ಯೆಹೋಶುವ 15 - ಕನ್ನಡ ಸತ್ಯವೇದವು C.L. Bible (BSI)ಯೆಹೂದ್ಯಕುಲಕ್ಕೆ ದೊರಕಿದ ಆಸ್ತಿ 1 ಎದೋಮ್ ನಾಡು ಹಾಗೂ ಚಿನ್ ಮರುಭೂಮಿಯ ಎಲ್ಲೆಯಾಗಿರುವ ಕಾನಾನ್ ನಾಡಿನ ದಕ್ಷಿಣ ಭಾಗವು ಯೆಹೂದ ಕುಲದ ಗೋತ್ರಗಳಿಗೆ ದೊರಕಿದ ಸೊತ್ತು. 2 ಅದರ ದಕ್ಷಿಣದ ಎಲ್ಲೆ, ಲವಣ ಸಮುದ್ರದ ತೆಂಕಣ ತುದಿಯಿಂದ ತೊಡಗಿ 3 ಅಕ್ರಬ್ಬೀಮ್ ಎಂಬ ಕೊಲ್ಲಿಯ ದಕ್ಷಿಣ ಮಾರ್ಗವಾಗಿ ಚಿನ್ ಗೆ ಹೋಗುತ್ತದೆ. 4 ಅಲ್ಲಿಂದ ಕಾದೇಶ್ ಬರ್ನೇಯದ ದಕ್ಷಿಣ ಮಾರ್ಗವಾಗಿ ಹೆಚ್ರೋನಿಗೂ ಅಲ್ಲಿಂದ ಏರುತ್ತಾ ಅದ್ದಾರಿಗೂ ಹೋಗಿ ಕರ್ಕದ ಕಡೆಗೆ ತಿರುಗಿಕೊಳ್ಳುತ್ತದೆ. ಅಚ್ಮೋನಿನ ಮೇಲೆ ಈಜಿಪ್ಟಿನ ನದಿಗೆ ಬಂದು ಸಮುದ್ರತೀರದಲ್ಲಿ ಮುಕ್ತಾಯಗೊಳ್ಳುತ್ತದೆ. ಇದು ಅದರ ತೆಂಕಣ ಎಲ್ಲೆ. 5 ಜೋರ್ಡನ್ ನದಿಯ ಮುಖದಿಂದ ಲವಣಸಮುದ್ರವೆಲ್ಲ ಅದರ ಪೂರ್ವದಿಕ್ಕಿನ ಎಲ್ಲೆ ಆಗಿದೆ. 6 ಅದರ ಉತ್ತರ ದಿಕ್ಕಿನ ಎಲ್ಲೆ ಜೋರ್ಡನ್ ನದಿಯು ಲವಣಸಮುದ್ರವನ್ನು ಕೂಡುವ ಸ್ಥಳದಿಂದ ತೊಡಗಿ ಬೇತ್ ಹೊಗ್ಲಾ, ಬೇತ್ ಅರಾಬದ ಉತ್ತರ ಪ್ರಾಂತ್ಯ, ರೂಬೇನನ ಮಗ ಬೋಹನನ ಬಂಡೆ, ಆಕೋರಿನ ಕಣಿವೆ 7 ಇವುಗಳ ಮೇಲೆ ದೆಬೀರಿಗೆ ಹೋಗುತ್ತದೆ. ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ನದಿಯ ದಕ್ಷಿಣದಲ್ಲಿರುವ ಅದುಮೀಮಿಗೆ ಹೋಗುವ ದಾರಿಯ ಎದುರಿನಲ್ಲಿರುವ ಗಿಲ್ಗಾಲ್, ಏನ್ ಷೆಮೆಷ್ ಎನ್ನುವ ಬುಗ್ಗೆ, ಏನ್ ರೋಗೆಲ್ ಇವುಗಳ ಮೇಲೆ 8 ಬೆನ್ ಹಿನ್ನೋಮನ ಕಣಿವೆಗೆ ಹೊಗುತ್ತದೆ. ಅಲ್ಲಿಂದ ಅದು ಜೆರುಸಲೇಮ್ ನಗರವು ಕಟ್ಟಲ್ಪಟ್ಟಿರುವ ಯೆಬೂಸಿಯರ ಬೆಟ್ಟದ ದಕ್ಷಿಣ ಮಾರ್ಗವಾಗಿ ಹಿನ್ನೋಮ್ ಕಣಿವೆಯ ಪಶ್ಚಿಮದಲ್ಲೂ ರೆಫಾಯೀಮ್ ಕಣಿವೆಯ ಉತ್ತರದಲ್ಲೂ ಇರುವ ಬೆಟ್ಟದ ತುದಿಗೆ ಹೋಗುತ್ತದೆ. 9 ಅದು ಆ ಬೆಟ್ಟದ ತುದಿಯಿಂದ ಮುಂದೆ ನೆಪ್ತೋಹ ಬುಗ್ಗೆ, ಎಫ್ರೋನ್ ಬೆಟ್ಟದ ನಗರಗಳು ಇವುಗಳ ಮೇಲೆ ಕಿರ್ಯತ್ಯಾರೀಮ್ ಎನಿಸಿಕೊಳ್ಳುವ ಬಾಲಾ ಎಂಬ ಊರಿಗೆ ಹೋಗುತ್ತದೆ. 