Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೂದನು INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ತಾವು ಕ್ರಿಸ್ತಯೇಸುವಿನ ಪ್ರಾಮಾಣಿಕ ಅನುಯಾಯಿಗಳೆಂದು ನಟಿಸುತ್ತಿದ್ದ ಸುಳ್ಳುಬೋಧಕರನ್ನು ಕುರಿತು ವಿಶ್ವಾಸಿಗಳಿಗೆ ಎಚ್ಚರಿಕೆ ನೀಡಲೆಂದೇ ಭಕ್ತ ಯೂದನು ಈ ಪತ್ರವನ್ನು ಬರೆದಿದ್ದಾನೆ. ದೈವಾಜ್ಞೆಯನ್ನು ಮೀರಿ ನಡೆಯುವವರು ಘೋರ ದಂಡನೆಗೆ ಒಳಗಾಗುತ್ತಾರೆ ಎಂಬುದನ್ನು ಹಳೆಯ ಒಡಂಬಡಿಕೆಯ ಕೆಲವು ದೃಷ್ಟಾಂತಗಳಿಂದ ಸ್ಪಷ್ಟೀಕರಿಸುತ್ತಾನೆ. ದೇವರು ತಮ್ಮ ಜನರಿಗೆ ಅನುಗ್ರಹಿಸಿರುವ ವಿಶ್ವಾಸವನ್ನು ಕಾಪಾಡಿಕೊಳ್ಳಲು ಉತ್ಸಾಹದಿಂದ ಹೋರಾಡಬೇಕೆಂದು ಓದುಗರಿಗೆ ಕರೆಕೊಡಲಾಗಿದೆ.
ಯೂದನ ಈ ಪತ್ರವು ಪೇತ್ರನು ಬರೆದ ಎರಡನೆಯ ಪತ್ರವನ್ನು ಬಹುಮಟ್ಟಿಗೆ ಹೋಲುತ್ತದೆ.
ಪರಿವಿಡಿ
ಪೀಠಿಕೆ 1-2
ಸುಳ್ಳುಬೋಧಕರ ದುರ್ನಡತೆ, ದುರ್ಬೋಧನೆ, ದುರಂತ 3-16
ವಿಶ್ವಾಸವನ್ನು ಕಾದಿರಿಸಿಕೊಳ್ಳಲು ಕರೆ 17-23
ಆಶೀರ್ವಚನ 24-25

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು