಕೊಟ್ಟರು. 50 ಆತ ತನಗೋಸ್ಕರ ಎಫ್ರಯಿಮರ ಮಲೆನಾಡಿನಲ್ಲಿರುವ ‘ತಿಮ್ನತ್ ಸೆರಹ’ ಎಂಬ ನಗರವನ್ನು ಕೇಳಿಕೊಂಡನು. ಸರ್ವೇಶ್ವರನ ಆಜ್ಞೆಯಂತೆ ಅವರು ಅದನ್ನು ಅವನಿಗೆ ಕೊಟ್ಟರು. ಅವನು ಅದನ್ನು ಹೊಸದಾಗಿ ಕಟ್ಟಿ ಅದರಲ್ಲೇ ವಾಸಮಾಡಿದನು. 51 ಹೀಗೆ ಯಾಜಕ ಎಲ್ಲಾಜಾರನು, ನೂನನ ಮಗ ಯೆಹೋಶುವ ಮತ್ತು ಇಸ್ರಯೇಲ್ ಕುಲ ಮುಖ್ಯಸ್ಥರೂ ಶೀಲೋವಿನಲ್ಲಿದ್ದ ದೇವದರ್ಶನದ ಗುಡಾರದ ದ್ವಾರದಲ್ಲಿ ಸರ್ವೇಶ್ವರನ ಸನ್ನಿಧಿಯಲ್ಲೇ ಚೀಟುಹಾಕಿ ಪ್ರಾಂತ್ಯಗಳನ್ನು ಹಂಚಿಕೊಟ್ಟರು; ನಾಡಿನ ವಿಭಜನಾಕಾರ್ಯ ಮುಗಿಯಿತು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India