10 ಅಲ್ಲಿಂದ ಪಶ್ಚಿಮದಲ್ಲಿ ಇರುವ ಸೇಯಿರ್ ಬೆಟ್ಟದ ಕಡೆಗೆ ತಿರುಗಿಕೊಂಡು ಕೆಸಾಲೋನ್ ಎನಿಸಿಕೊಳ್ಳುವ ಯಾರೀಮ್ ಬೆಟ್ಟದ ಉತ್ತರಮಾರ್ಗವಾಗಿ ಇಳಿಯುತ್ತಾ ಬೇತ್ ಷೆಮೆಷಿಗೂ ಅಲ್ಲಿಂದ ತಿಮ್ನಾ ಊರಿಗೂ ಬಂದು 11 ಅಲ್ಲಿಂದ ಉತ್ತರ ದಿಕ್ಕಿನಲ್ಲಿರುವ ಎಕ್ರೋನ್ ಗುಡ್ಡಕ್ಕೆ ಹೋಗಿ ಶಿಕ್ಕೆರೋನಿಗೆ ತಿರುಗಿಕೊಂಡು ಬಾಲಾಗುಡ್ಡದ ಮೇಲೆ ಯೆಬ್ನೇಲಿಗೆ ಹೋಗಿ ಸಮುದ್ರ ತೀರದಲ್ಲಿ ಮುಗಿಯುತ್ತದೆ. 12 ಮಹಾಸಾಗರದ ತೀರವೇ ಪಶ್ಚಿಮ ಎಲ್ಲೆ, ಯೆಹೂದ ಗೋತ್ರಗಳ ನಾಡಿನ ಸುತ್ತಣ ಎಲ್ಲೆಗಳು ಇವೇ. ಕಾಲೇಬನಿಗೆ ಕೊಡಲಾದ ಹೆಬ್ರೋನ್ ( ನ್ಯಾಯ. 1:11-15 ) 13 ಯೆಹೋಶುವನು ಸರ್ವೇಶ್ವರನ ಅಪ್ಪಣೆಯಂತೆ ಯೆಫುನ್ನೆಯ ಮಗ ಕಾಲೇಬನಿಗೆ ಯೆಹೂದ ಕುಲದವರ ನಡುವೆ ಅನಾಕನ ತಂದೆ ಆದ ಅರ್ಬನ ನಗರವಾಗಿದ್ದ ಹೆಬ್ರೋನನ್ನು ಕೊಟ್ಟನು. 14 ಕಾಲೇಬನು ಶೇಷೈ, ಅಹೀಮನ್, ತಲ್ಮೈ ಎಂಬ ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟನು. 15 ಅನಂತರ ಅವನು ಹೊರಟು ಕಿರ್ಯತ್ ಸೇಫೆರ್ ಎನ್ನಿಸಿಕೊಳ್ಳುತ್ತಿದ್ದ ದೆಬೀರಿನ ನಿವಾಸಿಗಳೊಡನೆ ಯುದ್ಧಮಾಡಿದನು. 16 ಅವನು, “ಕಿರ್ಯತ್ ಸೇಫೆರದ ಮೇಲೆ ದಾಳಿಮಾಡಿ ಹಿಡಿದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆಮಾಡಿಕೊಡುತ್ತೇನೆ,” ಎಂದನು. 17 ಕೆನಜನ ಮಗನೂ ಕಾಲೇಬನ ತಮ್ಮನೂ ಆದ ಒತ್ನಿಯೇಲನು ಅದರ ಮೇಲೆ ದಾಳಿಮಾಡಿ ತೆಗೆದುಕೊಂಡನು. ಅವನಿಗೆ ಕಾಲೇಬನು ತನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆ ಮಾಡಿಕೊಟ್ಟನು. 18 ಆಕೆ ಮನೆ ಸೇರಿದಾಗ ತನ್ನ ತಂದೆಯ ಬಳಿ ಭೂಮಿಯನ್ನು ಕೇಳಬೇಕೆಂದು ಒತ್ನಿಯೇಲನು ಅವಳನ್ನು ಪ್ರೋತ್ಸಾಹಿಸಿದನು. ಅಂತೆಯೇ ಅವಳು ಹೊರಟು ಹೇಸರಗತ್ತೆ ಮೇಲಿಂದ ಇಳಿದದ್ದೇ ಕಾಲೇಬನು, “ನಿನಗೇನು ಬೇಕು?” ಎಂದು ಕೇಳಿದನು. 19 ಅವಳು, “ನನಗೊಂದು ಕೊಡುಗೆ ಬೇಕು. ನನ್ನನ್ನು ಬೆಂಗಾಡಿಗೆ ಕೊಟ್ಟುಬಿಟ್ಟಿದ್ದೀರಲ್ಲವೆ? ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡಿ,” ಎಂದಳು. ಆಗ ಕಾಲೇಬನು ಅವಳಿಗೆ ಬುಗ್ಗೆಗಳಿದ್ದ ಮೇಲಣ ಹಾಗೂ ಕೆಳಗಣ ಸ್ಥಳಗಳನ್ನು ಕೊಟ್ಟನು. ಯೆಹೂದ ಕುಲದವರಿಗೆ ದೊರೆತ ನಗರಗಳು ಹಾಗೂ ಗ್ರಾಮಗಳು 20 ಯೆಹೂದ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಿನ ವಿವರ: 21 ಎದೋಮ್ ಪ್ರಾಂತ್ಯವು ಮೇರೆಯಾಗಿರುವ ದಕ್ಷಿಣ ಭಾಗದಲ್ಲಿ ಕಬ್ಜೇಲ್, ಎದೆರ್, ಯಾಗೂರ್, 22-23 ಕೀನಾ, ದೀಮೋನಾ, ಅದಾದಾ, ಕೆದೆಷ್, ಹಾಚೋರ್, ಇತ್ನಾನ್, 24 ಜೀಪ್, ಟೆಲೆಮ್, ಬೆಯಾಲೋತ್, 25 ಹಾಚೋರ್ ಹದತ್ತಾ, ಹಾಚೋರ್ ಎಂಬವ 26 ಕಿರ್ಯೋತ್, ಹೆಚ್ರೋನ್, ಅಮಾಮ್, ಶೆಮ, 27 ಮೋಲಾದ, ಹಚರ್ ಗದ್ದಾ, ಹೆಷ್ಮೋನ್, ಬೆತ್ಪೆಲೆಟ್, ಹಚರ್ ಷೂವಾಲ್, 28 ಬೇರ್ಷಬ, ಬಿಜ್ಯೋತ್ಯಾ, 29-30 ಬಾಲಾ, ಇಯ್ಯೀಮ್, ಎಚೆಮ್, ಎಲ್ಟೋಲದ್, ಕೆಸೀಲ್, ಹೊರ್ಮಾ, 31 ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ 32 ಲೆಬಾವೋತ್, ಶಿಲ್ಹೀಮ್, ಆಯಿನ್, ರಿಮ್ಮೋನ್ ಎಂಬ ಇಪ್ಪತ್ತೊಂಬತ್ತು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು. 33 ಇಳಿಜಾರು ಪ್ರದೇಶದಲ್ಲಿ 34 ಎಷ್ಟಾವೋಲ್, ಚೊರ್ಗಾ, ಅಶ್ನಾ, ಜನೋಹ, ಎಂಗನ್ನೀಮ್, 35 ತಪ್ಪೂಹ, ಏನಾಮ್, ಯರ್ಮೂತ್, 36 ಅದುಲ್ಲಾಮ್, ಸೋಕೋ, ಅಜೇಕಾ, ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಹದಿನಾಲ್ಕು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು. 37-38 ಚೆನಾನ್, ಹದಾಷಾ, ಮಿಗ್ದಲ್ಗಾದ್, ದಿಲಾನ್, ಮಿಚ್ಪೆ, ಯೊಕ್ತೇಲ್, 39 ಲಾಕೀಷ್, ಬೊಚ್ಕತ್, ಎಗ್ಲೋನ್, 40 ಕಬ್ಬೋನ್, ಲಹ್ಮಾಮ್, ಕಿತ್ಲೀಷ್, ಗೆದೇರೋತ್, ಬೇತ್ ದಾಗೋನ್, ನಾಮಾ, 41 ಮಕ್ಕೇದಾ ಎಂಬ ಹದಿನಾರು ನಗರಗಳು, ಅವುಗಳ ಗ್ರಾಮಗಳು; 42-43 ಲಿಬ್ನಾ, ಎತೆರ್, ಅಷಾನ್, ಇಫ್ತಾಹ, 44 ಆಶ್ನಾ, ನೆಚೀಬ್, ಕೆಯೀಲಾ, ಅಕ್ಜೀಬ್, ಮಾರೇಷಾ ಎಂಬ ಒಂಬತ್ತು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು. 45 ಎಕ್ರೋನ್ ಸಂಸ್ಥಾನ ಮತ್ತು ಅದಕ್ಕೆ ಸೇರಿದ ಗ್ರಾಮ-ನಗರಗಳು; 46 ಎಕ್ರೋನಿನಿಂದ ಸಮುದ್ರದವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳು; 47 ಅಷ್ಡೋದ್ ಸಂಸ್ಥಾನ ಮತ್ತು ಅದರ ಗ್ರಾಮ-ನಗರಗಳು; ಗಾಜಾ ಸಂಸ್ಥಾನ ಹಾಗೂ ಈಜಿಪ್ಟಿನ ನದಿಯ ಹತ್ತಿರದಲ್ಲಿ ಮತ್ತು ಮಹಾಸಾಗರದ ತೀರದಲ್ಲಿ ಇರುವ ಅದರ ಎಲ್ಲ ಗ್ರಾಮ, ನಗರಗಳು. 48 ಮಲೆನಾಡಿನ ಪ್ರದೇಶದಲ್ಲಿರುವ ಶಾಮೀರ್, ಯತ್ತೀರ್, ಸೋಕೋ, 49-50 ದನ್ನಾ, ದೆಬೀರ್ ಎಂಬ ಕಿರ್ಯತ್ ಸನ್ನಾ, ಅನಾಬ್, 51 ಎಷ್ಟೆಮೊ, ಅನೀಮ್, ಗೊಷೆನ್, ಹೋಲೋನ್, ಗಿಲೋ ಎಂಬ ಹನ್ನೊಂದು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು. 52 ಅರಬ್, ದೂಮಾ, ಎಷಾನ್, 53-54 ಯಾನೂಮ್, ಬೇತ್ ತಪ್ಪೂಹ, ಅಫೇಕಾ, ಹುಮ್ತಾ, ಹೆಬ್ರೋನ್ ಎಂಬ ಕಿರ್ಯತ್ ಅರ್ಬ, ಚಿಯೋರ್ ಎಂಬ ಒಂಬತ್ತು ನಗರಗಳು, ಅವುಗಳ ಗ್ರಾಮಗಳು. 55 ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ, 56-57 ಇಜ್ರೇಲ್, ಯೊಗ್ದೆಯಾಮ್, ಜನೋಹ, ಕಯಿನ್, ಗಿಬೆಯಾ, ತಿಮ್ನಾ ಎಂಬ ಹತ್ತು ನಗರಗಳು ಮತ್ತು ಅವುಗಳ ಗ್ರಾಮಗಳು. 58 ಹಲ್ಪೂಲ್, ಬೇತ್ ಚೂರ್, ಗೆದೋರ್, 59 ಮಾರಾತ್, ಬೇತನೋತ್ ಎಲ್ಟೆಕೋನ್ ಎಂಬ ಆರು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು 60 ಕಿರ್ಯಾತ್ಯಾರಿಮ್ ಅನ್ನಿಸಿಕೊಳ್ಳುವ ಕಿರ್ಯತ್ ಬಾಳ್, ರಬ್ಬಾ ಎಂಬ ಎರಡು ನಗರಗಳು ಮತ್ತು ಅವುಗಳ ಗ್ರಾಮಗಳು. 61 ಮರುಭೂಮಿಯಲ್ಲಿರುವ ಬೇತ್ ಅರಾಬಾ, 62 ಮಿದ್ದೀನ್, ಸೆಕಾಕಾ, ನಿಬಾನ್ ಉಪ್ಪಿನಪಟ್ಟಣ, ಏಂಗೇದಿ ಎಂಬ ಆರು ನಗರಗಳು ಮತ್ತು ಅವುಗಳ ಗ್ರಾಮಗಳು. 63 ಜೆರುಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಯೆಹೂದ ಕುಲದವರಿಂದ ಆಗದೆ ಹೋಯಿತು. ಆದುದರಿಂದ ಅವರು ಇಂದಿನವರೆಗೂ ಯೆಹೂದ ಕುಲದವರೊಡನೆ ಜೆರುಸಲೇಮಿನಲ್ಲೇ ವಾಸವಾಗಿದ್ದಾರೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India